ಟ್ರ್ಯಾಕ್ಟರ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬೆಳಗಾವಿ ನಗರದ ಉದ್ಯಮಬಾಗ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ತಮ್ಮ ಟ್ರ್ಯಾಕ್ಟರ್ ಕಳುವಾದ ಬಗ್ಗೆ ಉದ್ಯಮಬಾಗದ ಚನ್ನಮ್ಮ ನಗರದ ಒಂದನೇ ಹಂತದ ನಿವಾಸಿ ಚಂದ್ರಶೇಖರ ಅಗಸಗಿ ಅವರು, ಉದ್ಯಮಬಾಗ್ ಠಾಣೆಯಲ್ಲಿ ಭಾನುವಾರ ದೂರು ದಾಖಲಿಸಿದ್ದರು.
ಬೆಳಗಾವಿ ತಾಲ್ಲೂಕಿನ ಜೈತುನಮಾಳ ಗ್ರಾಮದ ಮಲ್ಲೇಶ ಸಿದ್ದಪ್ಪ ಕುರಬಗಟ್ಟಿ(22), ಮಚ್ಚೆಯ ತೋಹಿದ್ ಇಸ್ಲಾಂ ಚಂದಗಡಕರ(19) ಬಂಧಿತರು. ಅವರಿಂದ ₹10.50 ಲಕ್ಷ ಮೌಲ್ಯದ ಎರಡು ಟ್ರ್ಯಾಕ್ಟರ್ ವಶಕ್ಕೆ ಪಡೆಯಲಾಗಿದೆ.