ಬೆಳಗಾವಿ ಜಿಲ್ಲೆಯ ಸವದತ್ತಿಯ ಜಾಕ್ವೆಲ್ ಹತ್ತಿರ ಮಲಪ್ರಭಾ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ್ದ ಗದಗನ ವೀರೇಶ ಮರೆಪ್ಪ ಕಟ್ಟಿಮನಿ (13) ಮತ್ತು ಸಚಿನ್ ಗೋಪಾಳ ಕಟ್ಟಿಮನಿ (14) ನೀರು ಪಾಲಾಗಿದ್ದಾರೆ. ಸಚಿನ್ ಶವ ಪತ್ತೆಯಾಗಿದ್ದು, ವೀರೇಶನ ಪತ್ತೆಗೆ ಶೋಧ ಮುಂದುವರೆದಿದೆ.
‘ಕುಟುಂಬ ಸಮೇತ ಗದಗನಿಂದ ಬಂದು ಯಲ್ಲಮ್ಮ ದೇವಿದರ್ಶನ ಪಡೆದು, ಇಬ್ಬರು ಬಾಲಕರು ಜಾಕ್ವೆಲ್ ಬಳಿ ಇದ್ದರು. ಸ್ನಾನಕ್ಕೆಂದು ನದಿಗೆ ಇಳಿದಾಗ, ಇಬ್ಬರೂ ಈಜು ಬಾರದೆ ಮುಳುಗಿದರು’ ಎಂದು ಸವದತ್ತಿ ಠಾಣೆ ಪೊಲೀಸರು ತಿಳಿಸಿದ್ದಾರೆ.