ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ದೊಡ್ಡಮಂಗಡಿ ಗ್ರಾಮದ ಬಳಿ ಅಕಾಲಿಕ ಗಾಳಿ, ಮಳೆ ಹಿನ್ನೆಲೆಯಲ್ಲಿ ಕ್ರೂಷರ್ ವಾಹನದ ಮೇಲೆ ಬಿದ್ದ ಮರ ಪರಿಣಾಮ ಮದುವೆ ನಿಶ್ಚಯಕ್ಕೆ ಹೊರಟಿದ್ದ ಪ್ರವಾಸಿಗರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ದೊಡ್ಡಮಂಗಡಿ ಗ್ರಾಮದ ಬಳಿ ಧಾರವಾಡದಿಂದ ಹಳೇತೋರಗಲ್ಲ ಗ್ರಾಮಕ್ಕೆ ಮದುವೆ ನಿಶ್ಚಯ ಮಾತುಕತೆಗೆ ವಾಹನದ ಮೇಲೆ ಅಕಾಲಿಕ ಮಳೆ ಹಿನ್ನೆಲೆ ವಾಹನದ ಮೇಲೆ ಮರ ಬಿದ್ದಿದೆ. ಘಟನೆಯಲ್ಲಿ ಕ್ರೂಷರ್ ವಾಹನದಲ್ಲಿ 10ಕ್ಕೂ ಹೆಚ್ಚು ಜನರಿಗೆ ಗಾಯವಾಗಿವೆ. ಗಾಯಾಳುಗಳನ್ನು ರಾಮದುರ್ಗ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ರಾಮದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.