ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಿಂಚಣಿ ಗ್ರಾಮದ ಹೊರವಲಯದಲ್ಲಿ ಕತ್ತೆ ಕಿರುಬುವೊಂದು ಪ್ರತ್ಯಕ್ಷವಾಗಿದ್ದು, ಇದರಿಂದಾಗಿ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.
ಚಿಂಚಣಿ ಗ್ರಾಮದ ಹೊಲ ಗದ್ದೆಗಳಲ್ಲಿ ಕತ್ತೆ ಕಿರಬು ಓಡಾಡುತ್ತಿದೆ. ಈ ಕತ್ತೆ ಕಿರಬುನ್ನು ಕಂಡ ಜನರು ಬೆಚ್ಚಿಬಿದ್ದಿದ್ದಾರೆ. ಈ ಕತ್ತೆ ಕಿರುಬು ಭಯದ ವಾತಾವರಣವನ್ನು ಸೃಷ್ಠಿಸಿದೆ. ಇದರಿಂದಾಗಿ ಯಾವುದೇ ರೀತಿಯಾದ ಹಾನಿಯಾಗುವುದರ ಮೊದಲು ಅರಣ್ಯ ಇಲಾಖೆಯ ಇಲಾಖೆಯ ಅಧಿಕಾರಿಗಳು ಕತ್ತೆ ಕಿರುಬನ್ನು ಸೆರೆಹಿಡಿಯಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಕತ್ತೆ ಕಿರುಬು ಓಡಾಡುವ ದೃಶ್ಯವನ್ನು ಪ್ರತ್ಯಕದರ್ಶಿ ಸಾಗರ ಅವರು ಕಂಡಿದ್ದಾರೆ.