ರಾಜ್ಯದಲ್ಲಿ ನಡೆಸಲಾಗುತ್ತಿರುವ ಪರಿಶಿಷ್ಟ ಜಾತಿಗಳ ಸಮೀಕ್ಷೆಯಲ್ಲಿ ಪ್ರತಿಯೊಬ್ಬರೂ ತಮ್ಮ ಮೂಲ ಜಾತಿಯನ್ನೇ ಬರೆಯಿಸಬೇಕು’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ರಾಜ್ಯ ಘಟಕದ ಅಧ್ಯಕ್ಷ ಬೆಳಗಾವಿ ನಗದಲ್ಲಿ ನಡೆದ ಮಾವಳ್ಳಿ ಶಂಕರ ಸುದ್ದಿಘೋಷ್ಠಿಯಲ್ಲಿ ಹೇಳಿದರು.
ಸಮೀಕ್ಷೆಯಲ್ಲಿ ಸುಳ್ಳು ಹೇಳುವುದರಿಂದ ಯಾವುದೇ ಪ್ರಯೋಜನವಿಲ್ಲ. ಹಾಗಾಗಿ ಮಾದಿಗರು, ಲಂಬಾಣಿಗರು ಸೇರಿದಂತೆ ಎಲ್ಲರೂ ತಮ್ಮ ಮೂಲ ಜಾತಿ ಬರೆಯಿಸಬೇಕು. ಇದರಿಂದ ತಮ್ಮ ಸಮುದಾಯದ ಕುರಿತು ನಿಖರವಾದ ದತ್ತಾಂಶ ಗೊತ್ತಾಗುತ್ತದೆ. ಮುಂದೆ ಸರ್ಕಾರಿ ಸೌಲಭ್ಯ ಪಡೆಯಲು ತುಂಬಾ ಅನುಕೂಲವಾಗುತ್ತದೆ’ ಎಂದರು.
‘ಗ್ರಾಮೀಣ ಭಾಗದ ಜನರು ಸಮೀಕ್ಷೆಯಲ್ಲಿ ತಮ್ಮ ಮೂಲ ಜಾತಿ ಬರೆಯಿಸಲು ಹಿಂಜರಿಯುವುದಿಲ್ಲ. ಆದರೆ, ನಗರ ವ್ಯಾಪ್ತಿಯಲ್ಲಿ ಬಾಡಿಗೆ ಮನೆಗಳಲ್ಲಿ ವಾಸಿಸುವವರು ಹಿಂದೇಟು ಹಾಕುತ್ತಾರೆ. ಅಂಥವರು ಆನ್ ಲೈನ್ ಮೂಲಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ತಿಳಿಸಿದರು.
‘ಶಾಶ್ವತ ಹಿಂದುಳಿದ ವರ್ಗಗಳ ಆಯೋಗವು ಮನೆ-ಮನೆಗೆ ತೆರಳಿ, ಸಮೀಕ್ಷೆ ನಡೆಸಿ ರೂಪಿಸಿದ ಅಧ್ಯಯನ ವರದಿ ಬಗ್ಗೆ ಕೆಲವು ಸಚಿವರು ಆಕ್ಷೇಪ ಎತ್ತಿದ್ದಾರೆ. ಅದರ ಸಾಧಕ-ಬಾಧಕ ಅಂಶಗಳ ಬಗ್ಗೆ ಚರ್ಚೆಯಾಗಲಿ. ಆದರೆ, ಮೊದಲು ವರದಿ ಜಾರಿಗೊಳಿಸಬೇಕು’ ಎಂದು ತಿಳಿಸಿದರು.