ಝಾಕಿರ್ ನದಾಫ್ ಅವರನ್ನು ಧಾರವಾಡ ರಂಗಾಯಣದ ನೂತನ ನಿರ್ದೇಶಕರಾಗಿ ಆಯ್ಕೆ ಮಾಡಲಾಗಿದೆ. ನಿರ್ದೇಶಕರಾಗಿದ್ದ ರಾಜು ತಾಳಿಕೋಟಿ ಅವರ ನಿಧನದ ನಂತರ ತೆರವಾಗಿದ್ದ ಸ್ಥಾನಕ್ಕೆ ಈ ನೇಮಕ ನಡೆದಿದೆ.
ಬೆಳಗಾವಿ ಜಿಲ್ಲೆಯ ಸವದತ್ತಿ ಮೂಲದ ಝಾಕಿರ್ ನದಾಫ್ ಅವರು ರಂಗಭೂಮಿ ಕ್ಷೇತ್ರದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ್ದು, ವಿಶೇಷವಾಗಿ “ಪರಸಗಡ ನಾಟಕೋತ್ಸವ” ಮೂಲಕ ರಾಜ್ಯದಾದ್ಯಂತ ಗಮನ ಸೆಳೆದಿದ್ದಾರೆ. ಅವರ ಆಯ್ಕೆಗೆ ರಂಗಭೂಮಿಯ ಕಲಾವಿದರು, ಸಾಹಿತ್ಯ ವಲಯದವರು ಹರ್ಷ ವ್ಯಕ್ತಪಡಿಸಿದ್ದಾರೆ.
ಈ ನೇಮಕದಿಂದ ಧಾರವಾಡ ರಂಗಾಯಣಕ್ಕೆ ಹೊಸ ಚೈತನ್ಯ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದ್ದು, ನೂತನ ನಿರ್ದೇಶಕರಿಂದ ಹೊಸ ಪ್ರಯೋಗಗಳು ಮತ್ತು ಗುಣಮಟ್ಟದ ನಾಟಕಗಳ ನಿರೀಕ್ಷೆ ಹೆಚ್ಚಾಗಿದೆ.




