ಬಳ್ಳಾರಿ | 48 ಮಂದಿಗೆ ಗುಲಾಬಿ ಕಣ್ಣು ರೋಗ; ಎಚ್ಚರ ವಹಿಸುವಂತೆ ವೈದ್ಯಾಧಿಕಾರಿ ಸೂಚನೆ

Date:

Advertisements

ಕೋವಿಡ್‌ ರೀತಿಯಲ್ಲಿ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಕಂಜಂಕ್ಟಿವೈಟಿಸ್(ಗುಲಾಬಿ ಕಣ್ಣು) ರೋಗ ಕಂಡುಬಂದಿದ್ದು, ಬಳ್ಳಾರಿ ಜಿಲ್ಲೆಯ ಐದು ತಾಲೂಕುಗಳಲ್ಲಿ ಸುಮಾರು 48 ಮಂದಿಗೆ ಕಾಣಿಸಿಕೊಂಡಿದೆ. ಕಣ್ಣಿನ ಉರಿ ಊತದ ರೋಗದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಳ್ಳಾರಿ ನಗರ ಮತ್ತು ತಾಲೂಕಿನಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ ಎಂದು ಜಿಲ್ಲಾ ಕುಷ್ಠರೋಗ ಅಧಿಕಾರಿ ಹಾಗೂ ಅಂಧತ್ವ ನಿಯಂತ್ರಣಾಧಿಕಾರಿ ಡಾ. ವೀರೇಂದ್ರ ಅವರು ತಿಳಿಸಿದ್ದಾರೆ.

ಗುಲಾಬಿ ಕಣ್ಣು ಅಥವಾ ಕಂಜಂಕ್ಟಿವೈಟಿಸ್ ಬಗ್ಗೆ ತಿಳಿಯಬೇಕಾದ ವಿಷಯಗಳು

ಕಂಜಂಕ್ಟಿವೈಟಿಸ್ ಗುಲಾಬಿ ಕಣ್ಣಿನ ರೋಗದ ಒಂದು ವಿಧವಾಗಿದ್ದು, ಇದು ಅಲರ್ಜಿ ವರ್ತನೆಯಿಂದ ಉಂಟಾಗುತ್ತದೆ. ಗುಲಾಬಿ ಕಣ್ಣು ಎಂದೂ ಕರೆಯಲಾಗುವ ಕಂಜಂಕ್ಟಿವೈಟಿಸ್, ಕಣ್ಣುಗುಡ್ಡೆಯ (ಕಣ್ಣುಗುಡ್ಡೆಯ ಬಿಳಿಭಾಗ) ಉರಿಯೂತ ಅಥವಾ ಸೋಂಕನ್ನು ಸೂಚಿಸುತ್ತದೆ. ಕಣ್ಣಿನಲ್ಲಿರುವ ಚಿಕ್ಕ ರಕ್ತನಾಳಗಳು ಉರಿಯೂತಕ್ಕೆ ಒಳಗಾದಾಗ, ಅವು ಹೆಚ್ಚು ಗೋಚರವಾಗುತ್ತವೆ ಮತ್ತು ಬಿಳಿಭಾಗ ಗುಲಾಬಿ ಅಥವಾ ಕೆಂಪುಬಣ್ಣಕ್ಕೆ ತಿರುಗುತ್ತದೆ. ಇತ್ತೀಚೆಗೆ, ಗುಲಾಬಿ ಕಣ್ಣು ಕೋವಿಡ್-19ಗೆ ಸಂಬಂಧಿಸಿದ್ದು, ಸೋಂಕಿಗೆ ಒಳಗಾದಾಗ ಕೂಡಲೇ ತಜ್ಞವೈದ್ಯರ ನೆರವು ಪಡೆಯಬೇಕೆಂದು ತಿಳಿಸಿದ್ದಾರೆ.

Advertisements

ಕಂಜಂಕ್ಟಿವೈಟಿಸ್ ಲಕ್ಷಣಗಳು : ಒಂದು ಅಥವಾ ಎರಡೂ ಕಣ್ಣುಗಳಲ್ಲಿ ಕಂಡುಬರುತ್ತದೆ. ಇದು ಕಣ್ಣು ಕೆಂಪಾಗುವುದು, ಕೆರೆತ, ನೋವು ಮತ್ತು ಕಣ್ಣಿನಲ್ಲಿ ಅಸಹನೀಯ ಭಾವ, ಕಣ್ಣುರೆಪ್ಪೆಗಳ ಊತ ಮತ್ತು ಬೆಳಕಿಗೆ ಸೂಕ್ಷ್ಮ ಸಂವೇದನೆಯನ್ನು ಒಳಗೊಂಡಿದೆ. ರಾತ್ರಿಯಲ್ಲಿ ಕಣ್ಣಿನಿಂದ ದಪ್ಪನೆಯ ಅಥವಾ ನೀರಿನಂತಹ ಸ್ರಾವ ಬರುತ್ತದೆ ಮತ್ತು ಇದು ಕಣ್ಣು ತೆರೆಯಲು ಕಷ್ಟವಾಗುವಂತೆ ಮಾಡುತ್ತದೆ.

ಕಂಜಂಕ್ಟಿವೈಟಿಸ್ ವಿಧಗಳು : ಗುಲಾಬಿ ಕಣ್ಣು ಸಾಮಾನ್ಯವಾಗಿ ಸೋಂಕು (ಬ್ಯಾಕ್ಟೀರಿಯಾ ಅಥವಾ ವೈರಸ್) ಅಥವಾ ಅಲರ್ಜಿ ವರ್ತನೆಯಿಂದ ಉಂಟಾಗುತ್ತದೆ. ಗುಲಾಬಿ ಕಣ್ಣು ರೋಗ ದೃಷ್ಟಿಶಕ್ತಿಯ ಮೇಲೆ ಪರಿಣಾಮ ಬೀರುವುದಿಲ್ಲ. ಆದರೆ, ಕಂಜಂಕ್ಟಿವೈಟಿಸ್ ಸಾಂಕ್ರಾಮಿಕವಾಗಿದ್ದು, ಇದು ಹರಡದಂತೆ ತಡೆಯುವುದು ಮುಖ್ಯ. ವೈರಲ್ ಕಂಜಂಕ್ಟಿವೈಟಿಸ್ ಅತ್ಯಂತ ಸಾಮಾನ್ಯವಾದ ಮತ್ತು ಸಾಂಕ್ರಾಮಿಕ ವಿಧದ ಕಂಜಂಕ್ಟಿವೈಟಿಸ್ ಆಗಿದೆ. ಇದು ಕೆಲವೊಮ್ಮೆ ಶಾಲೆಗಳಲ್ಲಿ ಹಾಗೂ ಇತರ ಜನಜಂಗುಳಿಯ ಸ್ಥಳಗಳಲ್ಲಿ ಬೇಗನೆ ಹರಡುತ್ತದೆ. ಇದು ಸಾಮಾನ್ಯವಾಗಿ ಕಣ್ಣು ಉರಿ, ಕೆಂಪಾದ ಕಣ್ಣು ಮತ್ತು ನೀರಿನಂತಹ ಸ್ರಾವವನ್ನು ಹೊಂದಿರುತ್ತದೆ. ಬ್ಯಾಕ್ಟೀರಿಯಲ್ ಕಂಜಂಕ್ಟಿವೈಟಿಸ್ ಅತ್ಯಂತ ಹೆಚ್ಚು ಸಾಂಕ್ರಾಮಿಕವಾಗಿದೆ.

ಕೆಂಪಾದ ಕಣ್ಣು ಮತ್ತು ಅಂಟಿನಂತಹ ಕೀವಿನ ಸ್ರಾವ, ಇತರ ಲಕ್ಷಣಗಳೊಂದಿಗೆ (ನೆಗಡಿ, ಉಸಿರಾಟದ ಸೋಂಕು ಅಥವಾ ಗಂಟಲು ಉರಿ) ಕಂಡುಬರುತ್ತದೆ. ಕೊಳಕಾದ ಕಾಂಟ್ಯಾಕ್ಟ್ ಲೆನ್ಸ್ ಬಳಸುವುದರಿಂದ ಬ್ಯಾಕ್ಟೀರಿಯಾಗೆ ಒಡ್ಡಿಕೊಳ್ಳುವಿಕೆ ಉಂಟಾಗುತ್ತದೆ. ಕಂಜಂಕ್ಟಿವೈಟಿಸ್ ಇದು ಸಾಂಕ್ರಾಮಿಕವಲ್ಲ. ಆದರೆ ಕಣ್ಣು ಹೆಚ್ಚು ಕೆರೆತ, ಕೆಂಪಾಗುವುದು ಮತ್ತು ನೀರಿನಿಂದ ತುಂಬಿರುವಂತೆ ಕಾಣುತ್ತದೆ, ಕಣ್ಣಿನ ರೆಪ್ಪೆಗಳು ಊದಿದಂತಾಗಿ, ಉರಿಯ ಅನುಭವವೂ ಆಗಬಹುದು. ಅಲರ್ಜಿಯಾದ ಗುಲಾಬಿ ಕಣ್ಣಿಗೆ ಪ್ರಮುಖ ಅಸಹನೆಕಾರಕಗಳೆಂದರೆ ಪರಾಗ, ಹೊಗೆ, ಕಾರಿನ ಹೊಗೆ, ಈಜುಕೊಳದ ಕ್ಲೋರಿನ್ ಅಥವಾ ಇತರ ರಾಸಾಯನಿಕ ವಸ್ತುಗಳೇ ಆಗಿವೆ.

ಕಂಜಂಕ್ಟಿವೈಟಿಸ್‌ಗೆ ಚಿಕಿತ್ಸೆಗಳು

ಗುಲಾಬಿ ಕಣ್ಣಿಗೆ ಚಿಕಿತ್ಸೆಗಳು ಅದರ ಹಿಂದಿನ ಕಾರಣವನ್ನು ಅವಲಂಬಿಸಿರುತ್ತವೆ. ಯಾವುದೇ ಅಲರ್ಜಿ ಅಥವಾ ರಾಸಾಯನಿಕಗಳಿಂದ ಉಂಟಾಗುವ ಗುಲಾಬಿ ಕಣ್ಣು ಕೆಲವು ದಿನಗಳಲ್ಲಿ ಮಾಯವಾಗುತ್ತದೆ. ವೈರಲ್ ಕಂಜಂಕ್ಟಿವೈಟಿಸ್‌ಗೆ ಯಾವುದೇ ಚಿಕಿತ್ಸೆ ಅಗತ್ಯವಿಲ್ಲ ಹಾಗೂ ಏಳರಿಂದ ಹತ್ತು ದಿನಗಳಲ್ಲಿ ಇದೂ ಕೂಡ ಗುಣವಾಗುತ್ತದೆ. ಆದರೆ, ನಿಮಗೆ ಕಣ್ಣಿನಲ್ಲಿ ತೀವ್ರ ನೋವು, ಕಣ್ಣಿನಲ್ಲಿ ಅನ್ಯವಸ್ತು ಸೇರುವುದು, ಮಂದದೃಷ್ಠಿ ಅಥವಾ ಬೆಳಕಿಗೆ ಸಂವೇದನೆ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಬೇಕು.

ಮನೆಯಲ್ಲಿಯೇ ಸೋಂಕು ನಿಯಂತ್ರಿಸುವ ಕೆಲವು ವಿಧಾನಗಳು

  1. ಲಕ್ಷಣಗಳಿಂದ ಉಪಶಮನ ಪಡೆಯಲು ಬಾಧಿತ ಕಣ್ಣಿಗೆ ಬೆಚ್ಚಗಿನ ಬಟ್ಟೆಯಿಂದ ಒತ್ತಬೇಕು
  2. ಕಣ್ಣೀರು ಬರಿಸುವ ಐ ಡ್ರಾಪ್ಸ್ ಬಳಸಿ. ಇದು ಯಾವುದೇ ಶಿಫಾರಸಿಲ್ಲದೇ ಸ್ಥಳೀಯ ಔಷಧಿ ಅಂಗಡಿಗಳಲ್ಲಿ ಲಭ್ಯವಿದ್ದು, ಇದು ಕಂಜಂಕ್ಟಿವೈಟಿಸ್ ಲಕ್ಷಣಗಳಿಂದ ಉಪಶಮನ ನೀಡುತ್ತದೆ.
  3. ಔಷಧಿ ಅಂಗಡಿಗಳಲ್ಲಿ ದೊರೆಯುವ ಅಲರ್ಜಿ ನಿರೋಧಕ ಐ ಡ್ರಾಪ್ಸ್ ಬಳಸಿ ಮತ್ತು ಅಲರ್ಜಿಯಿಂದ ಉಂಟಾದ ʼಪಿಂಕ್ ಐʼ ಲಕ್ಷಣಗಳಿಂದ ಉಪಶಮನ ಪಡೆಯಲು ಕಣ್ಣಿಗೆ ತಂಪಾದ ಬಟ್ಟೆಯಿಂದ ಒತ್ತಬೇಕು.
  4. ಗುಲಾಬಿ ಕಣ್ಣು ಪೂರ್ಣವಾಗಿ ಗುಣವಾಗುವವರೆಗೆ ಕಾಂಟ್ಯಾಕ್ಟ್ ಲೆನ್ಸ್ ಬಳಸಬಾರದು ಮತ್ತು ಸೋಂಕಿನ ನಂತರ ಕಣ್ಣಿನ ಕಾಸ್ಮೆಟಿಕ್ಸ್ ಬದಲಾಯಿಸಬೇಕು.
  5. ಸೋಂಕು ಹರಡದಂತೆ ತಡೆಯಲು, ಕೈಗಳನ್ನು ಆಗಾಗ್ಗೆ ತೊಳೆಯಬೇಕು ಮತ್ತು ಟವೆಲ್ ಅಥವಾ ಐ ಡ್ರಾಪ್‌ಗಳನ್ನು ಇತರರೊಂದಿಗೆ ಹಂಚಿಕೊಳ್ಳಬಾರದು.

ಈ ಸುದ್ದಿ ಓದಿದ್ದೀರಾ? ಗದಗ | ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಹಳ್ಳಿಯ ಸರ್ಕಾರಿ ಶಾಲೆ

ಕಂಜಂಕ್ಟಿವೈಟಿಸ್ ತಡೆಗಟ್ಟುವುದು

ಉತ್ತಮ ನೈರ್ಮಲ್ಯ ಅಭ್ಯಾಸ ಮಾಡಿ: ಕೊಳಕಾದ ಕೈಗಳಿಂದ ಕಣ್ಣುಗಳನ್ನು ಮುಟ್ಟಿಕೊಳ್ಳಬಾರದು. ಕೈಗಳನ್ನು ಚೆನ್ನಾಗಿ ಮತ್ತು ಆಗಾಗ್ಗೆ ತೊಳೆಯಬೇಕು. ಜೊತೆಗೆ ಸ್ವಚ್ಛವಾದ ಟವೆಲ್ ಅಥವಾ ತಾಜಾ ವೈಪ್ಸ್ ಬಳಸಿ ಮುಖ ಒರೆಸಿ. ತಲೆದಿಂಬುಗಳನ್ನು ಆಗಾಗ್ಗೆ ತೊಳೆದು ಬದಲಾಯಿಸಬೇಕು.

ನಿಮ್ಮದೇ ವಸ್ತುಗಳನ್ನು ಬಳಸಿ

ನಿಮ್ಮ ಕಾಸ್ಮೆಟಿಕ್ಸ್, ವಿಶೇಷವಾಗಿ ಐಲೈನರ್, ಮಸ್ಕರಾ ಅಥವಾ ಇತರ ಯಾವುದೇ ಮೇಕಪ್ ಉತ್ಪನ್ನಗಳನ್ನು ಇತರರೊಂದಿಗೆ ಹಂಚಿಕೊಳ್ಳಬಾರದು. ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಸ್ವಚ್ಛಗೊಳಿಸಬೇಕು. ಆಗಾಗ್ಗೆ ಸೋಂಕು ಉಂಟಾಗುತ್ತಿದ್ದರೆ, ಕಾಂಟ್ಯಾಕ್ಟ್ ಲೆನ್ಸ್ ಬದಲಾಯಿಸಬೇಕು. ಏಕೆ ಹೀಗಾಗುತ್ತಿದೆ ಎಂದು ತಿಳಿಯಲು ನೇತ್ರ ವೈದ್ಯರನ್ನು ಸಂಪರ್ಕಿಬೇಕು. ಸರಿಯಾಗಿ ಹೊಂದದ ಅಥವಾ ಅಲಂಕಾರಿಕವಾದ ಕಾಂಟ್ಯಾಕ್ಟ್ ಲೆನ್ಸ್ ಬಳಸಬಾರದು. ಇದು ಗುಲಾಬಿ ಕಣ್ಣಿನ ಅಪಾಯ ಹೆಚ್ಚಿಸುತ್ತದೆ ಎಂದು ಬಳ್ಳಾರಿ ಜಿಲ್ಲಾ ಕುಷ್ಠರೋಗ ಅಧಿಕಾರಿ ಹಾಗೂ ಅಂಧತ್ವ ನಿಯಂತ್ರಣಾಧಿಕಾರಿ ಡಾ. ವೀರೇಂದ್ರ ಅವರು ಪ್ರಕಟಣೆಗೆ ತಿಳಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

ಗದಗ | ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಬಸವರಾಜ ಕಡೇಮನಿ

"ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ...

ಸಕಲೇಶಪುರ | ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಬೇಕು: ಬಿ ಆರ್‌ ಪಾಟೀಲ್

ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣವಾಗಿ ಬೆಂಬಲ ನೀಡಿದಾಗ ಮಾತ್ರ ವ್ಯಸನವನ್ನು...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

Download Eedina App Android / iOS

X