ಬಳ್ಳಾರಿ | ಅಧಿಕಾರ ದುರುಪಯೋಗ ಆರೋಪ; ಕೈಮಗ್ಗ ಸಹಕಾರ ಸಂಘದ ಅಧ್ಯಕ್ಷರ ವಜಾಕ್ಕೆ ಒತ್ತಾಯ

Date:

Advertisements

ಅಧಿಕಾರ ದುರುಪಯೋಗಪಡಿಸಿಕೊಂಡಿರುವ ಆರೋಪದಡಿ ಬಳ್ಳಾರಿ ಜಿಲ್ಲಾ ಕೈಮಗ್ಗ ಸಹಕಾರ ಸಂಘದ ಅಧ್ಯಕ್ಷ ಎ ರಾಮಕೃಷ್ಣ ಅವರನ್ನು ವಜಾಗೊಳಿಸಲು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ.

ಸಂಘದ ಹಾಲಿ ಅಧ್ಯಕ್ಷ ಎ.ರಾಮಕೃಷ್ಣ ಕಳೆದ ಒಂದು ವರ್ಷದಿಂದ ಅಧಿಕಾರ ದುರುಪಯೋಗ ಪಡಿಸಿಕೊಂಡು ಅಕ್ರಮಗಳನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿ ಸಂಘದ 11 ಜನ ನಿರ್ದೇಶಕರು ಬಳ್ಳಾರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

“ಸಂಘದ ನೋಂದಣಾಧಿಕಾರಿಗಳು ಹಾಗೂ ಉಪನಿಬಂಧಕರಿಗೆ ಕಳೆದ 15 ದಿನಗಳ ಹಿಂದೆ ದೂರು ಸಲ್ಲಿಸಲಾಗಿತ್ತು. ಆದರೆ ಇಲ್ಲಿಯವರೆಗೂ ಸಂಘದ ಹಾಲಿ ಅಧ್ಯಕ್ಷರ ಮೇಲೆ ಯಾವುದೇ ಕ್ರಮಕೈಗೊಂಡಿಲ್ಲ. ಅವರ ಮೇಲೆ ಸೂಕ್ತ ಕ್ರಮ ಕ್ರಮಕೈಗೊಳ್ಳಬೇಕು. ಸಂಘದ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು” ಎಂದು ಒತ್ತಾಯಿಸಿದರು.

Advertisements

“ಕಳೆದ ವರ್ಷ ಸೊಸೈಟಿಯಲ್ಲಿ ಚುನಾವಣೆ ನಡೆದು 11 ಜನ ಚುನಾಯಿತ ನಿರ್ದೇಶಕರುಗಳು ಮತದಾನ ಮಾಡುವ ಮೂಲಕ ಪ್ರತಿಸ್ಪರ್ಧಿ ಶೀಲಾ ಬ್ರಹ್ಮಯ್ಯ ಅವರ ವಿರುದ್ಧ ರಾಮಕೃಷ್ಣ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದರು. ಅಧ್ಯಕ್ಷರಾಗಿ ಆಯ್ಕೆಯಾದ ರಾಮಕೃಷ್ಣ ಅವರು ನಿರ್ದೇಶಕರ ಗಮನಕ್ಕೆ ತರದೆ ಅನುಕೂಲಕ್ಕೆ ತಕ್ಕಂತೆ ಸಭೆಗಳನ್ನು ಕರೆದು ನಿರ್ಣಯ ತೆಗೆದುಕೊಳ್ಳುತ್ತಾರೆ” ಎಂದು ಆರೋಪಿಸಲಾಗಿದೆ.

“ಈ ಹಿಂದಿನ ಅಧ್ಯಕ್ಷರು ನಡೆಸಿದ ಅಕ್ರಮಗಳ ಬಗ್ಗೆ ಹಾಗ ಎಲ್ಲರೂ ಸುಮ್ಮನಿದ್ದು ಈಗ ಯಾಕೆ ಮಾತನಾಡುತ್ತಿರಾ? ಎಂದು ಅವಾಚ್ಯ ಪದಗಳಿಂದ ನಿಂದಿಸುತ್ತಾರೆ. ಸಂಘದ ಕಟ್ಟಡದಿಂದ ಪ್ರತಿ ತಿಂಗಳು ಸುಮಾರು 1.50 ಲಕ್ಷ ರೂಪಾಯಿಗಳ ಬಾಡಿಗೆ ಹಣವನ್ನು ಸರಿಯಾಗಿ ಸಂಘದ ಬ್ಯಾಂಕ್ ಖಾತೆಗೆ ಜಮಾ ಮಾಡದೇ ಸ್ವಂತಕ್ಕೆ ಬಳಸುತ್ತಿದ್ದಾರೆ. ಕೈಮಗ್ಗದಲ್ಲಿ ಉತ್ಪತ್ತಿಯಾದ ಕಾಟನ್ ಬಟ್ಟೆಗಳನ್ನು ಮನಸೋ ಇಚ್ಛೆ ಮಾರಾಟ ಮಾಡಿ ಇದರಿಂದ ಸಂಘಕ್ಕೆ ನಷ್ಟವುಂಟು ಮಾಡುತ್ತಿದ್ದಾರೆ. ಸಂಘದ ಆವರಣದಲ್ಲಿರುವ ಗುಜರಿ ಅಂಗಡಿಯನ್ನು ತೆರವುಗೊಳಿಸುವಂತೆ ಸಭೆಯಲ್ಲಿ ಎಲ್ಲಾ ನಿರ್ದೇಶಕರು ನಿರ್ಣಯ ತೆಗೆದುಕೊಳ್ಳಲಾಗಿತ್ತು. ಆದರೆ, ಅಧ್ಯಕ್ಷರು ಗುಜರಿ ಅಂಗಡಿ ಮಾಲಿಕರಿಂದ 2 ಲಕ್ಷ ಲಂಚ ಸ್ವೀಕರಿಸಿದ್ದು ಸ್ಥಳಾಂತರಗೊಳಿಸದೇ ನೆಪ ಹೇಳುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಇವರ ಎಲ್ಲಾ ಅವ್ಯವಹಾರಕ್ಕೆ ಕಾರ್ಯದರ್ಶಿ ರಂಗಸ್ವಾಮಿ ಬೆಂಬಲವಾಗಿ ನಿಂತಿದ್ದಾರೆ. ಇವರಿಬ್ಬರನ್ನು ಕೂಡಲೇ ಸಂಘದಿಂದ ವಜಾಗೊಳಿಸಲು ಕ್ರಮಕೈಗೊಳ್ಳಬೇಕು. 2019ರಿಂದ ಇಲ್ಲಿಯವರೆಗೂ ಸುಮಾರು ರೂ 13,66,699/- ಅಕ್ರಮ ವ್ಯವಹಾರ ನಡೆದಿದೆ. ಈ ಬಗ್ಗೆ ಧಾರವಾಡ ಉಚ್ಚ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆದು ಅದನ್ನು ಎ ರಾಮಕೃಷ್ಣ ಅವರಿಂದ ಸಂಘದ ನಷ್ಟ ಭರಿಸುವಂತೆ ನ್ಯಾಯಾಲಯ ಆದೇಶಿಸಿದ್ದರೂ ಇಲ್ಲಿಯ ತನಕ ಸಂಘಕ್ಕೆ ನಷ್ಟ ಪಾವತಿಸಿಲ್ಲ. ಎರಡನೇ ಅವಧಿಗೂ ಅಧ್ಯಕ್ಷ ಸ್ಥಾನಕ್ಕೇರಿದ್ದು, ಸಂಘದ ಅಧಿನಿಯಮದ ಪ್ರಕಾರ ಕಾನೂನು ಬಾಹಿರವಾಗಿರುತ್ತದೆ. ಸರಕಾರಕ್ಕೆ ಪಾವತಿಸಬೇಕಾದ ಸೊಸೈಟಿಯ ರೂ.24 ಲಕ್ಷ ತೆರಿಗೆ ಹಣವನ್ನು ಬಾಕಿ ಉಳಿಸಿಕೊಂಡಿದ್ದಾರೆ” ಎಂದು ಆರೋಪಿದರು.

ಇದನ್ನೂ ಓದಿ: ಬಳ್ಳಾರಿ | ದಲಿತರಿಗೆ ಸೇರಿದ ಜಾಗ, ಬಾವಿ ಅತಿಕ್ರಮಣ; ತೆರವಿಗೆ ಪಿ ಶೇಖರ್ ಆಗ್ರಹ

ಈ ಸಂದರ್ಭದಲ್ಲಿ ರಾಟಾಲ ಮಂಜುನಾಥ, ಓಬುಳಾಪತಿ, ಎಸ್ ನಾಗರಾಜ್, ಜಕ್ಕ ಲಕ್ಷ್ಮಿ ನಾರಾಯಣ, ಶೇಷಾದ್ರಿ, ಜಿ ಮುರುಳಿ, ಕೆ.ಎನ್ ನಾಗರಾಜ್, ಕೋನಯ್ಯ, ಎಸ್ ಲಕ್ಷ್ಮಿದೇವಿ, ಎನ್ ಪದ್ಮಾವತಿ, ಹಾಗೂ ಇತರರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X