ಬಳ್ಳಾರಿಯ ಸಿರುಗುಪ್ಪ ಪಟ್ಟಣದ ಆದೋನಿ ರಸ್ತೆಯ ಸಮೃದ್ಧಿ ಆಯಿಲ್ ಎಕ್ಸ್ಟ್ರಾಕ್ಷನ್ಸ್ ಕಾರ್ಖಾನೆಗೆ ಕಾರ್ಮಿಕ ಇಲಾಖೆ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳ ತಂಡ ಆಕಸ್ಮಿಕ ಭೇಟಿ ಮಾಡಿ ಪರಿವೀಕ್ಷಣೆ ನಡೆಸಿದಾಗ 7 ಬಾಲ ಹಾಗೂ ಕಿಶೋರ ಕಾರ್ಮಿಕರು ಕೆಲಸ ಮಾಡುತ್ತಿರುವುದು ಕಂಡುಬಂದಿದ್ದು, ಎಲ್ಲಾ ಮಕ್ಕಳನ್ನು ರಕ್ಷಿಸಲಾಗಿದೆ.
ಅದರಲ್ಲಿ 6 ಮಕ್ಕಳು ಒರಿಸ್ಸಾ ರಾಜ್ಯದಿಂದ ಬಂದಿದ್ದಾರೆ ಎನ್ನಲಾಗಿದ್ದು, ಎಲ್ಲಾ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಲಾಗಿದೆ. “ಮಕ್ಕಳ ವಯಸ್ಸಿನ ದೃಢೀಕರಣ ದಾಖಲೆ ಹಾಗೂ ಮಾಲಿಕರ ದಾಖಲೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಬಳ್ಳಾರಿ ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾಧಿಕಾರಿ ಮೌನೇಶ್ ತಿಳಿಸಿದ್ದಾರೆ.
ದಾಳಿ ಸಂದರ್ಭದಲ್ಲಿ ಕಾರ್ಖಾನೆಗಳ ಹಿರಿಯ ಸಹಾಯಕ ನಿರ್ದೇಶಕ ವರುಣ್, ಸಿರಗುಪ್ಪ ಕಾರ್ಮಿಕ ನಿರೀಕ್ಷಕ ತಿರುಮಲೇಶ್, ಪೊಲೀಸ್ ಸಿಬ್ಬಂದಿ ಕೋರಿ ಬಸವರಾಜ್, ಕಾರ್ಖಾನೆ ಹಾಗೂ ಬಾಯ್ಲರ್ ಇಲಾಖೆಯ ಸಿಬ್ಬಂದಿ ಗಿರೀಶ್ ಕಬಾಡಿ ಸೇರಿದಂತೆ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಇದನ್ನೂ ಓದಿ: ಬಳ್ಳಾರಿ | ಜೋಳದ ರಾಶಿ ದೊಡ್ಡನಗೌಡರ ಕಲಾಸೇವೆ ಅಪಾರ: ಎನ್ ಬಸವರಾಜ್