ದಕ್ಷ ಹಾಗೂ ಪ್ರಾಮಾಣಿಕ ಐಪಿಎಸ್ ಅಧಿಕಾರಿ ಬಿ.ದಯಾನಂದ್ ಅವರ ಅಮಾನತನ್ನು ರದ್ದುಗೊಳಿಸಿ ರಾಜ್ಯ ಸರ್ಕಾರ ತಕ್ಷಣ ಮೊದಲಿನ ಹುದ್ದೆಗೆ ಮರು ನೇಮಕ ಮಾಡಬೇಕು ಎಂದು ವಾಲ್ಮೀಕಿ ಮುಖಂಡ ಕಾಂಗ್ರೆಸ್ ಮುಖಂಡ ವಿ ಕೆ ಬಸಪ್ಪ ಅಗ್ರಹಿಸಿದರು.
ಬಳ್ಳಾರಿ ನಗರದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ವತಿಯಿಂದ ಪ್ರತಿಭಟನಾ ಮನವಿ ಪತ್ರ ಸಲ್ಲಿಸಲಾಯಿತು.
“ತಮ್ಮ ಪ್ರಾಮಾಣಿಕ ಸೇವೆಯಿಂದ ಸಾರ್ವಜನಿಕರ ಮನೆ ಮಾತಾಗಿ ಉತ್ತಮ ಅಧಿಕಾರಿ ಎನಿಸಿಕೊಂಡಿರುವ ದಯಾನಂದ ಅವರನ್ನು ಆರ್ ಸಿ ಬಿ ವಿಜಯೋತ್ಸವ ವೇಳೆ ನಡೆದ ಅವಘಡಕ್ಕೆ ಹೊಣೆ ಮಾಡಿ ಅಮಾನತು ಮಾಡಿರುವ ಸರ್ಕಾರದ ನಡೆ ಖಂಡನೀಯ” ಎಂದರು.
ಒಕ್ಕೂಟ ಅಧ್ಯಕ್ಷ ಗಾದಿಲಿಂಗನಗೌಡ ಮಾತನಾಡಿ, “ಅಹಿಂದ ನಾಯಕ ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ನಾವು ಗೌರವಿಸುತ್ತೇವೆ. ಆದರೆ, ಆರ್‌ಸಿಬಿ ಐಪಿಎಲ್ ಕಪ್ ಗೆದ್ದ ಸಂಭ್ರಮ ಕಾರ್ಯಕ್ರಮದಲ್ಲಿ ನಡೆದ ಕಾಲ್ತುಳಿತ ಪ್ರಕರಣದ ತನಿಖೆಯೇ ಆಗಿಲ್ಲ. ತಪ್ಪಿತಸ್ಥರು ಯಾರೆಂದು ಗೊತ್ತಾಗಿಲ್ಲ. ಹೀಗೆ ಏಕಾಏಕಿ ಶೋಷಿತ ಸಮುದಾಯದ ಅದರಲ್ಲೂ ಅಖಂಡ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯವರಾದ ದಯಾನಂದ ಅವರನ್ನು ಅಮಾನತು ಮಾಡಲಾಗಿದೆ. ತಕ್ಷಣ ಈ ಆದೇಶ ಹಿಂಪಡೆದು, ಪೊಲೀಸ್ ಆಯುಕ್ತರನ್ನಾಗಿ ಮರು ನೇಮಕ ಮಾಡಬೇಕು” ಎಂದು ಒತ್ತಾಯಿಸಿದರು.

ಇದನ್ನೂ ಓದಿ: ಬಳ್ಳಾರಿ | ಜೂ.16 ರಂದು ಅಕ್ಕಿ, ಗೋಧಿ ಬಹಿರಂಗ ಹರಾಜು
ಜಿಲ್ಲಾ ಒಕ್ಕೂಟದ ಗೌರವಾಧ್ಯಕ್ಷ ಎ.ಮಾನಯ್ಯ ಮಾತನಾಡಿ, “ಈವರೆಗಿನ ಸೇವಾ ಅವಧಿಯಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಕೆಲಸ ಮಾಡಿರುವ ದಯಾನಂದ ಅವರ ಮರುನೇಮಕ ಆಗಬೇಕು. ಅವರ ಅಮಾನತು ರದ್ದು ಮಾಡಿ ಸರ್ಕಾರ ಈ ಹಿಂದಿನ ಹುದ್ದೆ ನೀಡಬೇಕೆಂದು” ಆಗ್ರಹಿಸಿದರು.
ಈ ವೇಳೆ ಶೋಷಿತ ಸಮುದಾಯ ಒಕ್ಕೂಟದ ಕಾರ್ಯಾಧ್ಯಕ್ಷ ವಿ ಎಸ್ ಶಿವಶಂಕರ್, ಕೆ ಹನುಮಂತಪ್ಪ, ಇಮಾಮ್ ಗೋಡೆಕಾರ, ಸಂಗನಕಲ್ಲು ವಿಜಯ್, ಎನ್ ಕೆ ಸದಾಶಿವಪ್ಪ, ಬಿ ಶ್ರೀನಿವಾಸ್ ಮೂರ್ತಿ, ಧನಂಜಯ ಹಮಾಲ್, ಯರಗುಡಿ ಮುದಿ ಮಲ್ಲಯ್ಯ, ಕೆ ಕೆ ಹಾಳ್ ಸತ್ಯನಾರಾಯಣ, ಹಗರಿ ಜನಾರ್ಧನ, ಪುಷ್ಪ, ಕಲಾವತಿ, ಮಲ್ಲೇಶ್ವರಿ, ಗಡ್ಡಂ ತಿಮ್ಮಪ್ಪ, ಕುರಿಹಟ್ಟಿ ಬಿ.ಮಲ್ಲಿಕಾರ್ಜುನ, ಅಸುಂಡಿ ಹನುಮೇಶ್, ಅತಾವುಲ್ಲಾ, ಸಂಗನಕಲ್ ಲಿಂಗರಾಜ್, ಸಂಗನಕಲ್ ಜೋಗಿನ ವಿಜಯಕುಮಾರ್, ಹವಂಭಾವಿ ಗಂಗಾಧರ, ಟಿ.ಗಂಗಪ್ಪ, ಶಂಕರ್, ಅಂಜಿನಪ್ಪ ಎಚ್.ಕೆ, ರಮೇಶ್, ಎರಿಸ್ವಾಮಿ, ವೈ ರವೀಂದ್ರ ನೆಟ್ಟೆಕಲ್ಲಪ್ಪ, ಕುಸುಮ, ರವಿಕುಮಾರ್ ಸಂಗನಕಲ್, ದೇವಿನಗರ ಭೀಮಲಿಂಗ, ಉಮೇಶ್, ಕೆ.ಎರ್ರಿಸ್ವಾಮಿ, ರಾಮು ನಾಯಕ್, ಬೆಳಗಲ್ ಹುಲುಗಪ್ಪ, ಬೆಳಗಲ್ ಜಂಬುನಾಥ, ಮರಿಸ್ವಾಮಿಮಠ ವಸಂತ್ ಕುಮಾರ್, ಎಚ್.ಹಳ್ಳಪ್ಪ, ಸಂಗನಕಲ್ಲು ದಿವಾಕರ್ ಹಾಗೂ ಇತರರಿದ್ದರು.