ರೈತರು ಮತ್ತು ಕಾರ್ಮಿಕರ ಹಿತ ದೃಷ್ಠಿಯಿಂದ ಪೌಷ್ಠಿಕಾಂಶದ ಕೊರತೆ ನಿವಾರಣೆಗೆ ಆಯಾ ಪ್ರದೇಶಕ್ಕನುಗುಣವಾಗಿ ಪಡಿತರ ಅಕ್ಕಿಯೊಂದಿಗೆ ಪ್ರತಿ ವ್ಯಕ್ತಿಗೆ ರಾಗಿ ಮತ್ತು 1 ಕೆಜಿ ತೊಗರಿ ಬೇಳೆ, 1 ಕೆಜಿ ಅಡುಗೆ ಎಣ್ಣೆಯನ್ನು ಅನುಕೂಲಕರ ದರದಲ್ಲಿ ನ್ಯಾಯಬೆಲೆ ಅಂಗಡಿಯಲ್ಲಿ ಕಲ್ಪಿಸುವಂತೆ ಗ್ರಾಮೀಣ ಕೂಲಿ ಕಾರ್ಮಿಕ ಸಂಘದ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಬಳ್ಳಾರಿಯಲ್ಲಿ ಯುವಜನರ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಚಿವ ಬಿ ನಾಗೇಂದ್ರ ಅವರಿಗೆ ಹಕ್ಕೊತ್ತಾಯ ಸಲ್ಲಿಸಿದ ಕಾರ್ಯಕರ್ತರು, “ರೈತರು ಬೆಳೆಯುವ ಆಹಾರ ಧಾನ್ಯಗಳು ಸ್ಥಳೀಯವಾಗಿ ಸೂಕ್ತ ಮಾರುಕಟ್ಟೆಯ ಲಭ್ಯತೆ, ಗ್ರಾಮೀಣ ಭಾಗದಲ್ಲಿ ಆಹಾರ ಸಂಸ್ಕರಣ ಘಟಕಗಳಿಗೆ ಪ್ರೋತ್ಸಾಹ, ಕಾರ್ಮಿಕರಿಗೆ, ವಿಶೇಷವಾಗಿ ಅಪೌಷ್ಟಿಕತೆ ಹೆಚ್ಚುತ್ತಿರುವ ಮಹಿಳೆಯರು ಮತ್ತು ಮಕ್ಕಳ ಅಪೌಷ್ಠಿಕತೆ ನೀಗಿಸುವ ಪೌಷ್ಠಿಕ ಆಹಾರ ಸಿಕ್ಕಂತಾಗುತ್ತದೆ. ಆಹಾರ ಭದ್ರತೆಗೆ ಸರಿಯಾದ ಅರ್ಥ ಬರುತ್ತದೆ” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಮನರೇಗಾ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ಆಹಾರ ಧಾನ್ಯ ಪಡಿತರಕ್ಕೆ ಒತ್ತಾಯ
“ಉದ್ಯೋಗ ಖಾತ್ರಿಯಲ್ಲಿ 90 ದಿನಗಳಿಗೂ ಹೆಚ್ಚಿನ ಮಾನವ ದಿನಗಳನ್ನು ಮುಗಿಸಿದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಗಾಗಿ ಬಿಒಸಿಡಬ್ಲ್ಯೂ ಅಡಿಯಲ್ಲಿ ಕಾರ್ಮಿಕರ ಚೀಟಿಗಳನ್ನು ನೀಡಬೇಕು. ಇವೆರಡೂ ಅಪೌಷ್ಠಿಕತೆ ನೀವಾರಣೆಗೆ ಆಹಾರ ಭದ್ರತೆ ಮತ್ತು ಆರೋಗ್ಯಕ್ಕೆ ಶಿಕ್ಷಣದ ಸಾಮಾಜಿಕ ಭದ್ರತೆಯ ಯೋಜನೆಗಳಾಗಿದ್ದು, ರೈತರು ಮತ್ತು ಕಾರ್ಮಿಕರಿಗೆ ಏಕಕಾಲಕ್ಕೆ ಪ್ರಯೋಜನವಾಗಿರುವ ಜನಪರ ಬೇಡಿಕೆಗಳನ್ನು ಈಡೇರಿಸಬೇಕು” ಎಂದು ಮನವಿ ಮಾಡಿದರು.
ಈ ವೇಳೆ ಸಂಘಟನೆಯ ಮುಖಂಡೆ ಅಕ್ಕಮಹಾದೇವಿ ಮರಬ್ಬಿ ಹಾಳು , ಕಂಪ್ಲಿ ತಾಲ್ಲೂಕು ಕಾರ್ಯಕರ್ತೆ ಪವಿತ್ರ , ಸಂಡೂರು ತಾಲ್ಲೂಕು ಕಾರ್ಯಕರ್ತೆ ವಾಣಿ , ಅನುಸೂಯ , ದೇವಮ್ಮ ,ನೀಲಮ್ಮ ಇನ್ನಿತರರು ಹಾಜರಿದ್ದರು ..