ಮುತ್ತೂಟ್ ಫಿನ್‌ಕಾರ್ಪ್ ಲಿ. ವತಿಯಿಂದ ಶ್ರೀ ಕೋಟೆ ಮಲ್ಲೇಶ್ವರ ಸ್ವಾಮಿಯ ಜಾತ್ರೆ ಪ್ರಯುಕ್ತ ನಿನ್ನೆ ಮುಂಜಾನೆ ಗ್ರಾಹಕರಿಗೆ ಮತ್ತು ಸಾರ್ವಜನಿಕರಿಗೆ ಉಚಿತವಾಗಿ ರಕ್ತಪರೀಕ್ಷೆ, ಮಧುಮೇಹ, ಸಕ್ಕರೆ ಪ್ರಮಾಣ, ಕಣ್ಣು ಮತ್ತು ದಂತ ತಪಾಸಣೆ ಸೇರಿದಂತೆ ಹಲವು ರೀತಿಯ ಆರೋಗ್ಯ ತಪಾಸಣೆ ನಡೆಸಲಾಯಿತು.
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಬ್ರ್ಯಾಂಚ್ ಮ್ಯಾನೇಜರ್ ವೇದಾವತಿ ಎ, “ದೈನಂದಿನ ಕೆಲಸದ ಒತ್ತಡದಿಂದ ಜನರು ತಮ್ಮ ಆರೋಗ್ಯವನ್ನೇ ನಿರ್ಲಕ್ಷಿಸುತ್ತಿದ್ದಾರೆ. ಇದರಿಂದ ಪ್ರಾಥಮಿಕ ಹಂತದಲ್ಲಿ ರೋಗವನ್ನು ಪತ್ತೆ ಹಚ್ಚಲು ಸಾಧ್ಯವಾಗದೆ ರೋಗ ಉಲ್ಬಣಗೊಂಡು ಸಾವು ಸಂಭವಿಸಿದ ಉದಾಹರಣೆಗಳು ಸಾವಿರಾರಿವೆ. ಇಂತಹ ಸಂದರ್ಭದಲ್ಲಿ ಬಡಜನರ ಅನುಕೂಲಕ್ಕಾಗಿ ಈ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಯಾರೊಬ್ಬರೂ ಆರೋಗ್ಯವನ್ನು ನಿರ್ಲಕ್ಷಿಸದೇ ಸಕಾಲಕ್ಕೆ ತಪಾಸಣೆಗೊಳಪಟ್ಟು ರೋಗದಿಂದ ದೂರವಿರಬೇಕು. ಆರೋಗ್ಯಯುತ ಜೀವನ ನಡೆಸುವಂತಾಗಬೇಕು” ಎಂದು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ?: ಬಳ್ಳಾರಿ | ಜೀತ ಪದ್ಧತಿ ನಿರ್ಮೂನೆಗೆ ಪ್ರತಿಯೊಬ್ಬರೂ ಪಣತೊಡಬೇಕು: ನ್ಯಾ. ಕೆ ಜಿ ಶಾಂತಿ ಕರೆ
ಮತ್ತೂಟ್ ಫಿನ್‌ಕಾರ್ಪ್ ಸಂಸ್ತೆಯ ವಿಭಾಗೀಯ ವ್ಯವಸ್ಥಾಪಕ ಪ್ರಶಾಂತ್ ಎಸ್, ಪ್ರಾದೇಶಿಕ ವ್ಯವಸ್ಥಾಪಕ ವಿರೂಪಾಕ್ಷಪ್ಪ ಪಿ, ಸಹಾಯಕ ವ್ಯವಸ್ಥಾಪಕ ಕಿಶೋರ್ ಕುಮಾರ್, ಹಣಕಾಸು ಅಧಿಕಾರಿ ಶ್ರೀನಿವಾಸ್ ಯು ಮತ್ತು ಸಿಬ್ಬಂದಿ ಪ್ರವೀಣ್ ಕುಮಾರ್, ಶ್ರೀಕಾಂತ್ ಮತ್ತು ಹೆಲ್ತ್ ಫ್ರೀ ಸರ್ವಿಸಸ್ ಸಂಸ್ಥೆಯ ಫೌಂಡರ್ ಡಾ. ಕುಮಾರ್, ಬಳ್ಳಾರಿ ಮ್ಯಾನೇಜರ್ ಮಂಜುನಾಥ್ ಡಿ.ಪಿ, ಸಬೀಯಾ, ಹೊನ್ನಪ್ಪ, ದಂತವೈದ್ಯ ಸುರೇಶ್ ಸೇರಿದಂತೆ ಇತರರಿದ್ದರು.
