ಅಸಂಘಟಿತ ಚಾಲಕ ಕಾರ್ಮಿಕರಿಗೆ ಭದ್ರತಾ ಯೋಜನೆಯಗಳನ್ನು ಜಾರಿಗೊಳಿಸಿ ಅವರ ಕುಟುಂಬಕ್ಕೆ ಆಧಾರವಾಗುವಂತೆ ಕೋರಿ ಬಳ್ಳಾರಿ ಜಿಲ್ಲಾ ಾಟೋ ಚಾಲಕರ ಸಂಘದ ಹುಂಡೇಕರ್ ರಾಜೇಶ್ ಆಗ್ರಹಿಸಿದರು.
“ಜಿಲ್ಲೆಯಲ್ಲಿ ವಿವಿಧ ವಾಹನಗಳಿಗೆ ಚಾಲಕರಾಗಿ ಅವಿರತವಾಗಿ 24×7 ಸದಾ ಸೇವೆಯಲ್ಲಿ ತೊಡಗಿಸಿಕೊಂಡು ಸಾರ್ವಜನಿಕ ಸೇವೆಗಾಗಿ ಕೆಲಸ ಮಾಡುತ್ತೇವೆ. ತಮ್ಮ ಕುಟುಂಬದ ಹಂಗನ್ನು ತೊರೆದು ಸೇವೆಯಲ್ಲಿ ಜೀವನ ಕಳೆಯುತ್ತಿರುವ ಚಾಲಕರ ಆದಾಯವು ತೆರಿಗೆ ರೂಪದಲ್ಲಿ ಸಂಗ್ರಹವಾಗುತ್ತಿದ್ದು, ಇಂತಹ ತೆರಿಗೆಯಿಂದ ಅವರ ಜೀವನಕ್ಕೆ ಆಧಾರ ಕಲ್ಪಿಸುವ ಯೋಜನೆಗಳನ್ನು ಜಾರಿಗೆ ತರಬೇಕು. ಕರ್ನಾಟಕ ರಾಜ್ಯದ ಎಲ್ಲಾ ಚಾಲಕರ ಪರವಾಗಿ ಅವರ ಕುಟುಂಬಗಳ ಜೀವನಕ್ಕೆ ಆಧಾರ ಮಾಡಿಕೊಡಬೇಕು” ಕೋರಿದರು.
ಈಗ ನೀಡಿರುವ ಕಾರ್ಮಿಕ ಕಾರ್ಡ್‌ನಿಂದ ಚಾಲಕರಿಗೆ ಯಾವುದೇ ರೀತಿಯ ಉಪಯೋಗವಾಗುತ್ತಿಲ್ಲ. ಕಾರ್ಮಿಕರ ಬಗ್ಗೆ ಚಿಂತನೆ ನಡೆಸಿ ಸೂಕ್ತವಾದ ಯೋಜನೆಯನ್ನು ಜಾರಿಗೆ ತರುವ ಕುರಿತು ಪರಿಶೀಲಿಸಿ ಮುಂದಿನ ದಿನಗಳಲ್ಲಿ ಬರುವ ಬಜೆಟ್‌ನಲ್ಲಿ ಕಾರ್ಮಿಕ ವರ್ಗಕ್ಕೆ ವಿಶೇಷವಾದ ಕೊಡುಗೆ ನೀಡಿ ಅವರ ಬದುಕಿಗೆ ಬೆಳಕಾಗಬೇಕು ಎಂದು ವಿನಂತಿಸಿದರು.
ಇದನ್ನೂ ಓದಿ: ಬಳ್ಳಾರಿ | ಕನ್ನಡ ಶಿಕ್ಷಣದಲ್ಲಿ ದ್ವಿಭಾಷಾ ನೀತಿ ಜಾರಿಗೊಳಿಸಲು ಕರವೇ ಆಗ್ರಹ