“ನಾನು ಪಕ್ಷದಲ್ಲಿ ನಿಷ್ಟಾವಂತನಾಗಿ ಕೆಲಸ ಮಾಡುತ್ತಿದ್ದೇನೆ. ಪಕ್ಷಕ್ಕೆ ಪ್ರಾಮಾಣಿಕವಾಗಿದ್ದೇನೆ. ಹಾಗಾಗಿ ಪಕ್ಷ ಬಿಡುವ ಮಾತೇ ಇಲ್ಲ” ಎಂದು ಮಾಜಿ ಸಚಿವ, ಬಿಜೆಪಿ ನಾಯಕ ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.
“ಕಾಂಗ್ರೆಸ್‌ನ ಹಲವು ನಾಯಕರು ನನ್ನ ಪ್ರಾಮಾಣಿಕತೆ, ನಿಷ್ಟೆ ಕಂಡು ಪಕ್ಷಕ್ಕೆ ಆಹ್ವಾನಿಸಿದ್ದಾರೆ. ಕಾಂಗ್ರೆಸ್‌ನ ಬಹಳಷ್ಟು ನಾಯಕರಲ್ಲಿ ನನ್ನ ಮೇಲೆ ಒಳ್ಳೆಯ ಅಭಿಪ್ರಾಯ ಇದೆ ಎಂಬುದು ಗೊತ್ತಾಗಿದೆ. ಆದರೆ, ಸದ್ಯಕ್ಕೆ ಪಕ್ಷ ಬಿಡುವ ಯಾವ ಆಲೋಚನೆಯೂ ಇಲ್ಲ” ಎಂದು ಪುನರುಚ್ಛರಿಸಿದ್ದಾರೆ.
ಕೂಡ್ಲಿಗಿಯಿಂದ ಸ್ಪರ್ಧಿಸಬಾರದು ಎಂಬ ಸ್ಥಳೀಯ ನಾಯಕರ ಸುದ್ದಿಗೋಷ್ಠಿಯ ಕುರಿತು ಮಾತನಾಡಿದ ಅವರು, “ಬಳ್ಳಾರಿ ಗ್ರಾಮಾಂತರದ ಮತಗಳು ಧ್ರುವೀಕರಣಗೊಂಡಿವೆ. ಹೀಗಾಗಿ ನನಗೆ ಕೂಡ್ಲಿಗಿಯಿಂದ ಸ್ಪರ್ಧಿಸುವ ಇಚ್ಛೆಯಿದೆ. ಕೂಡ್ಲಿಗಿಯೂ ಅಖಂಡ ಬಳ್ಳಾರಿಯ ಭಾಗವಾಗಿದೆ. ನನ್ನ ಮೇಲಿನ ಪ್ರೀತಿಯಿಂದ ಕೆಲವರು ಗ್ರಾಮಾಂತರ ಕ್ಷೇತ್ರದಲ್ಲೇ ಸ್ಪರ್ಧಿಸುವಂತೆ ಆಗ್ರಹಿಸುತ್ತಿರಬಹುದು. ಅದನ್ನು ನಾನು ಗೌರವಿಸುವೆ. ಕೇಂದ್ರದ ನಾಯಕರು ಪೋನ್ ಕರೆಯ ಮೂಲಕ ನನ್ನೊಂದಿಗೆ ಮಾತನಾಡಿದ್ದು ನಿಜ. ಎಲ್ಲರೂ ನನ್ನೊಂದಿಗೆ ನಿಲ್ಲುವುದಾಗಿ ಭರವಸೆ ಕೊಟ್ಟಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ?: ಬಳ್ಳಾರಿ | ಕಣವಿ ತಿಮ್ಮಲಾಪುರ ಗ್ರಾಮ ವ್ಯಾಪ್ತಿಯಲ್ಲಿ ಬಸ್ ಡಿಪೊ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ
