ಬಳ್ಳಾರಿ | ಎಸ್‌ಟಿ ಮೀಸಲು ಕ್ಷೇತ್ರದಲ್ಲಿ ಟಿಕೆಟ್‌ ಜಿದ್ದಾಜಿದ್ದಿ ಜೋರು

Date:

Advertisements

ಲೋಕಸಭಾ ಚುನಾವಣೆಗೆ ಇನ್ನೊಂದೇ ತಿಂಗಳು ಬಾಕಿ ಇದೆ. ಬಿಜೆಪಿ-ಕಾಂಗ್ರೆಸ್ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಲು ಆಕಾಂಕ್ಷಿಗಳು ಟಿಕೆಟ್‌ಗಾಗಿ ತೀವ್ರ ಕಸರತ್ತು ನಡೆಸಿದ್ದಾರೆ. ಎಸ್‌ಟಿ ಮೀಸಲು ಕ್ಷೇತ್ರವಾಗಿರುವ ಗಣಿನಾಡು ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್‌ ಜಿದ್ದಾಜಿದ್ದಿ ಜೋರಾಗಿದ್ದು, ಎರಡೂ ಪಕ್ಷಗಳಲ್ಲೂ ತೀವ್ರ ಲಾಭಿ ಶುರುವಾಗಿದೆ.

ಬಳ್ಳಾರಿ ಲೋಕಸಭೆ ಈ ಹಿಂದೆ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಆದರೆ, ರೆಡ್ಡಿ ಸಹೋದರರು ಈ ಕ್ಷೇತ್ರದಲ್ಲಿ ತಮ್ಮ ಅಧಿಪತ್ಯ ಸಾಧಿಸಿದ ಬಳಿಕ ಕಾಂಗ್ರೆಸ್ ತನ್ನ ಹಿಡಿತ ಕಳೆದುಕೊಂಡಿತ್ತು. ಲೋಕಸಭೆ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸಿರುವ ಎಐಸಿಸಿ ಮತ್ತು ಕೆಪಿಸಿಸಿ ಈ ಸಲ ಕಾಂಗ್ರೆಸ್‌ ಬಾವುಟ ಹಾರಿಸಲೇಬೇಕೆಂಬ ಟಾಸ್ಕ್‌ ನೀಡಿದೆ.

ವಿಜಯನಗರ ಮತ್ತು ಬಳ್ಳಾರಿ ಕಾಂಗ್ರೆಸ್‌ನ ವಿ.ಎಸ್. ಉಗ್ರಪ್ಪ ಅತ್ಯಧಿಕ ಮತಗಳ ಅಂತರದಲ್ಲಿ ಗೆದ್ದ ಬಳಿಕ, ಬಿಜೆಪಿಯಲ್ಲಿ ಮಂಕುಕವಿದಿದೆ. ಕಾಂಗ್ರೆಸ್‌ನಿಂದ ಉಗ್ರಪ್ಪ ಅವರೇ ಸ್ಪರ್ಧಿಸಲಿರುವುದು ಖಚಿತ.

Advertisements

ಬಿಜೆಪಿ ಈಗ ಶ್ರೀರಾಮುಲು ಅವರನ್ನೇ ನೆಚ್ಚಿಕೊಂಡಂತೆ ಕಂಡರೂ ಅಕಾಂಕ್ಷಿಗಳು ಹೆಚ್ಚಿದ್ದಾರೆ. ಎಸ್‌ಟಿ ಮೀಸಲು ಕ್ಷೇತ್ರವಾದ ಬಳ್ಳಾರಿಯಲ್ಲಿ ಸಚಿವ ಬಿ. ನಾಗೇಂದ್ರ ಅವರನ್ನು ಕಣಕ್ಕಿಳಿಸಲು ಪಕ್ಷ ಬಯಸಿದೆ. ಆದರೆ, ಅವರು ಸ್ಪರ್ಧಿಸಲು ʼಒಲ್ಲೆʼ ಎಂದಿದ್ದು, ಅವರ ಸಹೋದರ ಬಿ. ವೆಂಕಟೇಶ್ ಪ್ರಸಾದ್ ಅವರಿಗೆ ಸ್ಪರ್ಧಿಸುವ ಒಲವಿದೆ. ಕಳೆದ ಬಾರಿ ಸ್ಪರ್ಧಿಸಿ ಸೋತ ವಿ.ಎಸ್. ಉಗ್ರಪ್ಪ ಅವರು ನಾನೇ ಅಭ್ಯರ್ಥಿ ಎಂದು ಆತ್ಮವಿಶ್ವಾಸದಿಂದ ಹೇಳುತ್ತಿದ್ದಾರೆ.

ಸಂಡೂರು ಶಾಸಕ ತುಕಾರಾಂ ಅವರ ಹೆಸರೂ ಕೇಳಿ ಬಂದಿದ್ದು, ಅದನ್ನು ಅಲ್ಲಗೆಳೆದು ಅವರು ತಮ್ಮ ಪುತ್ರಿ ಸೌಪರ್ಣಿಕಾ ಹೆಸರನ್ನು ಪ್ರಸ್ತಾಪಿಸಿದ್ದಾರೆ. ತುಕಾರಾಂ ಅವರಿಗೆ ಸಚಿವ ಸಂತೋಷ್ ಲಾಡ್ ಬೆಂಬಲವಿದೆ. ಇಷ್ಟೆಲ್ಲ ಪೈಪೋಟ ಮಧ್ಯೆ ಸ್ಥಳೀಯ ಮುಖಂಡ ಗುಜ್ಜಲ್ ನಾಗರಾಜ್ ಕೂಡ ಆಕಾಂಕ್ಷಿ ಆಗಿದ್ದಾರೆ.

ಬಳ್ಳಾರಿಯಿಂದ ಸ್ಪರ್ಧಿಸಲು ಸಿದ್ಧವಿರುವಂತೆ ಸಚಿವ ಕೆ.ಎನ್. ರಾಜಣ್ಣ ಪುತ್ರ, ವಿಧಾನ ಪರಿಷತ್‌ ಸದಸ್ಯ ಆರ್. ರಾಜೇಂದ್ರ ಅವರನ್ನು ಪಕ್ಷದ ಕೆಲ ನಾಯಕರು ಸೂಚಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅವರು ಬಳ್ಳಾರಿ ಅಥವಾ ರಾಯಚೂರಿನಿಂದ ಸ್ಪರ್ಧಿಸಲು ನನಗೆ ಸೂಚಿಸಿದ್ದು ನಿಜ. ಆದರೆ, ನಾನು ತುಮಕೂರಿನಲ್ಲೇ ಇರುವೆ ಎಂದಿದ್ದಾರೆ.

ಮೊಳಕಾಲ್ಕೂರು ಶಾಸಕ ಎನ್. ವೈ. ಗೋಪಾಲಕೃಷ್ಣ ಅವರ ಹೆಸರೂ ಮುಂಚೂಣಿಯಲ್ಲಿದೆ. ಇದನ್ನು ಅಲ್ಲಗಳೆದಿರುವ ಅವರು, ‘ನಾನು ಸ್ಪರ್ಧಿಸಲ್ಲ, ನನ್ನ ಅಣ್ಣ ಎನ್.ವೈ ಹನುಮಂತಪ್ಪ ಕೂಡ ಅಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಸ್ಪರ್ಧೆಗೆ ಅವರ ಮನವೊಲಿಕೆ ಮುಂದುವರಿದಿದೆ. ಗೋಪಾಲಕೃಷ್ಣ ಅವರು ಈ ಹಿಂದೆ ಬಳ್ಳಾರಿ ಗ್ರಾಮಾಂತರ ಮತ್ತು ಕೂಡ್ಲಿಗಿ ಶಾಸಕರಾಗಿದ್ದರು. ಅವರಿಗೆ ಕ್ಷೇತ್ರದ ಪರಿಚಯವಿದೆ. ಅದರ ಲಾಭ ಪಡೆಯಬಹುದು ಎಂಬುದು ಕೆಲ ನಾಯಕರ ಅಭಿಪ್ರಾಯ.

ಸಚಿವ ನಾಗೇಂದ್ರ ಅವರು ಸ್ಪರ್ಧಿಸದಿದ್ದರೆ, ಅಖಂಡ ಬಳ್ಳಾರಿಯವರಿಗೇ ಟಿಕೆಟ್ ಸಿಗಲಿ ಎಂಬುದು ಸ್ಥಳೀಯ ನಾಯಕರ ಆಶಯ. ಇದಕ್ಕೆ ನಾಗೇಂದ್ರ ಅವರ ಸಮ್ಮತಿಯೂ ಇದೆ. ಟಿಕೆಟ್ ಸ್ಥಳೀಯರಿಗೆ ಸಿಗುವುದೇ ಅಥವಾ ಹೊರಗಿನ ಜಿಲ್ಲೆಯವರ ಪಾಲಾಗುವುದೇ ಎಂಬುದೇ ಸದ್ಯದ ಕುತೂಹಲ.

ಕರ್ನಾಟಕದ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿರುವ ಕಾಂಗ್ರೆಸ್, ತುಮಕೂರಿನಿಂದ ಮುದ್ದ ಹನುಮೇಗೌಡ, ವಿಜಯಪುರದಿಂದ ಎಸ್.ಆರ್. ಅಲಗೂರ, ಹಾವೇರಿಯಿಂದ ಆನಂದಸ್ವಾಮಿ ಗಡ್ಡದವೇರಮಠ, ಶಿವಮೊಗ್ಗದಿಂದ ಗೀತಾ ಶಿವರಾಜಕುಮಾರ್, ಬೆಂಗಳೂರು ಗ್ರಾಮಾಂತರದಿಂದ ಡಿ.ಕೆ. ಸುರೇಶ್ ಹಾಗೂ ಹಾಸನದಿಂದ ಶ್ರೇಯಸ್ ಪಟೇಲ್, ಮಂಡ್ಯದಿಂದ ವೆಂಕಟರಮಣಗೌಡ (ಸ್ರಾರ್ ಚಂದ್ರು) ಹೆಸರನ್ನು ಪಕ್ಷ ಅಂತಿಮಗೊಳಿಸಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X