ಬಳ್ಳಾರಿ | ಕೊಲೆ ಪ್ರಕರಣ; ಮೃತನ ಪತ್ನಿ, ಆಕೆಯ ಪ್ರಿಯಕರ ಸೇರಿ 11 ಮಂದಿ ಬಂಧನ

Date:

Advertisements

ಬಳ್ಳಾರಿ ನಗರದ ರಾಣಿತೋಟ ಪ್ರದೇಶದಲ್ಲಿ ವೆಂಕಟೇಶ್​ ಎಂಬುವವರ ಕೊಲೆ ಪ್ರಕರಣ ಸಂಬಂಧ ಆತನ ಪತ್ನಿ ಹಾಗೂ ಪತ್ನಿಯ ಪ್ರಿಯಕರ ಸೇರಿದಂತೆ 11 ಮಂದಿಯನ್ನು ಬಳ್ಳಾರಿ ಪೊಲೀಸರು ಬಂಧಿಸಿದ್ದಾರೆ.

ಈ ಕುರಿತು ಬಳ್ಳಾರಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಾ. ವಿ ಜೆ ಶೋಭಾರಾಣಿ ಮಾತನಾಡಿ, “ಏಪ್ರಿಲ್‌ 4ರಂದು ವೆಂಕಟೇಶ್​ ಪತ್ನಿ ನೀಲವೇಣಿ, ʼದುಷ್ಕರ್ಮಿಗಳು ನನ್ನ ಪತಿ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆʼ ಎಂದು ದೂರು ಕೊಟ್ಟಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ತನಿಖೆ ಕೈಗೊಂಡಾಗ ವೆಂಕಟೇಶ್​ ಕೊಲೆಯಲ್ಲಿ ಪತ್ನಿ ನೀಲವೇಣಿಯ ಕೈವಾಡ ಇರುವುದೂ ತಿಳಿದುಬಂದಿದೆ” ಎಂದರು.

“ನೀಲವೇಣಿ ಮತ್ತು ಈ ಪ್ರಕರಣದ ಎರಡನೇ ಆರೋಪಿ ಆನಂದ್​ ಸೇರಿ ಶಾಮಿಯಾನದ ವ್ಯವಹಾರ ನಡೆಸುತ್ತಿದ್ದರು. ಇಬ್ಬರ ನಡುವೆ ಆಪ್ತ ಸಂಬಂಧ ಇತ್ತು. ಹೀಗಾಗಿ ಇಬ್ಬರ ಮೇಲೆ ವೆಂಕಟೇಶ್​ಗೆ ಅನುಮಾನವಿದ್ದು, ಪದೇ ಪದೆ ಈ ವಿಚಾರವಾಗಿ ಜಗಳ ನಡೆಯುತ್ತಿತ್ತೆಂದು ಮಾಹಿತಿ ಬಂದಿದೆ. ಏಪ್ರಿಲ್‌ 3ರಂದು ವೆಂಕಟೇಶ್​ ಮನೆಯಲ್ಲಿ ಕಾರ್ಯಕ್ರಮವಿತ್ತು. ಅಂದು ಅವರು ಸಂಬಂಧಿಕರ ಮುಂದೆ ಈ ವಿಚಾರವಾಗಿ ಗಲಾಟೆ ಮಾಡಿದ್ದರು. ನಂತರ ನೀಲವೇಣಿ ಮತ್ತು ಆನಂದ್​ ಸೇರಿ ಕೃತ್ಯ ಎಸಗಿರುವುದಾಗಿ ತನಿಖೆಯಲ್ಲಿ ಗೊತ್ತಾಗಿದೆ” ಎಂದು ಹೇಳಿದರು.

Advertisements

ಈ ಸುದ್ದಿ ಓದಿದ್ದೀರಾ? ಬೀದರ್‌ | ಕಾನೂನು ಬಾಹಿರ ಚಟುವಟಿಕೆ : ಮಾರ್ಚ್ ತಿಂಗಳಲ್ಲಿ 189 ಪ್ರಕರಣ; 431 ಆರೋಪಿಗಳ ಬಂಧನ

“ಈ ಪ್ರಕರಣದಲ್ಲಿ ನೀಲವೇಣಿ, ಆನಂದ್, ಮೊಹಮ್ಮದ್​ ಗೌಸ್​, ಶಿವಶಂಕರ್​ ಅಲಿಯಾಸ್​ ಚಿರು, ಮೊಹಮ್ಮದ್​ ಶಾಯಿದ್​ ಅಲಿಯಾಸ್​ ಜಂಗ್ಲಿ, ದೂದ್ದ, ಮೊಹಮ್ಮದ್​ ಶರೀಫ್​, ಮೊಹಮ್ಮದ್​ ಆಸೀಫ್​ ಮತ್ತು ಮೊಹಮ್ಮದ್​ ಸೊಹೇಲ್​ ಎಂಬುವರನ್ನು ಬಂಧಿಸಲಾಗಿದ್ದು, ಕಾನೂನು ಸಂಘರ್ಷಕ್ಕೆ ಒಳಗಾದ ಇಬ್ಬರು ಬಾಲಕರನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರಿಂದ ಎರಡು ಬೈಕ್​, ಒಂದು ಸ್ಕೂಟರ್​, ಐದು ಮೊಬೈಲ್​, ಎರಡು ಮಚ್ಚು ಸೇರಿದಂತೆ ಕೃತ್ಯಕ್ಕೆ ಬಳಸಿದ ಇತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ” ಎಂದು ತಿಳಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

Download Eedina App Android / iOS

X