ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಲ್ಲ ವೃಂದಗಳ ಹಾಗೂ ಕರ್ನಾಟಕ ಗ್ರಾಮ ಪಂಚಾಯತ್ ಸದಸ್ಯರ ಮಹಾ ಒಕ್ಕೂಟದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಕ್ಟೋಬರ್ 4ರಂದು ಬೆಂಗಳೂರು ಚಲೋ ಹಾಗೂ ಅನಿರ್ದಿಷ್ಟಾವಧಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧ್ಯಕ್ಷರಾದ ನಾಗರಾಜ್ ಗೌಡ ಅವರು ಹೇಳಿದರು.
ಬಳ್ಳಾರಿ ನಗರದ ರೇಣುಕಾ ಕಿಚನ್ ಹೋಟೆಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಳೀಯವಾಗಿ ಗ್ರಾಮ ಪಂಚಾಯತಿಗಳು ಸ್ವಯಂ ಪ್ರೇರಿತ ಸ್ಥಳೀಯ ಸರ್ಕಾರ ನಡೆಸಲು ರಾಜ್ಯದಲ್ಲಿ 1993ನೇ ಇಸವಿಯಲ್ಲಿ 73 ಮತ್ತು 74ನೇ ತಿದ್ದುಪಡಿ ಪ್ರಕಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಕಾಯ್ದೆಯನ್ನು ಜಾರಿಗೆ ತರಲಾಯಿತು. ಜವಾಬ್ದಾರಿ ನಕ್ಷೆ, ಶಿಷ್ಟಾಚಾರ, ಆರೋಗ್ಯ ವಿಮೆ, ಗೌರವಧನ ಹೆಚ್ಚಳ, ಬಸ್ ಪಾಸ್ ನೀಡುವಂತೆ ಒತ್ತಾಯಿಸಲಾಗುವುದು ಎಂದರು.

ಹುಸೇನ್ ಅವರು ಮಾತನಾಡಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಯನ್ನು ಬಿ ಗ್ರೂಪ್ ಹುದ್ದೆ ಎಂದು ಪರಿಗಣಿಸಬೇಕು. ವರ್ಗಾವಣೆ ಆದೇಶ ರದ್ದು, ಜೇಷ್ಟತಾ ಪಟ್ಟಿ ಮಾಡುವುದು, ನರೇಗಾ ಯೋಜನೆ ಸೇರಿದಂತೆ ಮುಂತಾದ ಯೋಜನೆಗಳಿಗೆ ಗುರಿ ನಿಗದಿಪಡಿಸಲಾಗಿದೆ ಅದನ್ನು ರದ್ದುಪಡಿಸಬೇಕು ಎಂದರು.
ಇದನ್ನು ಓದಿದ್ದೀರಾ? ರಾಯಚೂರು | ಲಿಂಗಸುಗೂರು ಪುರಸಭೆಗೆ ಅಧ್ಯಕ್ಷರಾಗಿ ಬಾಬುರೆಡ್ಡಿ ಅವಿರೋಧ ಆಯ್ಕೆ
ದಾದಾ ಸಾಹೇಬ್ ಅವರು ಮಾತನಾಡಿ, ಕನಿಷ್ಠ ವೇತನ ಕೈ ಬಿಟ್ಟು ಇಲಾಖೆ ವೇತನ ಜಾರಿ ಮಾಡಬೇಕು. ಹಳೇ ವೇತನ ಹೆಚ್ಚಳ ಮಾಡಬೇಕು. ಮುಂಬಡ್ತಿ ನೀಡಬೇಕು ಎಂದು ಆಗ್ರಹಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ರಾಜ್ಯ ಉಪಾಧ್ಯಕ್ಷರಾದ ಪಂಪಯ್ಯ, ಸದಾಶಿವ ಎಂ ಶ್ರೀಧರ್, ಶೇಕ್ಷಾವಲಿ ಹುಸೇನ್ ಮರಿಸ್ವಾಮಿ ಸೇರಿದಂತೆ ಮತ್ತಿತರರು ಇದ್ದರು.
