ಕಟ್ಟಡಕ್ಕೆ ತಾತ್ಕಾಲಿಕವಾಗಿ ನಿರ್ಮಿಸಿದ್ದ ಲಿಫ್ಟ್ ಕುಸಿದು ಕಾರ್ಮಿಕ ಸಾವನ್ನಪ್ಪಿರುವ ಘಟನೆ ಬಳ್ಳಾರಿ ನಗರದ ಚಂದ್ರ ಕಾಲೋನಿಯಲ್ಲಿ ನಡೆದಿದೆ.
ಜಿ ವೀರಾಂಜನೇಯಲು ಮೃತಪಟ್ಟ ವ್ಯಕ್ತಿ ನಗರದ ಗೋನಾಳು ರಸ್ತೆಯ ಆಶ್ರಯ ಕಾಲೋನಿಯ ನಿವಾಸಿ ಎಂದು ತಿಳಿದುಬಂದಿದೆ. ನಿರ್ಮಾಣದ ಹಂತದ ಕಟ್ಟಡದಲ್ಲಿ ಅಳವಡಿಸಿದ್ದ ತಾತ್ಕಾಲಿಕ ಲಿಫ್ಟ್ ಕುಸಿದು ಸಾವನ್ನಪ್ಪಿದ್ದಾರೆ.
ಕಟ್ಟಡ ಮಾಲೀಕ ಭೀಮಪ್ಪ ಚಂದ್ರ ಕಾಲೋನಿಯಲ್ಲಿ ಮನೆ ನಿರ್ಮಾಣ ಮಾಡುತ್ತಿದ್ದು, ವೀರಾಂಜನೇಯಲು ಅವರಿಗೆ ಪೈಂಟಿಂಗ್ ಗುತ್ತಿಗೆ ನೀಡಿದ್ದರು. ಕಟ್ಟಡ ನಿರ್ಮಾಣದ ಉದ್ದೇಶ ತಾತ್ಕಾಲಿಕವಾಗಿ ಲಿಫ್ಟ್ ಅಳವಡಿಸಲಾಗಿತ್ತು. ಪೈಂಟಿಂಗ್ ಕಾರ್ಯನಿರ್ವಹಿಸುವುದಕ್ಕೆ ವೀರಾಂಜನೇಯಲು ನಾಲ್ಕನೇ ಮಹಡಿಗೆ ಹೋಗುವ ವೇಳೆ ಲಿಫ್ಟ್ ಕುಸಿದು ಬಿದ್ದು ಗಂಭೀರ ಗಾಯಗೊಂಡಿದ್ದರು. ಕೂಡಲೇ ಅಲ್ಲಿದ್ದ ಜನರು ಸ್ಥಳೀಯ ವಿಮ್ಸ್ ಟ್ರಾಮ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗಿ ನಿಧನರಾದರು ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ದರ್ವೇಶ್ ಗುಂಪಿನಿಂದ ಅವ್ಯವಹಾರ; ವಿಚಾರಣೆ ಮುಂದೂಡಿಕೆ
ವೀರಾಂಜನೇಯಲು ಪತ್ನಿ ಲಕ್ಷ್ಮಿ ಅವರು ಕೌಲ್ ಬಜಾರ್ ಠಾಣೆಗೆ ಕಟ್ಟಡ ಮಾಲೀಕನ ವಿರುದ್ಧ ದೂರು ನೀಡಿ ಪ್ರಕರಣ ದಾಖಲಿಸಿದ್ದಾರೆ.