ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಕುರಿತು ಸಂಸತ್ನಲ್ಲಿ ಅವಹೇಳನಕಾರಿಯಾಗಿ ಮಾತನಾಡಿರುವ ಗೃಹ ಸಚಿವ ಅಮಿತ್ ಶಾ ವಿರುದ್ಧ ಸ್ಥಳೀಯ ವಿವಿಧ ಸಂಘಟನೆ ಪದಾಧಿಕಾರಿಗಳು ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ ಪ್ರತಿಭಟನೆ ನಡೆಸಿದರು.
ಗಂಗಾ ನಗರದ ಗಂಗಾ ಕಮಾನ್ನಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಪ್ರಮುಖ ಬೀದಿಯ ಮೂಲಕ ಸಾಗಿ ಡಾ. ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶಗೊಂಡಿತು.
ಬಳಿಕ ಕರ್ನಾಟಕ ಜನಶಕ್ತಿಯ ರಾಜ್ಯ ಸಮಿತಿ ಸದಸ್ಯ ವಸಂತರಾಜ ಕಹಳೆ ಮಾತನಾಡಿ, ಗೃಹ ಸಚಿವರು ತಮ್ಮ ಸ್ಥಾನದ ಘನತೆ ಮರೆತು ಜನರ ಭಾವನೆಗಳಿಗೆ ಧಕ್ಕೆಯಾಗುವಂತೆ ಅಂಬೇಡ್ಕರ್ ವಿರೋಧಿ ಹೇಳಿಕೆ ನೀಡಿದ್ದು ಖಂಡನಾರ್ಹ. ಅಮಿತ್ ಷಾ ಅವರು ಅಂಬೇಡ್ಕರ್ ನೀಡಿದ ಸಂವಿಧಾನದಡಿ ಅಧಿಕಾರಗ್ರಹಣ ಮಾಡಿ ಅಂಬೇಡ್ಕರ್ ವಿರುದ್ಧವೇ ಮಾತನಾಡಿದ್ದು, ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ದಲಿತ ಮುಖಂಡ ಸಣಾಪುರ ಮರಿಸ್ವಾಮಿ ಮಾತನಾಡಿ, ಅಮಿತ್ ಶಾ ಅವರನ್ನು ಗೃಹ ಸಚಿವ ಸ್ಥಾನದಿಂದ ಕೂಡಲೇ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ಜನಶಕ್ತಿ, ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ, ಭೀಮ್ ಆರ್ಮಿ, ದಲಿತ ಸಂಘರ್ಷ ಸಮಿತಿ, ಆದಿ ಜಗದ್ಗುರು ರೇಣುಕಾಚಾರ್ಯ ಸೇವಾ ಟ್ರಸ್ಟ್, ಅಸ್ಪೃಶ್ಯ ವಿಮೋಚನಾ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ನೇತೃತ್ವ ವಹಿಸಿದ್ದರು. ನಂತರ ತಹಶೀಲ್ದಾರ್ ಎಸ್.ಶಿವರಾಜ ಅವರಿಗೆ ಮನವಿ ಸಲ್ಲಿಸಿದರು.
ಇದನ್ನು ಓದಿದ್ದೀರಾ? ದಾವಣಗೆರೆ | ಅಂಬೇಡ್ಕರ್ಗೆ ಅವಮಾನ: ಅಮಿತ್ ಶಾ ರಾಜೀನಾಮೆಗೆ ಸಂವಿಧಾನ ಸಂರಕ್ಷಣಾ ವೇದಿಕೆ ಆಗ್ರಹ
ಮುಖಂಡರಾದ ಕೆ.ಲಕ್ಷ್ಮಣ, ಶಾಂತಪ್ಪ ಪೂಜಾರಿ, ಈ.ಧನಂಜಯ, ರವಿ ಮಣ್ಣೂರು, ಸಿ.ಬಸವರಾಜ, ಟಿ.ಎಚ್.ಎಂ. ರಾಜಕುಮಾರ್, ಎನ್.ಬುಜ್ಜಿಕುಮಾರ್, ಮುದ್ದಾಪುರ ಗೋಪಾಲ, ಎಸ್.ಬಸವರಾಜ, ಎಚ್.ಕುಮಾರಸ್ವಾಮಿ, ಮೆಟ್ರಿ ಬಸಪ್ಪ, ಯಲ್ಲಪ್ಪ, ಸಾಮಿಲ್ ವಿ.ಶೇಖಪ್ಪ, ವಿ.ಗೋವಿಂದಪ್ಪ, ಸಿ.ರಾಮಪ್ಪ, ಶ್ರೀನಿವಾಸ್ ಹಾಜರಿದ್ದರು.

