ಸಾರ್ವಜನಿಕರಿಂದ ಸಮಗ್ರಹವಾಗಿದ್ದ ಪ್ರಾದೇಶಿಕ ಸಾರಿಗೆ ಕಚೇರಿಯ ₹16.72 ಲಕ್ಷ ನಗದನ್ನು ಬ್ಯಾಂಕಿಗೆ ಜಮೆ ಮಾಡದೇ ಹಣದೊಂದಿಗೆ ಎಸ್‌ಡಿಎ ಸಿಬ್ಬಂದಿಯೊಬ್ಬರು ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ರವಿ ತಾವರೆಕೆಡೆ ಆರ್‌ಟಿಒ ಇಲಾಖೆಯ ಖಜಾನೆ ವಿಭಾಗದ ಉದ್ಯೋಗಿಯಾಗಿದ್ದು, ಜನರಿಂದ ಸಂಗ್ರಹಿಸಲಾಗಿದ್ದ ಹಣದೊಂದಿಗೆ ನಾಪತ್ತೆಯಾಗಿದ್ದಾರೆ. ಆರ್‌ಟಿಒ ಅಧಿಕಾರಿ ಶ್ರೀನಿವಾಸಗಿರಿ ದೂರು ಕೊಟ್ಟಿದ್ದು, ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾರ್ವಜನಿಕರಿಗೆ ನೀಡಿರುವ ಸೇವೆಯಿಂದ ಸಂಗ್ರಹಿಸಲ್ಪಟ್ಟಿರುವ ದುಡ್ಡನ್ನು ಆಯಾ ದಿನದಂದೆ ಬ್ಯಾಂಕಿಗೆ ಜಮೆ ಮಾಡಬೇಕು. ಆದರೆ, ಖಜಾನೆ ವಿಭಾಗದ ಎಸ್‌ಡಿಎ ಸುಬ್ಬಂದಿ ರವಿ ತಾವರೆಕೆಡೆ ಹಣ ಜಮೆ ಮಾಡಿಲ್ಲ. ಇಲಾಖಾ ಖಾತೆಯಲ್ಲಿ ಲೆಕ್ಕದ ವ್ಯತ್ಯಾಸ ಕಂಡುಬಂದಿದ್ದು, ಆರ್‌ಟಿಒ ಅಧಿಕಾರಿಗಳು ರವಿ ಮನೆಗೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಆಗ ಮನೆಯಿಂದ ನಾಪತ್ತೆಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಬಳ್ಳಾರಿ | ಜೂ.16 ರಂದು ಅಕ್ಕಿ, ಗೋಧಿ ಬಹಿರಂಗ ಹರಾಜು