ಸಾಹಿತ್ಯ ಚಟುವಟಿಕೆಗಳಿಗಾಗಿಯೇ ಸ್ಥಾಪಿತವಾಗಿರುವ ಬಳ್ಳಾರಿಯ ಸಂಗಂ ಟ್ರಸ್ಟ್, 2022-24 ರವರೆಗೆ ಪ್ರಕಟಗೊಂಡ ಕಾದಂಬರಿ ಪ್ರಕಾರಕ್ಕೆ ʼಸಂಗಂ ಸಾಹಿತ್ಯ ಪುರಸ್ಕಾರʼ ನೀಡಿ ಗೌರವಿಸಲು ಕಾರ್ಯಕ್ರಮ ಆಯೋಜಿಸಿದೆ.
ಇಂದು ಮತ್ತು ನಾಳೆ (ಮೇ.10 & 11) ಬಳ್ಳಾರಿಯ ಜ್ಞಾನಾಮೃತ ಕಾಲೇಜಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಪ್ರಶಸ್ತಿ ಸುತ್ತಿನ ಐದು ಕಾದಂಬರಿಕಾರರನ್ನು ಆಹ್ವಾನಿಸಲಾಗಿದ್ದು, ಈ ಬಾರಿಯ ಸಮಾರಂಭದಲ್ಲಿ ಪ್ರಸಕ್ತ ವರ್ಷದ ಪುರಸ್ಕೃತರ ಹೆಸರನ್ನು ಘೋಷಿಸಲಾಗುವುದು.
ಸಮಕಾಲೀನ ಸೃಜನಶೀಲ ಪ್ರತಿಭೆಗಳನ್ನು ಗುರುತಿಸುತ್ತಾ ತನ್ನ ಕಾರ್ಯಕ್ಷೇತ್ರವನ್ನು ನಿರಂತರವಾಗಿ ವಿಸ್ತರಿಸುತ್ತಿರುವ ಸಂಗಂ ಟ್ರಸ್ಟ್, ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಿ, ವಿಚಾರ ಸಂಕಿರಣಗಳನ್ನು ನಡೆಸುತ್ತಾ ಸಾಹಿತ್ಯ ಚಟುವಟಿಕೆಗಳನ್ನು ಜೀವಂತವಾಗಿರಿಸಿದೆ.
‘ಕನ್ನಡ ಸಮಕಾಲಿನ ಸಾಹಿತ್ಯ ಸ್ವರೂಪ ಹಾಗೂ ಸಂವೇದನೆ – ಮಾತುಕತೆʼ ಎನ್ನುವ ವಿಚಾರ ಸಂಕಿರಣವನ್ನೂ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಕನ್ನಡ ಸಾಹಿತ್ಯಾಸಕ್ತರೆಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಲು ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಡಾ. ಕೆ. ಶಿವಲಿಂಗಪ್ಪ ಹಂದಿಹಾಳು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಬಳ್ಳಾರಿ | ಮೇ 20ರಂದು ಅಂಗನವಾಡಿ ನೌಕರರ ಮುಷ್ಕರ