ಬಳ್ಳಾರಿ | ತುಂಗಭದ್ರಾ ನೀರು ಹಂಚಿಕೆ ಒಪ್ಪಂದ; ಅವಧಿಗೂ ಮುನ್ನ ಬದಲಾವಣೆಗೆ ಪರಿಸರವಾದಿ ಸದಾನಂದ ಹೆಗ್ಗಡಲ್ ಮಠ ಆಗ್ರಹ

Date:

Advertisements

ರಾಷ್ಟ್ರೀಯ ಜಲನೀತಿ(2012)ಗೆ ಅನುಗುಣವಾಗಿ ತುಂಗಭದ್ರಾ ಅಣೆಕಟ್ಟು ನೀರು ಹಂಚಿಕೆ ಒಪ್ಪಂದವು 2026ಕ್ಕೆ ಮುಕ್ತಾಯಗೊಳ್ಳಲಿದ್ದು, ಪ್ರಸ್ತುತ ಒಪ್ಪಂದವನ್ನು ಕೂಡಲೇ ಮರುಪರಿಶೀಲಿಸುವಂತೆ ಒತ್ತಾಯಿಸಿ ಬಳ್ಳಾರಿ ಜಿಲ್ಲೆಯ ಸಂಡೂರಿನ ಪ್ರಮುಖ ಪರಿಸರವಾದಿ ಸದಾನಂದ ಹೆಗ್ಗದಾಳ್ ಮಠ ಅವರು ಕೇಂದ್ರ ಜಲ ಆಯೋಗದ(ಸಿಡಬ್ಲ್ಯೂಸಿ) ಅಧ್ಯಕ್ಷ ಮತ್ತು ರಾಜ್ಯ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಎಲ್ಲ ನಿವಾಸಿಗಳಿಗೆ ಅವರ ಸ್ಥಳವನ್ನು ಲೆಕ್ಕಿಸದೆ ದಿನಕ್ಕೆ ತಲಾ 100 ಲೀಟರ್(ಎಲ್‌ಪಿಸಿಡಿ) ಒದಗಿಸುವುದು, ಸಮಾನ ಅವಧಿಯ ನೀರು ಸರಬರಾಜನ್ನು ಖಾತರಿಪಡಿಸುವ ಏಕರೂಪದ ವಿತರಣಾ ವ್ಯವಸ್ಥೆಯನ್ನು ಸ್ಥಾಪಿಸುವುದು, ಕೃಷಿ ಮತ್ತು ಕೈಗಾರಿಕಾ ಅವಶ್ಯಕತೆಗಳ ಆಧಾರದ ಮೇಲೆ ನೀರಿನ ಹಂಚಿಕೆ, ಹವಾಮಾನ ಬದಲಾವಣೆ ಹೊಂದಾಣಿಕೆ ಕ್ರಮಗಳ ಏಕೀಕರಣ ಮತ್ತು ಸಮರ್ಥ ನೀರಿನ ಬಳಕೆಯ ಅಭ್ಯಾಸಗಳನ್ನು ಉತ್ತೇಜಿಸುವುದು ಸೇರಿದಂತೆ ಹಲವಾರು ಪ್ರಮುಖ ಬೇಡಿಕೆಗಳನ್ನು ಈಡೇಸಬೇಕು ಎಂದು ಪತ್ರದ ಮೂಲಕ ಒತ್ತಾಯಿಸಿದ್ದಾರೆ.

ಈ ಬೇಡಿಕೆಗಳನ್ನು ಬೆಂಬಲಿಸಲು, ಹೆಗ್ಗಡಲ್ ಮಠ ಅವರು ನಾಲ್ಕು ಅಗತ್ಯ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ನೀರು ಪೂರೈಕೆ ಪ್ರದೇಶಗಳನ್ನು ಪ್ರಸ್ತಾಪಿಸಿದ್ದು, “ಅಣೆಕಟ್ಟಿನಿಂದ ಶೇ.15ರಷ್ಟು ನೀರನ್ನು ಕುಡಿಯುವ ಉದ್ದೇಶಗಳಿಗಾಗಿ ಹಂಚಿಕೆ ಮಾಡಬೇಕು. ನಗರ ಮತ್ತು ಗ್ರಾಮೀಣ ಸಮುದಾಯಗಳಿಗೆ ಆದ್ಯತೆ ನೀಡಬೇಕು. ಬೆಳೆ ಅಗತ್ಯಗಳ ಆಧಾರದ ಮೇಲೆ ಕೃಷಿಗೆ ಶೇ.50ರಷ್ಟು ನೀರು ಪೂರೈಸಬೇಕು. ಸುಸ್ಥಿರತೆಯ ಮೇಲೆ ಕೇಂದ್ರೀಕರಿಸಿ ಕೈಗಾರಿಕಾ ಬಳಕೆಗೆ ಶೇ.10ರಷ್ಟು ಮತ್ತು ಜಲವಿದ್ಯುತ್ ಉತ್ಪಾದನೆಗೆ ಶೇ.25ರಷ್ಟು ನೀರು ಪೂರೈಕೆ ಮಾಡಬೇಕು” ಎಂದು ಆಗ್ರಹಿಸಿದರು.

Advertisements

ಹೆಚ್ಚುವರಿಯಾಗಿ, ಈ ಪ್ರಸ್ತಾಪಗಳನ್ನು ಕಾರ್ಯಗತಗೊಳಿಸಲು ನಾಲ್ಕು ಅಂಶಗಳ ಕಾರ್ಯತಂತ್ರವನ್ನೂ ಕೂಡಾ ರೂಪಿಸಿದ್ದು, ನೀರಿನ ಬಳಕೆಯನ್ನು ಪತ್ತೆಹಚ್ಚಲು ಮೀಟರ್‌ಗಳ ಸ್ಥಾಪನೆ, ಪರಿಣಾಮಕಾರಿ ಸೋರಿಕೆ ಪತ್ತೆ ವ್ಯವಸ್ಥೆ ಸ್ಥಾಪಿಸುವುದು, ನೀರಿನ ಸಂರಕ್ಷಣೆಯ ಬಗ್ಗೆ ಸಾರ್ವಜನಿಕ ಶಿಕ್ಷಣ ಮತ್ತು ಮೇಲ್ವಿಚಾರಣಾ ಸಮಿತಿಗಳ ರಚನೆಯನ್ನು ಒಳಗೊಂಡಿದೆ.

ಈ ಕ್ರಮಗಳಿಗೆ ಕಾಲಮಿತಿಯ ಸೂಚನೆ: 2024-2025ರಲ್ಲಿ ಮರು ಮಾತುಕತೆ ಮತ್ತು ಒಪ್ಪಂದದ ಕರಡು, ನಂತರ 2026ರಲ್ಲಿ ಹೊಸ ಒಪ್ಪಂದದ ಅನುಷ್ಠಾನ ಎಂಬುದನ್ನು ಸೂಚಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಹುಬ್ಬಳ್ಳಿ | ಸಾರಿಗೆ ಸಿಬ್ಬಂದಿ, ನಿರ್ವಾಹಕರ ಮೇಲೆ ಹಲ್ಲೆ; ಬಸ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ನಿರ್ಧಾರ

“ಹೊಸ ಒಪ್ಪಂದವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಲು ದೃಢವಾದ ಕರಡನ್ನು ರಚಿಸಲು ಸಹಾಯ ಮಾಡುವ ಹಲವಾರು ಪೂರಕ ದಾಖಲೆಗಳನ್ನು ಉಲ್ಲೇಖಿಸಿದ್ದು, ಇವುಗಳಲ್ಲಿ 2012ರ ರಾಷ್ಟ್ರೀಯ ಜಲ ನೀತಿ, 1976ರ ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ (ಕೆಡಬ್ಲ್ಯೂಡಿಟಿ) ತೀರ್ಪು, 1953ರ ತುಂಗಭದ್ರಾ ಮಂಡಳಿಯ ಸಂವಿಧಾನ ಆದೇಶ, ಸಂಬಂಧಿತ ಜಲವಿಜ್ಞಾನ ದತ್ತಾಂಶ ಮತ್ತು ಜನಸಂಖ್ಯೆಯ ಅಂದಾಜುಗಳು ಸೇರಿವೆ” ಎಂದು ಹೆಗ್ಗಡಲ್ ಮಠ ತಿಳಿಸಿದ್ದಾರೆ.

ನೀರಿನ ಸಮಾನ ವಿತರಣೆಗೆ ಅನುಕೂಲವಾಗುವಂತೆ ಸಿಡಬ್ಲ್ಯೂಸಿ ಕೂಡಲೇ ಮರು ಮಾತುಕತೆಗಳನ್ನು ಪ್ರಾರಂಭಿಸುವುದು ಅಗತ್ಯವಾಗಿದೆ” ಎಂದು ಒತ್ತಾಯಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

Download Eedina App Android / iOS

X