ಬಳ್ಳಾರಿ | ಉದ್ಯೋಗ, ಆರ್ಥಿಕ ಸಮಾನತೆ ನೀಡುವಲ್ಲಿ ಕೇಂದ್ರ ಬಜೆಟ್ ವಿಫಲ: ಡಿವೈಎಫ್‌ಐ ಆರೋಪ

Date:

Advertisements

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್-2025ನಲ್ಲಿ ರಾಷ್ಟ್ರದ ಅತ್ಯಂತ ತುರ್ತು ಸಮಸ್ಯೆಗಳಾದ ನಿರುದ್ಯೋಗ, ಆರ್ಥಿಕ ಅಸಮಾನತೆಯ ಹೋಗಲಾಡಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕು ಘಟಕ ಡಿವೈಎಫ್‌ಐ ಜಿಲ್ಲಾ ಮುಖಂಡ ನಾಗಭೂಷಣ ಆರೋಪಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಸರ್ಕಾರವು ಜಿಡಿಪಿಯ ಶೇ.4.4ರಷ್ಟು ಆರ್ಥಿಕ ಕೊರತೆಯನ್ನು ಎತ್ತಿ ತೋರಿಸಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.4.8ರಷ್ಟು ಕಡಿಮೆಯಾಗಿದೆ. ಸಾಲದ ಮೇಲಿನ ಭಾರೀ ಅವಲಂಬನೆಯು ಸಾಲದ ಸುಸ್ಥಿರತೆ ಮತ್ತು ಖಾಸಗಿ ಹೂಡಿಕೆಯನ್ನು ಕುಂಠಿತಗೊಳಿಸುವ ಬಗ್ಗೆ ಚಿಂತೆ ಹೆಚ್ಚಿಸುತ್ತದೆ. ಅಂತಿಮವಾಗಿ ಭವಿಷ್ಯದ ಪೀಳಿಗೆಗಳನ್ನು ಅಸುಸ್ಥಿರ ಹೊಣೆಗಾರಿಕೆಗಳೊಂದಿಗೆ ದೊಡ್ಡ ಹೊರೆಯಾಗಲಿದೆ” ಎಂದು ಹೇಳಿದರು.

ಡಿವೈಎಫ್‌ಐ ನಾಗಭೂಷಣ್
ಡಿವೈಎಫ್‌ಐ ಬಳ್ಳಾರಿ ಜಿಲ್ಲಾಧ್ಯಕ್ಷ ನಾಗಭೂಷಣ್

“ಸರ್ಕಾರವು ಆರ್ಥಿಕ ವಿವೇಕ ಮತ್ತು ಬೆಳವಣಿಗೆಯ ಘೋಷಣೆಗಳನ್ನು ಮಾಡಿದರೂ, ಈ ಬಜೆಟ್ ದೇಶದ ಲಕ್ಷಾಂತರ ಯುವಜನರು, ಕಾರ್ಮಿಕರು ಮತ್ತು ಹಿಂದುಳಿದ ಸಮುದಾಯಗಳು ಎದುರಿಸುತ್ತಿರುವ ಕಠಿಣ ಆರ್ಥಿಕ ಸ್ಥಿತಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ” ಅಸಮಾಧಾನ ವ್ಯಕ್ತಪಡಿಸಿದರು.

Advertisements

“ಈ ಬಜೆಟ್‌ನ ಅತ್ಯಂತ ಗಂಭೀರವಾದ ನ್ಯೂನ್ಯತೆಯೆಂದರೆ ನಿರುದ್ಯೋಗದ ಬಗ್ಗೆ ಸಂಪೂರ್ಣ ಮೌನ ವಹಿಸಿರುವುದು. ಯುವಜನರಿಗೆ ಔಪಚಾರಿಕ ಉದ್ಯೋಗದ ಒದಗಿಸದಿರುವುದು. ನಿರುದ್ಯೋಗ ಮತ್ತು ಅಲ್ಪ ಉದ್ಯೋಗದ ಸಂಕಟವು ದೇಶದ ಯುವಜನರ ಭವಿಷ್ಯವನ್ನು ಅಂಧಕಾರಮಯಗೊಳಿಸುತ್ತಿದೆ” ಎಂದು ದೂರಿದರು.

“2025ರ ಕೇಂದ್ರ ಬಜೆಟ್ ಸರ್ಕಾರದ ಕಾರ್ಪೊರೇಟ್-ಪರ ಮತ್ತು ಜನ-ವಿರೋಧಿ ನೀತಿಗಳ ಇನ್ನೊಂದು ಉದಾಹರಣೆಯಾಗಿದೆ. ನಿರುದ್ಯೋಗ ಸಂಕಟವನ್ನು ಅಂಗೀಕರಿಸಲು ನಿರಾಕರಿಸುವುದು, ಆದಾಯ ಅಸಮಾನತೆಯನ್ನು ಪರಿಹರಿಸಲು ವಿಫಲವಾಗಿರುವುದು, ಕಾರ್ಮಿಕರು, ರೈತರು ಮತ್ತು ಮಹಿಳೆಯರ ಅಗತ್ಯಗಳನ್ನು ನಿರ್ಲಕ್ಷಿಸುವ ಮೂಲಕ, ಕೇಂದ್ರ ಸರ್ಕಾರವು ಮತ್ತೊಮ್ಮೆ ಜನರ ಕಲ್ಯಾಣಕ್ಕಿಂತ ಕಾರ್ಪೊರೇಟ್ ಲಾಭಗಳಿಗೆ ಆದ್ಯತೆ ನೀಡಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ಉಳ್ಳಾಲ | ಎಡಪಂಥೀಯರೇ ವಿವೇಕಾನಂದ ಚಿಂತನೆಯ ನಿಜ ವಾರಸುದಾರರು: ಚಿಂತಕ ಇಸ್ಮಾಯಿಲ್

“ಉದ್ಯೋಗ ಸೃಷ್ಟಿ ಕಾರ್ಯಕ್ರಮಗಳು, ಬಲವಾದ ಕಾರ್ಮಿಕ ಭದ್ರತೆ ಮತ್ತು ದೇಶದ ಶ್ರಮಿಕ ಜನರಿಗೆ ನ್ಯಾಯಯುತ ಹಾಗೂ ಸಮಾನ ಭವಿಷ್ಯವನ್ನು ಖಚಿತಪಡಿಸಲು ಸಾರ್ವಜನಿಕ ಸೇವೆಗಳಲ್ಲಿ ತುರ್ತಾಗಿ ಹೂಡಿಕೆಗಳನ್ನು ಹೆಚ್ಚಿಸಬೇಕು” ಎಂದು ಒತ್ತಾಯಿಸಿದರು.

ಈ ವೇಳೆ ಡಿವೈಎಫ್‌ಐನ ಜಿಲ್ಲಾ ಕಾರ್ಯದರ್ಶಿ ಸ್ವಾಮಿ, ಮುಖಂಡರಾದ ಶರೀಪ್, ಶಿವು, ಲೋಕೇಶ್ ಸೇರಿದಂತೆ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X