ಬಳ್ಳಾರಿ | ₹6 ಕೋಟಿ ಮೌಲ್ಯದ 24 ಸಾವಿರ ಕ್ವಿಂಟಾಲ್ ಜೋಳದಲ್ಲಿ ಹುಳು ಪತ್ತೆ; ನ್ಯಾಯಬೆಲೆ ಅಂಗಡಿಗಳಿಗೆ ಪೂರೈಕೆ

Date:

Advertisements

ಬಳ್ಳಾರಿಯಲ್ಲಿರುವ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ(ಕೆಎಸ್‌ಡಬ್ಲ್ಯೂಸಿ) ಗೋದಾಮಿನಲ್ಲಿ ಸಂಗ್ರಹಿಸಲಾಗಿದ್ದ ಸುಮಾರು 6 ಕೋಟಿ ರೂಪಾಯಿ ಮೌಲ್ಯದ ಸುಮಾರು 24,000 ಕ್ವಿಂಟಾಲ್ ಜೋಳ ಸೇವನೆಗೆ ಯೋಗ್ಯವಲ್ಲವೆಂದು ತಿಳಿದುಬಂದಿದೆ. ಹುಳು ಬಿದ್ದಿರುವ ಜೋಳವನ್ನು ಬಳ್ಳಾರಿ ಜಿಲ್ಲೆ ಮತ್ತು ಸುತ್ತಮುತ್ತಲಿನ ನ್ಯಾಯಬೆಲೆ ಅಂಗಡಿಗಳಿಗೆ ಪೂರೈಸಲಾಗುತ್ತಿದೆ ಎನ್ನಲಾಗಿದೆ.

ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಶುಕ್ರವಾರ ಕೆಎಸ್‌ಡಬ್ಲ್ಯೂಸಿಯ ಯುನಿಟ್-2ರ ಗೋದಾಮಿಗೆ ಭೇಟಿ ನೀಡಿದಾಗ ಇದು ಬೆಳಕಿಗೆ ಬಂದಿತು. ಒಟ್ಟಾರೆಯಾಗಿ, ತಲಾ 50 ಕೆಜಿ ತೂಕದ 48,000 ಚೀಲ ಜೋಳದಲ್ಲಿ ಹುಳ ಪತ್ತೆಯಾಗಿದೆ.

ನ್ಯಾಯಮೂರ್ತಿ ವೀರಪ್ಪ, ಉಪ ನೋಂದಣಾಧಿಕಾರಿ ಅರವಿಂದ್ ಎನ್ ವಿ ಮತ್ತು ಇತರರು ಪ್ರಶ್ನಿಸಿದಾಗ, “ಕೆಎಸ್‌ಡಬ್ಲ್ಯೂದ ಬಳ್ಳಾರಿ ಘಟಕದ ವ್ಯವಸ್ಥಾಪಕಿ ಶರಾವತಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕಿ ಸಕಿನಾ ಅವರು 2024ರ ಮಾರ್ಚ್ 29ರಂದು ಭಾರತೀಯ ಆಹಾರ ನಿಗಮ(ಎಫ್‌ಸಿಐ)ದಿಂದ ಜೋಳ ಸೇವನೆಗೆ ಯೋಗ್ಯವಾಗಿದೆಯೆಂದು ಪ್ರಮಾಣಪತ್ರ ಪಡೆದಿದ್ದೇವೆಂದು ಹೇಳಿದರು. ಹಾಗಾಗಿ ನ್ಯಾಯಬೆಲೆ ಅಂಗಡಿಗಳ ಮೂಲಕ ಜೋಳವನ್ನು ವಿತರಿಸಲು ಹಾವೇರಿ ಮತ್ತು ಇತರ ಜಿಲ್ಲೆಗಳಿಗೆ ಕಳುಹಿಸಲಾಗಿದೆ” ಎಂಬುದು ತಿಳಿದುಬಂದಿದೆ.

Advertisements

“ಜೋಳವು ಪ್ರಾಣಿಗಳು ತಿನ್ನಲೂ ಯೋಗ್ಯವಲ್ಲ. ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಒಟ್ಟಾರೆಯಾಗಿ 48,000 ಚೀಲ ಜೋಳ ವ್ಯರ್ಥವಾಗಿದೆ” ಎಂದು ಉಪ ಲೋಕಾಯುಕ್ತರು ಹೇಳಿದರು.

ಈ ಸುದ್ದಿ ಓದಿದ್ದೀರಾ? ಕೊಡಗು | ʼನಮ್ಮ ಬದುಕೇ ಹೋರಾಟ; ನಾವು ಮತಕ್ಕಾಗಿ ಬೇಕೇ ಹೊರತು ಸಾಮಾಜಿಕ ಬದುಕಿಗಲ್ಲʼ; ಆದಿವಾಸಿಗಳ ಅಳಲು

“ನ್ಯಾಯಮೂರ್ತಿ ವೀರಪ್ಪ ಅವರ ವಾಗ್ವಾದದಿಂದ ಅಸಮಾಧಾನಗೊಂಡ ಶರಾವತಿ, ʼಗೋದಾಮಿಗೆ ಭೇಟಿ ನೀಡಿದ್ದನ್ನು ದೃಢೀಕರಿಸಲು ಜಿಪಿಎಸ್‌ಗೆ ಲಿಂಕ್ ಮಾಡುವ ಫೋಟೋವನ್ನು ಒದಗಿಸುವಂತೆ ಕೇಳಿದರು. ಈ ನಡೆ ನಮ್ಮನ್ನು ಪ್ರಶ್ನಿಸುವ ಹಂತವನ್ನು ತಲುಪಿದ್ದಾರೆಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆʼ ಎಂದು ಉಪ ನೋಂದಣಾಧಿಕಾರಿ ಅರವಿಂದ್ ಎನ್ ವಿ ಹೇಳಿದರು.

“ತೆರಿಗೆದಾರರ ಹಣವನ್ನು ಬಳಸಿ ಜೋಳವನ್ನು ಖರೀದಿಸಲಾಗಿದ್ದು, ಅದನ್ನು ಈ ರೀತಿ ವ್ಯರ್ಥ ಮಾಡಬಾರದು. ಸಂಬಂಧಪಟ್ಟ ಸಚಿವರು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ಕ್ರಮ ಕೈಗೊಳ್ಳುತ್ತೇವೆ” ಎಂದು ಹೇಳಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X