ನಟ ಯಶ್ ಅವರು ಬಳ್ಳಾರಿಗೆ ಭೇಟಿ ನೀಡಿದ್ದ ವೇಳೆ, ಅವರನ್ನು ನೋಡಲು ಬಂದಿದ್ದ ಅಭಿಮಾನಿಯೊಬ್ಬರ ಕಾಲಿನ ಮೇಲೆ ಅವರ ಬೆಂಗಾವಲು ವಾಹನ ಹರಿದಿದೆ. ಅಭಿಯಾನಯ ಕಾಲಿಗೆ ಗಾಯವಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುರುವಾರ, ಬಳ್ಳಾರಿಯ ಬಾಲಾಜಿ ನಗರ ಕ್ಯಾಂಪ್‌ನಲ್ಲಿ ಘಟನೆ ನಡೆದಿದೆ. ಯಶ್ ಅವರ ಅಭಿಮಾನಿ, ಸಿರಗುಪ್ಪ ನಿವಾಸಿ ವಸಂತ ಎಂಬಾತನಿಗೆ ಗಾಯವಾಗಿದೆ.
ಬಳ್ಳಾರಿ ಹೊರವಲಯದಲ್ಲಿ ನಿರ್ಮಾಪಕ ಕೊರ್‍ರಪಾಟಿ ಸಾಯಿ ಅವರು ಅಮೃತೇಶ್ವರ ದೇಗುಲ ನಿರ್ಮಿಸಿದ್ದಾರೆ. ಆ ದೇವಾಲಯದಲ್ಲಿ ನಡೆದ ಶಿವಲಿಂಗ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ಯಶ್ ತೆರಳಿದ್ದರು. ಈ ವೇಳೆ, ಘಟನೆ ನಡೆದಿದೆ.
ಯಶ್ ಅವರನ್ನು ನೋಡಲು ಅವರ ಕಾರನ್ನು ಹಿಂಬಾಲಿಸಿಕೊಂಡು ವಸಂತ್ ಹೋಗಿದ್ದಾನೆ. ಈ ವೇಳೆ, ಆತನ ಕಾಲಿನ ಮೇಲೆ ಬೆಂಗಾವಲು ವಾಹನ ಹರಿದಿದೆ ಎಂದು ತಿಳಿದುಬಂದಿದೆ.
ದೇಗುಲ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿನಿಮಾ ನಿರ್ದೇಶಕ ಎಸ್.ಎಸ್ ರಾಜಮೌಳಿ, ಸಚಿವ ಬಿ ನಾಗೇಂದ್ರ ಸೇರಿದಂತೆ ಹಲವರು ಭಾಗಿಯಾಗಿದ್ದರು.