ಬಳ್ಳಾರಿ | ಎನ್‌ಎಂಡಿಸಿಯಿಂದ ಶಾಸನಾತ್ಮಕ ಉಲ್ಲಂಘನೆ: ಇಸಿ ಪ್ರಮಾಣ ಪತ್ರ ರದ್ದತಿಗೆ ಎಸ್ ಆರ್ ಹಿರೇಮಠ ಆಗ್ರಹ

Date:

ಬಳ್ಳಾರಿಯಲ್ಲಿರುವ ಕೇಂದ್ರ ಉಕ್ಕು ಸಚಿವಾಲಯದ ‘ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ(ಎನ್‌ಎಂಡಿಸಿ) ಒಡೆತನದ ʼಕುಮಾರಸ್ವಾಮಿ ಐರನ್ ಓರ್ ಮೈನ್ಸ್‌ನಲ್ಲಿ ಗಂಭೀರ ಶಾಸನಾತ್ಮಕ ಉಲ್ಲಂಘನೆಗಳು ನಡೆಯುತ್ತಿದ್ದು, ಗಣಿಗಾರಿಕೆಗೆ ನೀಡಿರುವ ಪರಿಸರ ಅನುಮೋದನೆ(ಇಸಿ) ಪ್ರಮಾಣ ಪತ್ರವನ್ನು ಕೂಡಲೇ ರದ್ದುಗೊಳಿಸಬೇಕು’ ಎಂದು ಸಮಾಜ ಪರಿವರ್ತನ ಸಮುದಾಯ(ಎಸ್‌ಪಿಎಸ್) ಮುಖ್ಯಸ್ಥ ಎಸ್ ಆರ್ ಹಿರೇಮಠ ಅವರು ಆಗ್ರಹಿಸಿದ್ದಾರೆ.

- Advertisement -

ಬಳ್ಳಾರಿಯಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, “ಈ ಸಂಬಂಧ ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ದೂರು ಸಲ್ಲಿಸಲಾಗಿದೆ. ಎನ್‌ಎಂಡಿಸಿಯಿಂದ ಆಗುತ್ತಿರುವ ಸಮಸ್ಯೆ ಮತ್ತು ಅದರ ವಿರುದ್ಧ ನಡೆಸಬೇಕಾದ ಹೋರಾಟಗಳ ಕುರಿತು ಚರ್ಚಿಸಲು ವೇಣಿವೀರಾಪುರದ ವೇಮನ ಪೀಠದ ಬಳಿ ಶುಕ್ರವಾರ(ಇಂದು) ಮಧ್ಯಾಹ್ನ ಗಣಿ ಬಾಧಿತ ಪರಿಸರದ ಜನರ ಸಭೆ ನಡೆಸಲಾಗುವುದು” ಎಂದು ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಮೆರಿಕದ ಮಧ್ಯಂತರ ಚುನಾವಣೆ: ಬೆಲೆ ಏರಿಕೆ, ಇರಾನ್ ಯುದ್ಧದ...

ಅಮೆರಿಕದಲ್ಲಿ ಏರುತ್ತಿರುವ ಪೆಟ್ರೋಲ್ ಬೆಲೆ, ದುಬಾರಿಯಾಗುತ್ತಿರುವ ದಿನಬಳಕೆಯ ವಸ್ತುಗಳು ಹಾಗೂ ಇರಾನ್ ವಿರುದ್ಧದ ಯುದ್ಧದ ಆರ್ಥಿಕ ಪರಿಣಾಮಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ದೊಡ್ಡ ರಾಜಕೀಯ ಸವಾಲಾಗಿವೆ. ನವೆಂಬರ್ 3ರಂದು ನಡೆಯಲಿರುವ ಮಧ್ಯಂತರ...

ಖಾಲಿದ್‌ರಂತೆ ಸಿಜೆಪಿ ನಾಯಕರನ್ನೂ ದೀರ್ಘ ಜೈಲುವಾಸದ ಸುಳಿಯಲ್ಲಿ ಸಿಲುಕಿಸುವ...

ಚುನಾವಣಾ ಆಯೋಗದ ಅಕ್ರಮ ಪ್ರಶ್ನಿಸಿದ ಸಿಜೆಪಿ ನಾಯಕರ ವಿರುದ್ಧ ಸರಣಿ ದೂರು ದಾಖಲಿಸಲಾಗುತ್ತಿದೆ. ಮೋದಿ ಸರ್ಕಾರದ ಅವಧಿಯಲ್ಲಿ ‘ವಿಚಾರಣೆಯೇ ಒಂದು ಶಿಕ್ಷೆ’ ಎನ್ನುವ ತಂತ್ರ ಪುನರಾವರ್ತನೆಯಾಗುತ್ತಿದೆಯೇ? ಉಮರ್‌ ಖಾಲಿದ್‌ ರೀತಿಯಲ್ಲೇ ಸೌರವ್ ದಾಸ್,...

ಎಚ್ಚೆತ್ತುಕೊಳ್ಳುತ್ತಿವೆ DMK, YSRCP; ಡಿಲಿಮಿಟೇಷನ್‌ ಮಸೂದೆ ಮತ್ತೆ ಸೋಲುವ...

ಮೋದಿಯವರ ಅಹಂಕಾರದ ಆಡಳಿತಕ್ಕೆ ದಕ್ಷಿಣ ಭಾರತವು ಎಂದಿಗೂ ತಲೆಬಾಗುವುದಿಲ್ಲ, ಮತ್ತು ಈ ಬಾರಿಯ ಅವರ ಹತಾಶೆಯ ರಾಜಕೀಯ ಕುತಂತ್ರಗಳು ಅವರ ಪಾಲಿಗೆ ತಿರುಗುಬಾಣವಾಗಿ ದೇಶದ ಪ್ರಜಾಪ್ರಭುತ್ವವು ಗೆಲ್ಲುವುದು ಖಚಿತ ಮಹಿಳಾ ಮೀಸಲಾತಿ ಎಂಬ ಪವಿತ್ರ...

“ಎನ್‌ಎಂಡಿಸಿ ಸಂಸ್ಥೆಯು ಷರತ್ತಿನಂತೆ ಕನ್‌ವೇಯರ್ ಬೆಲ್ಟ್ ಮೂಲಕ ಅದಿರು ಸಾಗಿಸದೆ, ನಿಯಮಗಳನ್ನು ಗಾಳಿಗೆ ತೂರಿ ಲಾರಿಗಳ ಮೂಲಕ ರವಾನಿಸಲಾಗುತ್ತಿದೆ. ರಣಜಿತ್ ಪುರ, ನರಸಿಂಘಪುರ ಹಾಗೂ ಸುಬ್ಬರಾಯನಹಳ್ಳಿ ಗ್ರಾಮಗಳ ಗ್ರಾಮೀಣ ರಸ್ತೆಗಳ ಮೇಲೆ ನಿರಂತರವಾಗಿ ಕಬ್ಬಿಣದ ಅದಿರನ್ನು ಸಾಗಿಸುತ್ತಿದೆ. ಇದರಿಂದಾಗಿ ಭಾರೀ ಪ್ರಮಾಣದ ಮಾಲಿನ್ಯ ಉಂಟಾಗುತ್ತಿದ್ದು, ಗ್ರಾಮೀಣ ಜನ ತೀವ್ರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವುದಾಗಿ ಎಸ್‌ಪಿಎಸ್ ದೂರಿದೆ. 2021 ಮತ್ತು 2023ರ ಪರಿಸರ ಅನುಮೋದನೆಯ ಕಠಿಣ ಷರತ್ತುಗಳನ್ನು ಎನ್‌ಎಂಡಿಸಿ ಉದ್ದೇಶಪೂರ್ವಕವಾಗಿ ಉಲ್ಲಂಘಿಸುತ್ತಿದೆ ಮತ್ತು ಸುಳ್ಳು ಅನುಪಾಲನಾ ವರದಿಗಳನ್ನು ನೀಡುತ್ತಿದೆ” ಎಂದು ಆರೋಪಿಸಿದರು.

“ಜನವರಿ 19ರಂದು ಎಸ್‌ಪಿಎಸ್ ನೀಡಿದ್ದ ದೂರನ್ನು ಆಧರಿಸಿ, ಪರಿಸರ ಸಚಿವಾಲಯದ ಬೆಂಗಳೂರು ಪ್ರಾದೇಶಿಕ ಕಚೇರಿಯ ವಿಜ್ಞಾನಿಗಳು ಜನವರಿ 27ರಂದು ಗಣಿ ಪ್ರದೇಶದಲ್ಲಿ ಕ್ಷೇತ್ರ ಪರಿಶೀಲನೆ ನಡೆಸಿದ್ದರು. ಈ ವರದಿಯಲ್ಲೂ ಕನ್‌ವೇಯರ್ ಬೆಲ್ಟ್ ಕೆಲಸ ಮಾಡದಿರುವುದು ಹಾಗೂ ಗ್ರಾಮೀಣ ರಸ್ತೆಗಳಲ್ಲಿ ಅದಿರು ಸಾಗಾಟವಾಗುತ್ತಿರುವುದು ದೃಢಪಟ್ಟಿದೆ. ಈ ಹಿಂದೆ ಕೇಂದ್ರ ಉನ್ನತಾಧಿಕಾರ ಸಮಿತಿ ಮತ್ತು ಮೇಲುಸ್ತುವಾರಿ ಪ್ರಾಧಿಕಾರದ ನ್ಯಾಯಮೂರ್ತಿ ಅವರು 2025ರ ಏಪ್ರಿಲ್‌ನಲ್ಲಿ ಈ ಲೋಪವನ್ನು ಎತ್ತಿ ತೋರಿಸಿದ್ದರು. ಬಳಿಕ ಕನ್‌ವೇಯರ್ ಬೆಲ್ಟ್ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸಿದ್ದವು. ಆದರೆ ನಂತರ ಪರಿಸ್ಥಿತಿ ಮತ್ತೆ ಮರುಕಳಿಸಿದ್ದು, ಯಥಾ ಪ್ರಕಾರ ನಡೆಯುತ್ತಿದೆ” ಎಂದರು.

ಇದನ್ನೂ ಓದಿದ್ದೀರಾ? ಯಾದಗಿರಿ | ರೈತ ತರಬೇತಿ ಕೇಂದ್ರ ಉದ್ಘಾಟಿಸಿದ ನಿರ್ಮಲಾ ಸೀತಾರಾಮನ್

“ಗಣಿಬಾಧಿತ ಪರಿಸರ ಮತ್ತು ಸಾರ್ವಜನಿಕ ಹಿತರಕ್ಷಣೆಗಾಗಿ ಎನ್‌ಎಂಡಿಸಿ ತಕ್ಷಣವೇ ಗ್ರಾಮೀಣ ರಸ್ತೆಗಳ ಮೇಲೆ ಅದಿರು ಸಾಗಿಸುವುದನ್ನು ನಿಲ್ಲಿಸಬೇಕು. ಶಾಸನಾತ್ಮಕ ಷರತ್ತುಗಳನ್ನು ಉಲ್ಲಂಘಿಸಿರುವುದಕ್ಕೆ ಎನ್‌ಎಂಡಿಸಿಗೆ ಭಾರೀ ಮೊತ್ತದ ದಂಡ ವಿಧಿಸಬೇಕು ಮತ್ತು ಆ ಹಣವನ್ನು ಕೆಎಂಇಆರ್‌ಸಿಗೆ ಜಮೆ ಮಾಡಬೇಕು. ಸುಳ್ಳು ವರದಿ ನೀಡಿ ದಾರಿತಪ್ಪಿಸಿರುವ ಸಂಸ್ಥೆಗೆ ನೀಡಿರುವ ಪರಿಸರ ಅನುಮೋದನೆ(ಇಸಿ)ಯನ್ನು ತಕ್ಷಣವೇ ವಾಪಸ್ ಪಡೆಯಬೇಕು. ಸುಪ್ರೀಂ ಕೋರ್ಟ್ ನಿಗದಿಪಡಿಸಿರುವ 8.6 ಟನ್ ಗರಿಷ್ಠ ಅದಿರು ಉತ್ಪಾದನಾ ಮಿತಿಯನ್ನು ಮರುಪರಿಶೀಲಿಸಬೇಕು. ಗಣಿಬಾಧಿತ ಸಮುದಾಯಗಳ ಆರೋಗ್ಯ, ರಸ್ತೆ ಸುರಕ್ಷತೆ ಹಾಗೂ ಪರಿಸರ ಸಂರಕ್ಷಣೆಗಾಗಿ ಕೇಂದ್ರ ಪರಿಸರ ಸಚಿವಾಲಯವು ಕಾಲವಿಳಂಬ ಮಾಡದೆ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಜನಸಂಗ್ರಾಮ ಪರಿಷತ್‌ನ ಅಧ್ಯಕ್ಷ ಟಿ ಎಂ ಶಿವಕುಮಾರ್‌, ಹೋರಾಟಗಾರರಾದ ಮೂಲಿಮನಿ ಈರಣ್ಣ, ಗುಜ್ಜೂರ್‌ ಖಲೀಂ ಇದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಜ್ಯದ ಕಬ್ಬು ಬೆಳೆಗಾರರ ಬೇಡಿಕೆಗಳಿಗೆ ತುರ್ತು ಮಧ್ಯಪ್ರವೇಶಿಸಲು ಪ್ರಧಾನಿಗೆ ಸಿಎಂ ಡಿ ಕೆ ಶಿವಕುಮಾರ್ ಮನವಿ

ಸದ್ಯದಲ್ಲೇ ಕಬ್ಬು ಅರೆಯುವ ಋತು ಆರಂಭವಾಗಲಿದ್ದು, ಕರ್ನಾಟಕದ ಕಬ್ಬು ಬೆಳೆಗಾರರ ಬೇಡಿಕೆಗಳಿಗೆ...

ಮುಸ್ಲಿಂ ಕೈಗಾರಿಕೋದ್ಯಮಿಗಳ ಸಂಘದಿಂದ ಅ. 31ರಂದು ‘ಉಡಾನ್ 2026’ – ಹಲವು ಉದ್ಯಮಿಗಳು ಭಾಗಿ

ಕೈಗಾರಿಕಾ ವಲಯದ ಸವಾಲುಗಳನ್ನು ಎದುರಿಸಲು, ಸರ್ಕಾರದ ಸೂಕ್ತ ನೀತಿಗಳ ಬೆಂಬಲ ಪಡೆಯಲು...

ಶೋಷಿತ ವರ್ಗಗಳು ಒಂದಾದರಷ್ಟೇ ರಾಜಕೀಯ ಅಧಿಕಾರ ಸಾಧ್ಯ: ಎಂಎಲ್‌ಸಿ ಹೆಚ್.ಪಿ. ಸುಧಾಮ್ ದಾಸ್

ರಾಜ್ಯದಲ್ಲಿ ರಾಜಕೀಯ ಪಕ್ಷಗಳ ಗಡಿಗಳನ್ನು ಮೀರಿ ಎಲ್ಲ ಶೋಷಿತ ವರ್ಗಗಳನ್ನು ಒಂದೇ...

ಸಿದ್ದರಾಮಯ್ಯ ನಿರ್ಗಮನ ‘ಅಹಿಂದ’ ಮರಕ್ಕೆ ಕೊಡಲಿ ಏಟು: ಸಮುದಾಯದ ಮತಗಳು ಎತ್ತ?

ಒಂದು ಕಾಲದಲ್ಲಿ ರಾಜ್ಯದ ರಾಜಕಾರಣದ ಗತಿಯನ್ನೇ ಬದಲಿಸಿದ್ದ 'ಅಹಿಂದ' ಚಳವಳಿ ಇಂದು...