ಎರಡು ತಿಂಗಳ ಹಿಂದೆ ಮದುವೆಯಾದ ನವದಂಪತಿ ಹನಿಮೂನ್‌ಗೆ ಬಂದು ಉಜಿರೆಯ ಹೊಟೇಲ್‌ನಲ್ಲಿ ತಂಗಿದ್ದರು. ರಾತ್ರಿ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ ಕೊಲೆಗೆ ಪ್ರಯತ್ನಿಸಿದ ಹಿನ್ನೆಲೆ ಪತಿಯನ್ನು ಬೆಳ್ತಂಗಡಿಯಲ್ಲಿ ಬಂಧಿಸಿಲಾಗಿದೆ.
ರಾಮನಗರ ಜಿಲ್ಲೆಯ ಬಿಡದಿ ತಾಲ್ಲೂಕಿನ ನಂದಗೋಕುಲ ನಿವಾಸಿಯಾಗಿರುವ ವಿಶ್ವನಾಥ (24) ಮತ್ತು 22 ವರ್ಷದ ಯುವತಿ 2025ರ ಮೇ 22ರಂದು ಮದುವೆಯಾಗಿತ್ತು. ಜುಲೈ 22 ರಂದು ರಾತ್ರಿ ಉಜಿರೆಯ ಹೊಟೇಲಿಗೆ ಬಂದು ರೂಮ್ ಪಡೆದು ಉಳಿದುಕೊಂಡಿದರು. ಹೊಟೇಲ್ ರೂಮ್‌ನಲ್ಲಿ ಜುಲೈ 22 ರಂದು ರಾತ್ರಿ ಕುಡಿದ ಮತ್ತಿನಲ್ಲಿ ಪತ್ನಿಗೆ ವರದಕ್ಷಿಣೆಗಾಗಿ ಕಿರುಕುಳ ನೀಡಿ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದಾನೆ ಎಂದು ಆರೋಪಿಸಿ ಪತ್ನಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಜುಲೈ 23 ರಂದು ಪತಿ ವಿಶ್ವನಾಥ ವಿರುದ್ಧ ದೂರು ನೀಡಿದ್ದಾರೆ.
ಇದನ್ನೂ ಓದಿ: ಮಂಗಳೂರು | ಜುಲೈ 27ರಂದು ದಕ ಜಿಲ್ಲಾ ಮಹಿಳಾ ಸಮ್ಮೇಳನ
ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪತಿ ವಿಶ್ವನಾಥ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿ ಪತಿ ವಿಶ್ವನಾಥ್ ನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.