ಬೆಳ್ತಂಗಡಿಯ ಲೋಬೋ ಟವರ್ಸ್ ನ ಮೊದಲನೇ ಮಹಡಿಯಲ್ಲಿ ಜಮಾತೆ ಇಸ್ಲಾಮಿ ಹಿಂದ್ ಸಮಾಜ ಸೇವಾ ಘಟಕವನ್ನು ಬಿ.ಸಿ.ಸಿ.ಐ ಅಧ್ಯಕ್ಷರಾದ ರೊನಾಲ್ಡ್ ಲೋಬೋರವರು ಸಸಿಗೆ ನೀರು ಹಾಕುವುದರ ಮೂಲಕ ಕಚೇರಿಯನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಕೀಲರಾದ ಅಬಿನ್ ಪ್ರಾನ್ಸಿಸ್, ಶೇಕ್ ಕುಂಞಿ, ಸಮಾಜ ಸೇವಕರಾದ ಆನ್ಸಾರ್ ರವರು ಶುಭ ಹಾರೈಸಿದರು. ತರುವಾಯ ಸಮಾಜ ಸೇವೆ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಅಬ್ದುಲ್ ಗಫೂರ್ ರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೊನೆಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಜಿಲ್ಲಾ ಸಂಚಾಲಕರಾದ ಅಬ್ದುಲ್ ಕರೀಮ್ ಅವರು ಸಮಾರೋಪ ನುಡಿಗಳನ್ನಡುತ್ತಾ, “ಸಮಾಜ ಸೇವಾ ಘಟಕವು ಬೇರೆ ಬೇರೆ ಕಡೆಗಳಲ್ಲಿ ಕಾರ್ಯವನ್ನು ನಿರ್ವಹಿಸುತ್ತಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಮಾಹಿತಿಯನ್ನು ಜನ ಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಈ ಕಚೇರಿಯನ್ನು ತೆರೆಯಲಾಗಿದೆ. ಸಾರ್ವಜನಿಕರು ಈ ಕಚೇರಿಯ ಪ್ರಯೋಜನವನ್ನು ಪಡೆದುಕೊಳ್ಳಬೇಕು” ಎಂದು ಹೇಳಿದರು.
ಇದನ್ನು ಓದಿದ್ದೀರಾ? ದ್ವೇಷ, ಸುಳ್ಳಿನ ವಿರುದ್ಧ ಕಾನೂನು ತರುವುದಕ್ಕೂ ಮುನ್ನ ಸರ್ಕಾರ ಸಮಗ್ರವಾದ ಚರ್ಚೆ ನಡೆಸಲಿ: ಶಿವಸುಂದರ್
ಕಾರ್ಯಕ್ರಮದಲ್ಲಿ ಅಯ್ಯೂಬ್ ಅಲದಂಗಡಿ, ಮೊಹಮ್ಮದ್ ಶಾಫಿ, ಅಬ್ದುಸ್ಸಲಾಂ ಸಿ ಎಚ್ ಉಳ್ಳಾಲ, ಸರ್ಫರಾಝ್ ತೀರ್ಥಹಳ್ಳಿ, ಅಸ್ಲಂ ಉಪ್ಪಿನಂಗಡಿ, ಸಲಾಂ ಪಕ್ಕಲಡ್ಕ ಮತ್ತಿತರರು ಉಪಸ್ಥಿತರಿದ್ದರು.


