ಹಲವು ಮೃತದೇಹಗಳನ್ನು ಹೂತು ಹಾಕಿರುವ ದೂರಿನ ಸಂಬಂಧ ಈಗಾಗಲೇ ಎಸ್‌ಐಟಿ ತನಿಖೆ ನಡೆಸುತ್ತಿದ್ದು, 8ನೇ ದಿನದಂದು ಕೂಡ ಉತ್ಖನನ ಕಾರ್ಯ ಕೂಡ ನಡೆಸಿದೆ. ಈ ನಡುವೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎರಡು ಪ್ರಕರಣಗಳನ್ನು ಎಸ್‌ಐಟಿ ತಂಡಕ್ಕೆ ವಹಿಸಲು ಡಿಜಿಪಿ & ಐಜಿಪಿ ಆದೇಶಿಸಿದ್ದಾರೆ.
ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಜುಲೈ 31 ರಂದು 6 ನೇ ಗುರುತು ಮಾಡಿದ ಜಾಗದಲ್ಲಿ ಪತ್ತೆಯಾದ ಅಸ್ಥಿಪಂಜರ ಪ್ರಕರಣ ಆಗಸ್ಟ್ 1 ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ಮತ್ತು ಆಗಸ್ಟ್ 4 ರಂದು ಅಪ್ರಾಪ್ತ ಬಾಲಕಿಯನ್ನು ಕಾನೂನು ಬಾಹಿರವಾಗಿ ಹೂತು ಹಾಕಿರುವ ಬಗ್ಗೆ ಜಯಂತ್.ಟಿ ನೀಡಿದ ದೂರಿನ ಪಿಟಿಷನ್ ಪ್ರಕರಣವನ್ನು ಮುಂದಿನ ತನಿಖೆಗಾಗಿ ಕರ್ನಾಟಕ ರಾಜ್ಯದ ಡಿಜಿಪಿ & ಐಜಿಪಿ ರವರು ಆ.5 ರಂದು ಎಸ್.ಐ.ಟಿ ಗೆ ನೀಡಲು ಆದೇಶಿಸಿದ್ದಾರೆ.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಿನಾಂಕ 01.08.2025 ರಂದು ವರದಿಯಾಗಿದ್ದ ಯು.ಡಿ.ಆರ್ ಸಂಖ್ಯೆ: 35/2025, ಕಲಂ: 174 (3) & (VI) ಸಿ.ಆರ್.ಪಿ.ಸಿ ಪ್ರಕರಣ ಹಾಗೂ ದಿನಾಂಕ:04.08.2025 ರಂದು ವರದಿಯಾಗಿದ್ದ 200/DPS/2025 ದೂರರ್ಜಿಯನ್ನು, ಮುಂದಿನ ವಿಚಾರಣೆಗಾಗಿ ಎಸ್.ಐ.ಟಿ ತಂಡಕ್ಕೆ ಹಸ್ತಾಂತರಿಸುವಂತೆ ಕರ್ನಾಟಕದ ಡಿ.ಜಿ.ಪಿ & ಐ.ಜಿ.ಪಿ ಆದೇಶಿಸಿದ್ದಾರೆ.