ಲಿಂಗಾಯತ ಧರ್ಮ ಗ್ರಂಥವಾದ ವಚನ ಸಾಹಿತ್ಯವನ್ನು ವಿಕೃತಗೊಳಿಸುವ ಹುನ್ನಾರ ಇಟ್ಟುಕೊಂಡು ಪ್ರಕಟಿಸಿರುವ ‘ವಚನ ದರ್ಶನ’ ಕೃತಿಯನ್ನು ವಿರೋಧಿಸುತ್ತೇವೆ. ಲಿಂಗಾಯತ ಧರ್ಮ ಹಿಂದೂ ಧರ್ಮದ ಭಾಗವಲ್ಲ. ಈ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಬಸವ ತತ್ವಾಭಿಮಾನಿಗಳು ಒಕ್ಕೊರಲ ತೀರ್ಮಾನ ಕೈಗೊಂಡಿದ್ದಾರೆ.
ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ಬೆಂಗಳೂರಿನ ಅನುಭವ ಮಂಟಪದಲ್ಲಿ ಇತ್ತೀಚೆಗೆ ಬಸವ ತತ್ವಾಭಿಮಾನಿಗಳ ಸಭೆ ನಡೆಯಿತು.
ಈ ಸಭೆಯಲ್ಲಿ ರಾಜ್ಯದ ಬೇರೆ ಬೇರೆ ಭಾಗಗಳಿಂದ ಆಗಮಿಸಿದ್ದ 70ಕ್ಕೂ ಹೆಚ್ಚು ಬಸವಾನುಯಾಯಿ ಸಾಹಿತಿಗಳು, ಪ್ರಾಧ್ಯಾಪಕರು, ಚಿಂತಕರು, ರೈತರು ಹಾಗೂ ವಿದ್ವಾಂಸರು ಸೇರಿ ಲಿಂಗಾಯತ ಧರ್ಮದ ಮೇಲೆ ಮತ್ತು ಲಿಂಗಾಯತ ಮಠಗಳು ಮತ್ತು ಸ್ವಾಮೀಜಿಗಳ ಮೇಲೆ ನಡೆಯುತ್ತಿರುವ ಆಕ್ರಮಣ-ದಾಳಿ ಹಾಗೂ ಲಿಂಗಾಯತದ ಧರ್ಮಗ್ರಂಥವಾದ “ವಚನ ಸಾಹಿತ್ಯ’ವನ್ನು ವಿಕೃತಗೊಳಿಸುತ್ತಿರುವ ಶಕ್ತಿಗಳ ವಿರುದ್ಧ ಹೇಗೆ ಹೋರಾಟ ನಡೆಸಬೇಕು ಮತ್ತು ಈ ಹೋರಾಟವನ್ನು ರಾಜ್ಯದ ಎಲ್ಲ ಭಾಗಗಳಿಗೂ ಒಯ್ಯುವುದು ಹೇಗೆ ಎಂಬುದರ ಬಗ್ಗೆ ಸುದೀರ್ಘವಾದ ಚರ್ಚೆ-ಸಂವಾದ ಮತ್ತು ವಿಚಾರ-ವಿನಿಮಯ ನಡೆಸಲಾಯಿತು.

ವಚನ ಸಾಹಿತ್ಯವನ್ನು ಮತ್ತು ಲಿಂಗಾಯತ ಧರ್ಮವನ್ನು ಚಾತುರ್ವರ್ಣ ವ್ಯವಸ್ಥೆಯ ಭಾಗವನ್ನಾಗಿ ಮಾಡುವ ಪುರೋಹಿತಶಾಹಿ ಪ್ರಯತ್ನ ಇದಾಗಿದೆ. ಲಿಂಗಾಯತವು ಹಿಂದೂ ಧರ್ಮದ ಭಾಗವೆಂದು ಹೇಳುತ್ತಿರುವ ಕೆಲವು ಲಿಂಗಾಯತ ಸ್ವಾಮಿಗಳ ನಿಲುವು ಖಂಡನೀಯ. ಲಿಂಗಾಯತ ಧರ್ಮವು ಹಿಂದೂ ಧರ್ಮದ ಭಾಗವಲ್ಲ. ಲಿಂಗಾಯತ ಧರ್ಮ ಗ್ರಂಥವಾದ ವಚನ ಸಾಹಿತ್ಯವನ್ನು ವಿಕೃತಗೊಳಿಸುವ ಪುರೋಹಿತಶಾಹಿಯ ಪ್ರಯತ್ನಗಳನ್ನು ಹಾಗೂ ಇಂತಹ ಕೃತಿಗಳ ಪ್ರಕಟಣೆ ನಿಲ್ಲಿಸಬೇಕು ಎಂದು ಸಭೆ ಆಗ್ರಹಿಸಿದೆ.
ಲಿಂಗಾಯತ ಧರ್ಮಕ್ಕೆ ವಿರುದ್ಧವಾದ ಗುಡಿ ಸಂಸ್ಕೃತಿ, ಕರ್ಮ ಸಿದ್ಧಾಂತ, ಮರ ಸುತ್ತುವುದು, ನೀರಲ್ಲಿ ಮುಳುಗುವುದು, ದಾನ-ದಕ್ಷಿಣೆ, ಮಹಿಳೆಯರನ್ನು ಕೀಳಾಗಿ ಕಾಣುವುದು, ಸೂತಕ, ಹೋಮ-ಹವನ ಆಚರಿಸುವುದು ಮುಂತಾದ ಗೊಡ್ಡು ಆಚರಣೆಗಳಿಂದ, ಕಂದಾಚಾರಗಳಿಂದ ಲಿಂಗಾಯತರು ಮತ್ತು ಲಿಂಗಾಯತ ಮಠಗಳು-ಸ್ವಾಮಿಗಳು ದೂರವಿರಬೇಕು. ಲಿಂಗಾಯತ ಪ್ರಣಾಳಿಕೆಗೆ ಮತ್ತು ಬಸವ ಸಂವಿಧಾನಕ್ಕೆ ಅನುಸಾರವಾಗಿ ಲಿಂಗಾಯತರು ನಡೆದುಕೊಳ್ಳಬೇಕೆಂದು ಸಭೆಯು ಕರೆ ನೀಡಿದೆ.

ಲಿಂಗಾಯತ ಸಮಾಜವನ್ನು, ಸಂಘಟನೆಯನ್ನು ಗಟ್ಟಿಗೊಳಿಸಲು ಮತ್ತು ಅದರ ಮೇಲೆ ನಡೆಯುತ್ತಿರುವ ದಾಳಿಯನ್ನು ವಿರೋಧಿಸಲು ಹಾಗೂ ಬಸವಾನುಯಾಯಿಗಳನ್ನು ಜಾಗೃತಗೊಳಿಸಲು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಮಾವೇಶ ನಡೆಸಲು ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಅಲ್ಲದೇ, ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿಯನ್ನು ಸಭೆಯಲ್ಲಿ ಖಂಡಿಸಲಾಯಿತಲ್ಲದೇ, ಅವರ ಪರವಾಗಿ ನಾವು ನಿಲ್ಲುತ್ತೇವೆ ಎಂದು ನಿರ್ಣಯ ತೆಗೆದುಕೊಳ್ಳಲಾಯಿತು.
ಈ ಸಭೆಯಲ್ಲಿ ಬೇಲಿಮಠ ಸ್ವಾಮೀಜಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್ ಎನ್ ಮುಕುಂದರಾಜ್, ಹಿರಿಯ ವಚನ ಸಾಹಿತ್ಯ ವಿದ್ವಾಂಸ ಗೊ.ರೂ. ಚನ್ನಬಸಪ್ಪ, ಮಾಜಿ ಸಂಸದ ಎಲ್ ಹನುಮಂತಯ್ಯ, ಶರಣ ಅರವಿಂದ ಜತ್ತಿ, ಶ್ರೀಮತಿ ಲೀಲಾ ಸಂಪಿಗೆ, ಆಶಾದೇವಿ, ಅಗ್ರಹಾರ ಕೃಷ್ಣಮೂರ್ತಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ಟಿ.ಆರ್. ಚಂದ್ರಶೇಖರಯ್ಯ, ಮಂಗಳೂರು ವಿವಿಯ ವಿಶ್ರಾಂತ ಪ್ರಾಧ್ಯಾಪಕ ಡಾ.ಎಚ್.ಎಂ. ಸೋಮಶೇಖರಪ್ಪ, ಬಸವ ತತ್ವದ ಮುಖಂಡರಾದ, ಸಂಯೋಜಕರಾದ ಎಚ್ ಸಿ ಉಮೇಶ್ ಸೇರಿದಂತೆ ಹಲವು ಮಂದಿ ಪ್ರಮುಖರು ಭಾಗವಹಿಸಿದ್ದರು.

ಅರವಿಂದ ಜತ್ತಿಯಂತಹವರು ಅಲ್ಲಿಯು ಇಲ್ಲಿಯು ಎಲ್ಲಯೂ ಸಲ್ಲುವಂತೆ ನಡೆಯುತ್ತಾರೆ ಅಂತ ನನ್ನ ಭಾವನೆ(ಅದು ಒಂದು ಮಟ್ಟಕ್ಕೆ ಅನಿವಾರ್ಯ ಎಂಬ ಪರಿಸ್ತಿತಿ ನಮ್ಮ ಧರ್ಮದಲ್ಲಿ ಇರೋದು ನಿಜ ಹಾಗು ವಿಪರ್ಯಾಸ)
ಮುಕುಂದರಾಜ್ ಮತ್ತು ಕೃಷ್ಣಮೂರ್ತಿ ಎಂಬ ಹೆಸರಿನ ವ್ಯಕ್ತಿಯ ಹೆಸರಿನಲ್ಲೇ ಸಾಕ್ಷಾತ್ ವಿಷ್ಣು ಇದ್ದಾನೆ ಇನ್ನೇನು ಪುರೋಹಿತ ಸಾಯಿ ಬಗ್ಗೆ ನೀವು ಹೋರಾಡ್ತಿರಿ ?
ಮುಕುಂದ ಅಂದ್ರೆ ಕೃಷ್ಣ ಅಂದ್ರೆ ನಾರಾಯಣ
ಕೃಷ್ಣ ಮೂರ್ತಿ ಎಂದರು ನಾರಾಯಣ ಎಲ್ಲೋ ಒಂದು ಕಡೆ ಹಿಂದೂವನ್ನು ಒಪ್ಪಿಕೊಂಡಂತಾಯಿತು. ಅಲ್ಲವೇ ? ಮೊದಲು ನಿಮ್ಮ ಜಾತಿಯಲ್ಲಿರುವ ಪುರೋಹಿತರನ್ನ ಪುರೋಹಿತ್ಯ ಮಾಡುವವರನ್ನು ನಿಲ್ಲಿಸುವಂತೆ ಮಾಡಿ ಆಮೇಲೆ ಉಳಿದವರಿಗೆ ಹೇಳಿವಂತೆ ವಾನರಗಳು ರಾವಣನ ಸಾಮ್ರಾಜ್ಯವನ್ನು ಹಾಳು ಮಾಡಿದವು ನಿಮ್ಮಂತ ಕಪಿಗಳು ರಾಮರಾಜ್ಯವನ್ನು ಭಾರತವನ್ನು ಹಾಳು ಮಾಡಲು ಹೊರಟಿದ್ದೀರಿ. ನಿಮ್ಮ ಕೈಯಲ್ಲಿ ಇನ್ನು ಹತ್ತು ಜನಮ ಎತ್ತಿ ಬಂದರೂ ಈ ಭಾರತವನ್ನು ಏನು ಅಲ್ಲಾಡಿಸುವುದು ಸಾಧ್ಯವಿಲ್ಲ ಮಂಗಗಳ!