ಬೆಂಗಳೂರು | ನವರಂಗ ಸರ್ಕಲ್‌ನಲ್ಲಿ ಸಂಚಾರ ದಟ್ಟಣೆ: ಹೈರಾಣಾದ ವಾಹನ ಸವಾರರು, ಪ್ರಯಾಣಿಕರು

Date:

Advertisements

ಬೆಂಗಳೂರು ನಗರದ ನವರಂಗ ಸರ್ಕಲ್‌ನಲ್ಲಿ ಬೆಳಿಗ್ಗೆ 11ರಿಂದಲೂ ವಾಹನ ಸಂಚಾರ ದಟ್ಟಣೆ ಉಂಟಾಗಿದ್ದು, ಸಾರ್ಜನಿಕರಿಗೆ ಅನಾನುಕೂಲವಾಗಿರುವ ಘಟನೆ ಸಂಭವಿಸಿತು. ಇದರಿಂದ ವಾಹನ ಸವಾರರು ಮತ್ತು ಪ್ರಯಾಣಿಕರು ಕೆಲಕಾಲ ಸಿಗ್ನಲ್‌ನಲ್ಲಿಯೇ ಹೈರಾಣಾದ ಪರಿಸ್ಥಿತಿ ಕಂಡುಬಂದಿತು.

ನಾಲ್ಕೂ ಕಡೆ ರಸ್ತೆಗಳಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಒಮೊಮ್ಮೆ 15 ನಿಮಿಷಕ್ಕೂ ಅಧಿಕ ಸಮಯ ಸಂಚಾರ ದಟ್ಟಣೆ ಉಂಟಾಗಿತ್ತು. ಅಲ್ಲದೆ ಕಿಕ್ಕಿರಿದ ಜನಸಂದಣಿಯಿಂದ ವಾಹನ ಸಂಚಾರಕ್ಕೆ ಕಿರಿಕಿರಿಯಾಗಿದ್ದು, ಪ್ರಯಾಣಿಕರು ಪರದಾಡುವಂತಾಯಿತು.

ಬಿಎಂಟಿಸಿ ನಿರ್ವಾಹಕರೊಬ್ಬರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಬೆಳಿಗ್ಗೆಯಿಂದಲೂ ಇದೇ ರೀತಿ ಸಂಚಾರ ದಟ್ಟಣೆ ಉಂಟಾಗಿದೆ. ಅರ್ಧ ಗಂಟೆ ಸಮಯ ವ್ಯರ್ಥವಾಗುತ್ತಿದೆ. ಯಾವುದೋ ಅಂಗಡಿಯವರು ಏನೋ ಆಫರ್‌ ನೀಡಿದ್ದಾರೆಂಬ ಕಾರಣಕ್ಕೆ ಜನದಟ್ಟಣೆ ಉಂಟಾಗಿದೆ. ಟ್ರಾಫಿಕ್‌ ಪೊಲೀಸ್‌ನವರೂ ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ಸುಮ್ಮನಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisements
ವಾಹನ ದಟ್ಟಣೆ

ಪ್ರಯಾಣಿಕರೊಬ್ಬರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಅರ್ಧ ಗಂಟೆಯಿಂದ ಬಸ್‌ನಲ್ಲಿಯೇ ಕೂತಿದ್ದೇವೆ. ಯಾವುದೇ ವಾಹನಗಳು ಚಲಿಸದೆ ದಟ್ಟಣೆ ಉಂಟಾಗಿದೆ. ನಾವು ತುರ್ತಾಗಿ ಹೋಗಬೇಕಿದೆ. ಇಲ್ಲಿ ನೋಡಿದರೆ ಇಷ್ಟೊತ್ತಿನಿಂದ ಕಾಯುವಂತಹ ಪರಿಸ್ಥಿತಿ ಎದುರಾಗಿದೆ. ಇತ್ತ ಇಳಿದು ಹೋಗುವಂತೆಯೂ ಇಲ್ಲ, ಕಾದು ಕೂರುವಂತೆಯೂ ಇಲ್ಲ ಎನ್ನುವಂತಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.

“ಇಂತಹ ಸಂದರ್ಭಗಳಿದ್ದಾಗ ಹೆಚ್ಚಿನ ಟ್ರಾಫಿಕ್‌ ಸಿಬ್ಬಂದಿಗಳು ಕಾರ್ಯ ನಿರ್ವಹಿಸುವ ಮೂಲಕ ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕು. ಇಲ್ಲಿ ನೋಡಿದರೆ ಒಬ್ಬರೇ ಒಬ್ಬರು ಸಿಬ್ಬಂದಿ ಕಾಣುತ್ತಿದ್ದು, ನಿಯಂತ್ರಿಸಲು ಅಸಹಾಯಕರಾಗಿದ್ದಾರೆ. ಸಂಚಾರ ದಟ್ಟಣೆ ತಡೆಯುವಲ್ಲಿ ವಿಫಲರಾಗಿದ್ದಾರೆ” ಎಂದರು.

ವಾಹನ ದಟ್ಟಣೆ 1

ಘಟನೆಗೆ ಸಂಬಂಧಿಸಿದಂತೆ ಈ ದಿನ.ಕಾಮ್‌ ಮಲ್ಲೇಶ್ವರಂ ಟ್ರಾಫಿಕ್‌ ಪೊಲೀಸ್‌ ಠಾಣೆಯನ್ನು ಸಂಪರ್ಕಿಸಿದಾಗ ಮಾತನಾಡಿದ ಸಿಬ್ಬಂದಿ, “ಅಲ್ಲಿಯ ಅಂಗಡಿಯೊಂದರಲ್ಲಿ ವಸ್ತುಗಳ ಆಫರ್‌ ಬಿಟ್ಟಿದ್ದಾರೆಂದು ಜನಸಂದಣಿ ಉಂಟಾಗಿದೆ. ಅಂಗಡಿಯವರು ನಮ್ಮಿಂದ ಯಾವುದೇ ರೀತಿಯ ಪರ್ಮಿಷನ್‌ ತೆಗೆದುಕೊಂಡಿರಲಿಲ್ಲ. ಆದ ಕಾರಣ ನಮಗೆ ಜನಸಂದಣಿಯಾಗುವ ಕುರಿತು ತಿಳಿದಿರಲಿಲ್ಲ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಡಿ ಕೆ ಶಿವಕುಮಾರ್ ಬಳಿಕ ಕಾಂಗ್ರೆಸ್ ಶಾಸಕ ರಂಗನಾಥ್‌ರಿಂದ ಆರ್‌ಎಸ್‌ಎಸ್ ಗೀತೆ ಗುಣಗಾನ!

“ಈಗ ನಮ್ಮ ಟ್ರಾಫಿಕ್‌ ಸಿಬ್ಬಂದಿ ಹಾಗೂ ಹೊಯ್ಸಳ ಪೊಲೀಸರು ಸೇರಿಕೊಂಡು ಸಂಚಾರ ತೆರವು ಕಾರ್ಯ ಮಾಡುತ್ತಿದ್ದಾರೆ” ಎಂದು ತಿಳಿಸಿದರು.

ನವರಂಗ ಸರ್ಕಲ್‌ನಲ್ಲಿ ಜನದಟ್ಟಣೆ ಉಂಟಾದ ಕಾರಣ ಅಂಗಡಿಯೊಂದರ ಬಾಗಿಲನ್ನು ಮುಚ್ಚಿಸಿದ್ದು, ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

WhatsApp Image 2025 07 12 at 17.38.34 e1752322718567
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧಾರವಾಡ | ಬೆಣ್ಣೆಹಳ್ಳ ಸೇತುವೆ ದುರಸ್ತಿಗೆ ಮುಂದಾಗಲು ಸಚಿವ ಸಂತೋಷ್ ಲಾಡ್ ಸೂಚನೆ

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ತಡಹಾಳ ಹತ್ತಿರದ ದೊಡ್ಡಹಳ್ಳ ಹಾಗೂ ಬೆಣ್ಣೆಹಳ್ಳ...

ಧರ್ಮಸ್ಥಳ ಪ್ರಕರಣ | ನನ್ನ ಬಂಧನ ರಾಜಕೀಯ ಪಿತೂರಿಯ ಭಾಗ: ಮಹೇಶ್ ಶೆಟ್ಟಿ ತಿಮರೋಡಿ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಧಾರವಾಡ | ಮಕ್ಕಳ ಸಮಗ್ರ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಿಸುವುದು ಎಲ್ಲರ ಕರ್ತವ್ಯ: ಕೆ. ನಾಗಣ್ಣಗೌಡ

ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ವಾತಾವರಣವನ್ನು ನಿರ್ಮಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ....

ಹುಬ್ಬಳ್ಳಿ | ಕುರುಬ ಸಮಾಜದ ಕುಲಶಾಸ್ತ್ರ ಅಧ್ಯಯನವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲು ಒತ್ತಾಯ

ರಾಜ್ಯ ಸರ್ಕಾರ ಪಶುಪಾಲಕರ ಹಾಗೂ ಕುರಿಗಾರರ ದೌರ್ಜನ್ಯ ಕಾಯ್ದೆ ಜಾರಿಗೆ ತಂದಿರುವ...

Download Eedina App Android / iOS

X