ಬೆಂಗಳೂರು | ಮ್ಯಾಟ್ರೀಮೋನಿಯಲ್ಲಿ ಪರಿಚಯವಾದ ಯುವತಿಯಿಂದ ಟೆಕ್ಕಿಗೆ ₹1.14 ಕೋಟಿ ವಂಚನೆ

Date:

Advertisements
  • ಹಣ ವಸೂಲಿ ಮಾಡುವ ಉದ್ದೇಶದಿಂದ ನಕಲಿ ಹೆಸರಿನ ಪ್ರೊಫೈಲ್ ಸೃಷ್ಟಿಸಿದ್ದ ಯುವತಿ
  • ಕೆಲ ದಿನಗಳ ಮಟ್ಟಿಗೆ ವಿಶೇಷ ತರಬೇತಿಗಾಗಿ ಬೆಂಗಳೂರಿಗೆ ಬಂದಿದ್ದ ಟೆಕ್ಕಿ

ದಿನಕಳೆದಂತೆ ಸಾಮಾಜಿಕ ಜಾಲತಾಣಗಳಲ್ಲಿ ವಂಚನೆ ಪ್ರಕರಣಗಳು ವರದಿಯಾಗುತ್ತಿವೆ. ಇದೀಗ ಮ್ಯಾಟ್ರೀಮೋನಿಯಲ್ಲಿ ಪರಿಚಯವಾದ ಯುವತಿಯೊಬ್ಬಳು ಬೆಂಗಳೂರು ಟೆಕ್ಕಿಗೆ ಬ್ಲ್ಯಾಕ್‌ಮೇಲ್ ಮಾಡಿ ಬರೋಬ್ಬರಿ ₹1.14 ಕೋಟಿ ದೋಚಿದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ಮನೀಶ್ (41) (ಹೆಸರು ಬದಲಾಯಿಸಲಾಗಿದೆ) ಎಂಬ ವ್ಯಕ್ತಿ, ಬೆಂಗಳೂರಿನ ಕೆ.ಆರ್.ಪುರ ನಿವಾಸಿ. ಇವರು ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಅವರು ಯುನೈಟೆಡ್ ಕಿಂಗ್ ಡಮ್ ನಲ್ಲಿ ಸೇವೆ ಸಲ್ಲಿಸುತ್ತಿದ್ದು, ಕೆಲ ದಿನಗಳ ಮಟ್ಟಿಗೆ ವಿಶೇಷ ತರಬೇತಿಗಾಗಿ ಬೆಂಗಳೂರಿಗೆ ಬಂದಿದ್ದರು.

ಇದೇ ವೇಳೆ, ಮನೆಯಲ್ಲಿ ಮನೀಶ್ ಅವರಿಗೆ ಮದುವೆ ಮಾಡಲು ಹೆಣ್ಣು ಹುಡುಕಾಟ ಆರಂಭಿಸಿದ್ದರು. ಹೀಗಾಗಿ, ಅವರು ಮ್ಯಾಟ್ರಿಮೋನಿಯ ವೆಬ್ ಸೈಟ್‌ವೊಂದರಲ್ಲಿ ವಿವರಗಳೊಂದಿಗೆ ಪ್ರೊಫೈಲ್ ಕ್ರಿಯೇಟ್ ಮಾಡಿಕೊಂಡಿದ್ದರು. ಈ ಸಮಯದಲ್ಲಿ ಮ್ಯಾಟ್ರೀಮೋನಿಯಲ್ಲಿ ಓರ್ವ ಯುವತಿ ಪರಿಚಯವಾಗಿತ್ತು. ಇಬ್ಬರು ಮೊಬೈಲ್ ಸಂಖ್ಯೆಗಳನ್ನು ವಿನಿಮಯ ಮಾಡಿಕೊಂಡು, ಮಾತನಾಡಲು ಪ್ರಾರಂಭಿಸಿದ್ದರು. ಇಬ್ಬರು ಕೂಡ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದರು ಎನ್ನಲಾಗಿದೆ.

Advertisements

ಯುವತಿ ಹಾಗೂ ಮನೀಶ್ ಇಬ್ಬರೂ ಎಂದಿಗೂ ವೈಯಕ್ತಿಕವಾಗಿ ಭೇಟಿಯಾಗಿಲ್ಲ. ಯುವತಿ ತಾನು ತನ್ನ ತಾಯಿಯೊಂದಿಗೆ ವಾಸಿಸುತ್ತಿರುವುದಾಗಿ ಮತ್ತು ತನ್ನ ತಂದೆ ಬದುಕಿಲ್ಲ ಎಂದು ಹೇಳಿಕೊಂಡಿದ್ದಾಳೆ. ಮದುವೆ ಮಾಡಿಕೊಳ್ಳುವುದಾಗಿ ಯುವತಿ ಮನೀಶ್‌ಗೆ ತಿಳಿಸಿದ್ದಾಳೆ.

ಜುಲೈ 2ರಂದು ಯುವತಿ ತನ್ನ ತಾಯಿಯ ಆರೋಗ್ಯ ಸಮಸ್ಯೆ ಹೇಳಿ ಮನೀಶ್‌ನಿಂದ ₹1,500 ಸಾಲ ಪಡೆದಿದ್ದಳು. ಬಳಿಕ, ಜುಲೈ 4ರಂದು ಮನೀಶ್‌ನೊಂದಿಗೆ ವಿಡಿಯೊ ಕಾಲ್‌ನಲ್ಲಿ ಮಾತಾಡುತ್ತಿರುವಾಗ ಯುವತಿ ವಿವಸ್ತ್ರಗೊಂಡು ಮನೀಶ್‌ಗೆ ತಿಳಿಸದೆ ಕರೆಯನ್ನು ರೆಕಾರ್ಡ್ ಮಾಡಿದ್ದಳು.

ಬಳಿಕ ಯುವತಿ ಕರೆ ಮಾಡಿ ಹಣವನ್ನು ನೀಡದಿದ್ದರೆ ಈ ವಿಡಿಯೊ ಕ್ಲಿಪ್ ಅನ್ನು ನಿನ್ನ ತಂದೆ-ತಾಯಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ನಂತರ ಮನೀಶ್ ₹1,14,00,000 ಕೋಟಿ ಹಣವನ್ನು ಯುವತಿ ಹೇಳಿದ ಎರಡು ವಿಭಿನ್ನ ಬ್ಯಾಂಕ್ ಖಾತೆಗಳಿಗೆ ಮತ್ತು ನಾಲ್ಕು ಫೋನ್ ಸಂಖ್ಯೆಗಳಿಗೆ ಹಣವನ್ನು ಕಳುಹಿಸಿದ್ದಾರೆ.

ಹಣವನ್ನು ಠೇವಣಿ ಮಾಡಿದ ನಂತರವೇ ಮಹಿಳೆಯ ನಿಜವಾದ ಹೆಸರು ಟೆಕ್ಕಿಗೆ ತಿಳಿದಿದೆ. ಆಕೆ ಹೆಚ್ಚಿನ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುವುದನ್ನು ಮುಂದುವರಿಸಿದಾಗ ಮನೀಶ್ ಪೊಲೀಸರನ್ನು ಸಂಪರ್ಕಿಸಿದ್ದಾನೆ.

ಈ ಸುದ್ದಿ ಓದಿದ್ದೀರಾ? ರಾಜ್ಯಪಾಲರನ್ನು ಬಿಟ್ಟು ಹಾರಿದ ವಿಮಾನ; ಇಬ್ಬರು ಏರ್ ಏಶಿಯಾ ಸಿಬ್ಬಂದಿ ಅಮಾನತು

ಜನರಿಂದ ಹಣ ವಸೂಲಿ ಮಾಡುವ ಉದ್ದೇಶದಿಂದ ಯುವತಿ ನಕಲಿ ಹೆಸರಿನ ಪ್ರೊಫೈಲ್ ಸೃಷ್ಟಿಸಿರಬೇಕು. ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ತನಿಖೆ ಕೈಗೆತ್ತಿಕೊಂಡ ಬಳಿಕ ಯುವತಿಗೆ ವರ್ಗಾವಣೆ ಮಾಡಿದ ಹಣದಲ್ಲಿ ಸುಮಾರು ₹84 ಲಕ್ಷ ಹಣವನ್ನು ಫ್ರೀಜ್ ಮಾಡಲಾಗಿದೆ. ಮಹಿಳೆ ಈಗಾಗಲೇ 30 ಲಕ್ಷ ಬಳಸಿರಬಹುದು. ಇಂಥ ಕರೆಗಳು ಬಂದಾಗ ಸಾರ್ವಜನಿಕರು ತಕ್ಷಣ ಕರೆಯನ್ನು ಕಟ್ ಮಾಡಬೇಕು. ಕೂಡಲೇ ಪೊಲೀಸರ ಗಮನಕ್ಕೆ ತರಬೇಕು” ಡಿಸಿಪಿ (ವೈಟ್‌ಫೀಲ್ಡ್) ಎಸ್ ಗಿರೀಶ್ ಹೇಳಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು: ಕೆ ವಿ ಪ್ರಭಾಕರ್

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು. ನೋಟಕ್ಕೆ...

ಬೆಂಗಳೂರು | ಹವಾಮಾನ ಕ್ರಿಯೆಗೆ ಪರಿಣಾಮಕಾರಿ ಕೊಡುಗೆ ನೀಡಲು ಅದರ ಮಹತ್ವ ತಿಳಿಯುವುದು ಅಗತ್ಯ: ಪ್ರೀತಿ ಗೆಹ್ಲೋಟ್

ಹವಾಮಾನ ಕ್ರಿಯೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು, ಮಕ್ಕಳು ಅದರ ಮಹತ್ವ ಮತ್ತು...

ಅರ್ಧದಲ್ಲಿ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರದಲ್ಲೇ ಮುಗಿಸಿ: ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್

ಬೆಂಗಳೂರು ನಗರದಲ್ಲಿ ಅರ್ಧದಲ್ಲೇ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಹಾಗೂ ರಸ್ತೆ ಕತ್ತರಿಸಿರುವ...

Download Eedina App Android / iOS

X