- ಪ್ರೇಯಸಿಯ ಮೇಲೆ ಅನುಮಾನಗೊಂಡ ಪ್ರಿಯಕರ ಅವಳ ಹುಟ್ಟುಹಬ್ಬ ಆಚರಿಸಿದ ಬಳಿಕ ಹತ್ಯೆ
- ಪೊಲೀಸ್ ಇಲಾಖೆಯ ಆಂತರಿಕ ಭದ್ರತಾ ವಿಭಾಗದಲ್ಲಿ ಕ್ಲರ್ಕ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮೃತ ಯುವತಿ
ಪ್ರೇಯಸಿಯ ಮೇಲೆ ಅನುಮಾನಗೊಂಡ ಪ್ರಿಯಕರ ಅವಳ ಹುಟ್ಟುಹಬ್ಬ ಆಚರಿಸಿದ ಬಳಿಕ ಹತ್ಯೆ ಮಾಡಿದ್ದಾನೆ. ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಬೆಂಗಳೂರಿನ ಲಗ್ಗೆರೆಯಲ್ಲಿ ಈ ಘಟನೆ ನಡೆದಿದ್ದು, ನವ್ಯ (24) ಕೊಲೆಯಾದ ದುರ್ದೈವಿ. ಈ ಯುವತಿ ಪೊಲೀಸ್ ಇಲಾಖೆಯ ಆಂತರಿಕ ಭದ್ರತಾ ವಿಭಾಗದಲ್ಲಿ ಕ್ಲರ್ಕ್ ಆಗಿ ಕಾರ್ಯನಿರ್ವಹಿಸುತ್ತಿದ್ದಳು. ಬೇರೊಬ್ಬ ಯುವಕನೊಂದಿಗೆ ತನ್ನ ಪ್ರೇಯಸಿ ಚಾಟ್ ಮಾಡುತ್ತಿದ್ದಾಳೆ ಎಂದು ಅನುಮಾನಿಸಿದ ಪ್ರಿಯಕರ ಆಕೆಯ ಹುಟ್ಟುಹಬ್ಬ ಆಚರಿಸಿ ಯುವತಿಯನ್ನು ಪ್ರಿಯಕರ ಪ್ರಶಾಂತ್ ಹತ್ಯೆ ಮಾಡಿದ್ದಾನೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತಮುತ್ತ ವಾಹನ ನಿಲುಗಡೆಗೆ ನಿರ್ಬಂಧ; ಎಲ್ಲೆಲ್ಲಿ?
ಕಳೆದ ಆರು ವರ್ಷಗಳಿಂದ ಪ್ರಶಾಂತ್ ಹಾಗೂ ನವ್ಯ ಇಬ್ಬರು ಪ್ರೀತಿಸುತ್ತಿದ್ದರು. ಈ ಇಬ್ಬರೂ ಕನಕಪುರ ಮೂಲದ ದೂರದ ಸಂಬಂಧಿಕರು.
ಕಳೆದ ಮಂಗಳವಾರ ನವ್ಯ ಹುಟ್ಟಿದ ಹಬ್ಬದ ದಿನ ಇತ್ತು. ಆ ದಿನ ಪ್ರಶಾಂತ್ ಬ್ಯುಸಿ ಇದ್ದೇನೆ ಎಂದು ಹೇಳಿದ್ದನು. ನಂತರ ಏ.14ರಂದು ಅವಳ ಹುಟ್ಟಿದ ಹಬ್ಬದ ಆಚರಣೆಗೆ ತಯಾರಿ ಮಾಡಿದ್ದನು. ರಾತ್ರಿ ವೇಳೆ ಕೇಕ್ ಕಟ್ ಮಾಡಿ ತಿನ್ನಿಸಿದ್ದನು. ಬಳಿಕ ಹರಿತವಾದ ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾನೆ.
ಮೃತ ಯುವತಿಯ ಶವವನ್ನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ತನಿಖೆ ಮುಂದುವರೆಸಿದ್ದಾರೆ.