- ರಾಡ್ನಿಂದ ದಂಪತಿ ಮೇಲೆ ಹಲ್ಲೆ ಮಾಡಿದ ಆರೋಪಿ ಮಗ
- ಘಟನಾ ಸ್ಥಳಕ್ಕೆ ಕೊಡಿಗೆಹಳ್ಳಿ ಪೊಲೀಸರ ಭೇಟಿ ನೀಡಿ ಪರಿಶೀಲನೆ
ಬೆಂಗಳೂರಿನ ಕೊಡಿಗೆಹಳ್ಳಿ ಬ್ಯಾಟರಾಯನಪುರದಲ್ಲಿ ಹೆತ್ತ ತಂದೆ-ತಾಯಿಯನ್ನೇ ಮಗ ಬರ್ಬರವಾಗಿ ಕೊಲೆ ಮಾಡಿದ ಘಟನೆ ನಡೆದಿದೆ.
ಆರೋಪಿ ಶರತ್ ಎಂಬಾತ ತಂದೆ ಭಾಸ್ಕರ್ ರಾವ್, ತಾಯಿ ಶಾಂತಾ ಎಂಬುವವರನ್ನು ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಿದ್ದಾನೆ.
ಮೃತ ತಂದೆ ಭಾಸ್ಕರ್ ರಾವ್ ಖಾಸಗಿ ಕ್ಯಾಂಟೀನ್ವೊಂದರಲ್ಲಿ ಕ್ಯಾಶಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಮೃತ ತಾಯಿ ಶಾಂತಾ ಇತ್ತೀಚೆಗೆ ಕೇಂದ್ರದ ನೌಕರಿಯಿಂದ ನಿವೃತ್ತಿಯಾಗಿ ಮನೆಯಲ್ಲಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಹಿರಿಯ ಪುತ್ರ ಕೆಲಸಕ್ಕೆ ಹೋಗುತ್ತಿದ್ದರು. ಇನ್ನೋರ್ವ ಮಗ ಆರೋಪಿ ಶರತ್ ಮನೆಯಲ್ಲೇ ಇರುತ್ತಿದ್ದನು.
ಈತನಿಗೆ ಕುಡಿಯುವ ಚಟವಿತ್ತು. ಆಗಾಗ ಸೈಕೋ ರೀತಿ ವರ್ತಿಸುತ್ತಿದ್ದನು. ನಿತ್ಯ ಕುಡಿದು ಬಂದು ತಂದೆ-ತಾಯಿ ಜತೆಗೆ ಜಗಳವಾಡುತ್ತಿದ್ದನು. ಜುಲೈ 17ರಂದು ಸಾಯಂಕಾಲ ಕುಡಿದುಕೊಂಡು ಬಂದು ಆರೋಪಿ ತಂದೆ-ತಾಯಿ ಜತೆಗೆ ಜಗಳ ಆರಂಭಿಸಿದ್ದಾನೆ. ಈ ವೇಳೆ, ರಾಡ್ನಿಂದ ಇಬ್ಬರ ಮೇಲೂ ಹಲ್ಲೆ ಮಾಡಿ, ಹತ್ಯೆ ಮಾಡಿದ್ದಾನೆ. ಬಳಿಕ, ಮನೆಯ ಬೀಗ ಹಾಕಿಕೊಂಡು ಪರಾರಿಯಾಗಿದ್ದಾನೆ.
ಜುಲೈ 18ರ ಬೆಳಗ್ಗೆ ಇನ್ನೋರ್ವ ಮಗ ತಂದೆ ತಾಯಿಗೆ ಕರೆ ಮಾಡಿದ್ದಾನೆ. ಯಾರೂ ಕರೆ ಸ್ವೀಕರಿಸದ ಕಾರಣ ಪಕ್ಕದ ಮನೆಯವರಿಗೆ ಕರೆ ಮಾಡಿ ಹೇಳಿದ್ದಾನೆ. ಈ ವೇಳೆ ದಂಪತಿ ಇಬ್ಬರು ಕೊಲೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ವಿಷಯ ತಿಳಿದು ಘಟನಾ ಸ್ಥಳಕ್ಕೆ ಕೊಡಿಗೆಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮಿಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಜುಲೈ 17ರ ಸಂಜೆ ಅಥವಾ ರಾತ್ರಿ ಸಮಯದಲ್ಲಿ ಕೊಲೆ ಮಾಡಿರಬಹುದು ಎಂದು ಶಂಕಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | 40 ವರ್ಷದ ಮದ್ಯವ್ಯಸನಿ ಮಗನಿಗೆ ಬೆಂಕಿ ಹಚ್ಚಿದ ತಾಯಿ
ಬೆಂಗಳೂರು | ನೇಣು ಬಿಗುದುಕೊಂಡು ಆತ್ಮಹತ್ಯೆ ಮಾಡಿಕೊಂಡ ಮಹಿಳಾ ಟೆಕ್ಕಿ
ಬೆಂಗಳೂರಿನ ಜೋಗುಪಾಳ್ಯದಲ್ಲಿ ಮಹಿಳಾ ಟೆಕ್ಕಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ದಿವ್ಯಾ(30) ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ. ಜೋಗುಪಾಳ್ಯದಲ್ಲಿರುವ ಪತಿಯ ಮನೆಯಲ್ಲಿ ದಿವ್ಯಾ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಅರವಿಂದ್ ಎಂಬುವವರ ಜತೆಗೆ 2014ರಲ್ಲಿ ದಿವ್ಯಾ ಮದುವೆ ಮಾಡಿಕೊಂಡಿದ್ದರು. ಮದುವೆ ಆದ ನಂತರ ದಿವ್ಯಾಳಿಗೆ ಪತಿಯ ಮನೆಯವರು ಕಿರುಕುಳ ನೀಡುತ್ತಿದ್ದರು. ಪತಿ ಮತ್ತು ಆತನ ಕುಟುಂಬದವರೆ ಮಗಳನ್ನು ಕೊಲೆ ಮಾಡಿದ್ದಾರೆ ಎಂದು ದಿವ್ಯಾಳ ಪೋಷಕರು ಆರೋಪಿಸಿದ್ದಾರೆ.
ದಿವ್ಯಾಳ ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ದಿವ್ಯಾಳ ಪತಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.