- ಬನಶಂಕರಿ ಮಾರ್ಗವಾಗಿ ಸಂಚರಿಸುತ್ತಿದ್ದ ಬಸ್ಸಿನಲ್ಲಿ ಘಟನೆ
- ಕರ್ನಾಟಕದ ಮಹಿಳೆಯರಿಗೆ ಮಾತ್ರ ಶಕ್ತಿ ಯೋಜನೆ
ಕಾಂಗ್ರೆಸ್ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ತನ್ನ ಐದು ಗ್ಯಾರಂಟಿಗಳ ಪೈಕಿ ಶಕ್ತಿ ಯೋಜನೆಯನ್ನು ಜೂನ್ 11ರಂದು ಜಾರಿಗೆ ತಂದಿತ್ತು. ಈ ಯೋಜನೆಯು ಕರ್ನಾಟಕದ ಮಹಿಳೆಯರಿಗೆ ಮಾತ್ರ ಅಲ್ವಯಿಸುತ್ತದೆ ಎಂದು ಸರ್ಕಾರ ಹೇಳಿದೆ. ಹೀಗಾಗಿ, ಮಹಿಳೆಯರು ರಾಜ್ಯದ ನಿವಾಸಿ ಎಂಬುದಕ್ಕೆ ಗುರುತಿನ ಚೀಟಿ ತೋರಿಸಿ ಟಿಕೆಟ್ ಪರೆದುಕೊಳ್ಳಬೇಕೆಂದು ಸರ್ಕಾರ ಹೇಳಿದೆ. ಆದರೆ, ಟೆಕ್ಕಿ ಯುವತಿಯೊಬ್ಬರು ಉಚಿತ ಟಿಕೆಟ್ ಪಡೆಯಲು ಸೂಕ್ತ ದಾಖಲೆ ತೋರಿಸದೆ, ಬಿಎಂಟಿಸಿ ನಿರ್ವಾಹಕರ ಜತೆಗೆ ಜಗಳ ತೆಗೆದಿದ್ದಾರೆ.
ಬಿಎಂಟಿಸಿ ನಿರ್ವಾಹಕ ಜತೆಗೆ ಟೆಕ್ಕಿ ಯುವತಿ ಜಗಳವಾಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬನಶಂಕರಿ ಮಾರ್ಗವಾಗಿ ಸಂಚರಿಸುತ್ತಿದ್ದ ಬಸ್ಸಿನಲ್ಲಿ ಈ ಘಟನೆ ನಡೆದಿದೆ. ಬಿಎಂಟಿಸಿ ನಿರ್ವಾಹಕ ಆಧಾರ ಕಾರ್ಡ್ ಅಥವಾ ವೋಟರ್ ಐಡಿ ತೋರಿಸಿ ಉಚಿತವಾಗಿ ಪ್ರಯಾಣಿಸಿ ಇಲ್ಲವಾದರೆ ಟಿಕೆಟ್ ತೆಗೆದುಕೊಳ್ಳಿ ಎಂದು ಕೇಳಿದ್ದಾರೆ.
ಇದಕ್ಕೆ ಕೆರಳಿದ ಯುವತಿ ನಾನು ಕೇಂದ್ರ ಸರ್ಕಾರದ ಸಿಬ್ಬಂದಿ ನಾನು ದುಡ್ಡು ಕೊಡುವುದಿಲ್ಲ. ನೀನು ಏನು ಬೇಕಾದರೂ ಮಾಡಿಕೋ ಎಂದು ಅವಾಜ್ ಹಾಕಿದ್ದಾರೆ.
ಇದಕ್ಕೆ ಬಿಎಂಟಿಸಿ ನಿರ್ವಾಹಕ ನೀವು ಕೇಂದ್ರ ಸರ್ಕಾರದ ಉದ್ಯೋಗಿ ಎಂಬುದಕ್ಕೆ ಗುರುತಿನ ಚೀಟಿ ತೋರಿಸಿ ಎಂದರೂ ಕೇಳದ ಯುವತಿ ಬಸ್‌ನಲ್ಲಿ ಗಲಾಟೆ ಆರಂಭಿಸಿದ್ದಾಳೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಬೈಯಪ್ಪನಹಳ್ಳಿ-ಕೆ.ಆರ್.ಪುರ ನಡುವೆ ಮೊದಲ ಮೆಟ್ರೋ ಪ್ರಾಯೋಗಿಕ ಸಂಚಾರ ಯಶಸ್ವಿ
“ಕೇಂದ್ರ ಸರ್ಕಾರದ ಉದ್ಯೋಗಕ್ಕೆ ಸಂಬಂಧಿಸಿದ ಗುರುತಿನ ಚೀಟಿಯಲ್ಲಿ ನಿವಾಸದ ವಿಳಾಸವಿದೆ. ಆ ವಿಳಾಸ ಕರ್ನಾಟಕದ್ದು. ಅದನ್ನು ಪರಿಗಣಿಸಿ ಪ್ರಯಾಣಕ್ಕೆ ಅನುಮತಿ ನೀಡಿ ಇಲ್ಲದಿದ್ದರೆ, ನಿಮ್ಮ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ” ಎಂದು ಯುವತಿ ನಿರ್ವಾಹಕರಿಗೆ ಹೇಳಿದ್ದಾರೆ.
ಈ ವೇಳೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಸಹ ಯುವತಿಗೆ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಸೇವೆ ನೀಡಬೇಕಿದ್ದರೆ ಅವರು ಕರ್ನಾಟಕದ ವಸತಿ ವಿಳಾಸಗಳೊಂದಿಗೆ ಸರ್ಕಾರಿ ಗುರುತಿನ ಪುರಾವೆಗಳನ್ನು ಒದಗಿಸಬೇಕು ಎಂದು ಹೇಳಿದ್ದಾರೆ. ಇದಕ್ಕೂ ಯುವತಿ ಕೋಪಗೊಂಡು ಸಹ ಪ್ರಯಾಣಿಕರ ಮೇಲೆ ರೇಗಾಡಿದ್ದಾಳೆ.