- ಪ್ರೀತಿ, ಪ್ರೇಮದ ಜತೆಗೆ ಬೈಕ್ ಕದಿಯುವುದನ್ನೇ ವೃತ್ತಿ ಮಾಡಿಕೊಂಡಿದ್ದ ಆರೋಪಿಗಳು
- ಬಂಧಿತರಿಂದ 3 ಬೈಕ್ ಹಾಗೂ ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೈಕ್ ಕಳ್ಳತನ ಹೆಚ್ಚಾಗಿದ್ದು, ರಾಯಲ್ ಲೈಫ್‌ಗಾಗಿ ಪ್ರೇಮಿಗಳು ಬೈಕ್ ಕದ್ದು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ಆರೋಪಿ ಮುರುಗಾ ಮತ್ತು ಆತನ ಪ್ರೇಯಸಿಯನ್ನ ಮಲೇಶ್ವರಂ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಮುರುಗನ ಪ್ರೀತಿಯಲ್ಲಿ ಬಿದ್ದಿದ್ದ ಯುವತಿಯೂ ಅವನೊಂದಿಗೆ ಬೈಕ್ ಕದಿಯುವುದರಲ್ಲಿ ತೊಡಗಿಸಿಕೊಂಡಿದ್ದಳು. ಪ್ರೀತಿ, ಪ್ರೇಮದ ಜೊತೆಗೆ ಬೈಕ್ ಕದಿಯುವುದನ್ನೇ ವೃತ್ತಿ ಮಾಡಿಕೊಂಡಿದ್ದ ಆರೋಪಿಗಳು ಒಮ್ಮೆ ಮುರುಗಾ ಬೈಕ್ ಅನ್ನು ಕದ್ದರೆ, ಇನ್ನೊಮ್ಮೆ ಪ್ರೇಯಸಿ ಬೈಕ್ ಕದಿಯುತ್ತಿದ್ದಳು. ಈ ಜೋಡಿ ಬೈಕ್ ಕದಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ದ್ವಿಚಕ್ರ ವಾಹನ ಸಂಚಾರ ನಿಷೇಧಕ್ಕೆ ಸಜ್ಜಾದ ಎನ್‌ಎಚ್‌ಎಐ
ಈ ಇಬ್ಬರು ಆರೋಪಿಗಳ ವಿರುದ್ಧ ಶ್ರೀರಾಂಪುರ, ಮಲ್ಲೇಶ್ವರಂ ಸೇರಿ ಹಲವು ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಬೆಂಗಳೂರಿನ ಮಲ್ಲೇಶ್ವರಂ ಪೊಲೀಸರು ಇವರಿಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ 3 ಬೈಕ್ ಹಾಗೂ ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ರಾಯಲ್ ಲೈಫ್‌ಗಾಗಿ ಈ ಜೋಡಿ ಬೈಕ್ ಕದ್ದು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ಬಂದ ಹಣದಲ್ಲಿ ಎಂಡಿಎಂಎ, ಗಾಂಜಾ ಸೇವಿಸಿ ಮೋಜು ಮಾಡುತ್ತಿದ್ದರು.