ಬೆಂಗಳೂರಿನ ಹಡ್ಸನ್ ವೃತ್ತದಲ್ಲಿ ರಸ್ತೆ ದಾಟುತ್ತಿದ್ದ ಮಹಿಳೆ ಕಾಲಿನ ಮೇಲೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಸದ ಲಾರಿಯೊಂದು ಹರಿದಿದೆ.
ರಸ್ತೆ ದಾಟುತ್ತಿದ್ದಾಗ ಮಹಿಳೆಗೆ ಬಿಬಿಎಂಪಿ ಕಸದ ಲಾರಿ ಬಂದು ಡಿಕ್ಕಿ ಹೊಡೆದಿದೆ. ಈ ವೇಳೆ, ಕೆಳಗೆ ಬಿದ್ದ ಮಹಿಳೆಯ ಎರಡೂ ಕಾಲುಗಳ ಮೇಲೆ ಲಾರಿಯ ಚಕಗ್ರಗಳು ಹರಿದಿವೆ. ಇದರ ಪರಿಣಾಮ, ಆಕೆಯ ಎರಡೂ ಕಾಲುಗಳು ತೀವ್ರವಾಗಿ ಗಾಯಗೊಂಡಿವೆ. ಮಹಿಳೆಯ ಸ್ಥಿತಿ ಗಂಭೀರವಾಗಿದೆ. ಈ ಘಟನೆ ಹಲಸೂರು ಗೇಟ್ ಸಂಚಾರ ವ್ಯಾಪ್ತಿಯ ಹಡ್ಸನ್ ಸರ್ಕಲ್ ಬಳಿ ನಡೆದಿದೆ.
ಸ್ಥಳೀಯರು ಮಹಿಳೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆ ಸಂಬಂಧ ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣೆ ಪೊಲೀಸರು ಬಿಬಿಎಂಪಿ ಲಾರಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.