ಬೆಂಗಳೂರು | ಬಿಬಿಎಂಪಿಯಿಂದ ಮರಗಳ ಸುತ್ತ ಕಾಂಕ್ರೀಟ್‌; ಕೆರೆ ಹೋರಾಟಗಾರರ ಆಕ್ರೋಶ

Date:

Advertisements
  • ಮರದ ಪಕ್ಕ ತೆಗೆದ ಗುಂಡಿಗಳನ್ನು ಸಿಮೆಂಟ್‌ನಿಂದ ಮುಚ್ಚುತ್ತಿದ್ದಾರೆ
  • ಬೇರುಗಳು ಹಾನಿಗೊಳಗಾದರೆ ಮರವು ಯಾವಾಗ ಬೇಕಾದರೂ ಬೀಳಬಹುದು

ರಾಜ್ಯ ರಾಜಧಾನಿ ಬೆಂಗಳೂರು ನಗರೀಕರಣದತ್ತ ದಾಪುಗಾಲಿಡುತ್ತಾ ಸಾಗುತ್ತಿದೆ. ಉದ್ಯಾನನಗರಿಯಾಗಿದ್ದ ನಗರ ಇದೀಗ ಕಾಂಕ್ರೀಟ್ ನಗರವಾಗಿ ಬದಲಾಗಿದೆ. ಅದರಂತೆಯೇ ನಗರದಲ್ಲಿರುವ ಮರಗಳ ಸುತ್ತ ಇದೀಗ ಕಾಂಕ್ರೀಟ್‌ ರಾರಾಜಿಸುತ್ತಿದೆ. ಬಿಬಿಎಂಪಿಯು ನಗರದ ಹಲವೆಡೆ ಮರಗಳ ಸುತ್ತ ಗುಂಡಿ ತೆಗೆದು ಬಳಿಕ ಆ ಗುಂಡಿಯನ್ನು ಕಾಂಕ್ರೀಟ್‌ ಹಾಕಿ ಮುಚ್ಚುತ್ತಿದೆ. ಗುಂಡಿ ತೆಗೆಯುವ ವೇಳೆ ನಿರ್ದಾಕ್ಷಿಣ್ಯವಾಗಿ ಮರದ ಬೇರುಗಳನ್ನು ಕತ್ತರಿಸಲಾಗುತ್ತಿದೆ ಎಂದು ಕೆರೆ ರಕ್ಷಣಾ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಈ ದಿನ.ಕಾಮ್‌ ಜತೆಗೆ ಮಾತನಾಡಿದ ಕೆರೆ ಹೋರಾಟಗಾರ ರಾಘವೇಂದ್ರ ಪಶ್ಚಾಪೂರ, “ಬೆಂಗಳೂರಿನ ಪಾದಚಾರಿ ರಸ್ತೆಗಳನ್ನು ಹಲವಾರು ಸರ್ಕಾರಿ ಇಲಾಖೆಗಳು ತನ್ನದೆ ಎಂದು ತಮಗಿಷ್ಟ ಬಂದಂತೆ ಬಳಸುತ್ತಿವೆ. ಈ ಬಳಕೆಯಲ್ಲಿ ಪ್ರತಿಸಲವೂ ಒಂದು ಉದ್ದನೆಯ ಪೋಲನ್ನು ಅಳವಡಿಸುತ್ತಿದ್ದಾರೆ. ಇದಕ್ಕಾಗಿ 2 ರಿಂದ 3 ಅಡಿ ನೆಲ ಅಗೆಯುತ್ತಾರೆ. ನಗರದಲ್ಲಿ ಪಾದಚಾರಿ ರಸ್ತೆಗಳು ಕಿರಿದಾಗಿವೆ. ಅದರಲ್ಲಿ ನಾನಾ ಇಲಾಖೆಗಳು ಈ ರೀತಿಯಲ್ಲಿ ಫುಟ್‌ಪಾತ್‌ಗಳನ್ನು ಅತಿಕ್ರಮಿಸಿಕೊಂಡರೇ ಜನಸಾಮಾನ್ಯರು ನಡೆಯಲು ಜಾಗವಿಲ್ಲದಂತಾಗುತ್ತದೆ. ಅನಿವಾರ್ಯವಾಗಿ ರಸ್ತೆಯ ಮೇಲೆ ಹೆಜ್ಜೆ ಹಾಕಬೇಕಾಗುತ್ತದೆ. ಇದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ” ಎಂದರು.

“ಇದಲ್ಲದೇ, ನಗರದ ಫುಟ್‌ಪಾತ್‌ಗಳಲ್ಲಿ ಹಾಗೂ ರಸ್ತೆಯ ಬದಿಯಲ್ಲಿ ಬಿಬಿಎಂಪಿಯು ಮರಗಳ ಪಕ್ಕದಲ್ಲಿ ಗುಂಡಿಗಳನ್ನು ಅಗೆಯುತ್ತಿದ್ದು, ಅಲ್ಲಿ ವಿದ್ಯುತ್ ಕಂಬಗಳನ್ನು ನೆಡುತ್ತಿದ್ದಾರೆ. ತೆಗೆದ ಗುಂಡಿಗಳನ್ನು ಸಿಮೆಂಟ್‌ನಿಂದ ಮುಚ್ಚುತ್ತಿದ್ದಾರೆ. ಇದು ಕ್ರೌರ್ಯತೆಯ ಪರಮಾವಧಿ” ಎಂದು ತಿಳಿಸಿದರು.ಮರಗಳು

Advertisements

“ಮರಗಳ ಹತ್ತಿರದಲ್ಲೇ ಗುಂಡಿಗಳನ್ನು ತೋಡಿ, ಮುಚ್ಚುತ್ತಿರುವುದರಿಂದ ಇದು ಮರಗಳಿಗೆ ಕೊಡಲಿ ಏಟು ನೀಡಿದಂತಾಗುತ್ತಿದೆ. ಸಿಮೆಂಟ್‌ಯುಕ್ತ ಈ ಗುಂಡಿಗಳು ಹೊಸ ಬೇರುಗಳು ಬೆಳೆಯಲು ಅವಕಾಶ ಮಾಡಿಕೊಡುವುದಿಲ್ಲ. ಇದರಿಂದ ಮರಗಳ ಬೆಳವಣಿಗೆಗೆ ಅಡ್ಡಿಯುಂಟಾಗುತ್ತಿದೆ” ಎಂದು ಹೇಳಿದರು.

“ಒಂದು ಮರದ ಬೇರನ್ನೇ ನಾಶ ಮಾಡಿದರೇ ಮರಗಳು ಹೇಗೆ ಜೀವಿಸಬೇಕು. ಮರಗಳು ಬೆಳೆಯಲು ಬೇರುಗಳು ವಿಶಾಲವಾಗಿ ಹರಡಿಕೊಳ್ಳಲು ಮರಗಳಿಗೆ ಮಣ್ಣು ಬೇಕೇ ವಿನಃ ಕಾಂಕ್ರೀಟ್‌ ಅಲ್ಲ. ಮಾನವೀಯತೆ ಇಲ್ಲದೆ ಇಲಾಖೆ ಅಧಿಕಾರಿಗಳು ಮರಗಳಿಗೆ ಸಿಮೆಂಟ್‌ ಮೆತ್ತಿ ಮುಚ್ಚುತ್ತಿದ್ದಾರೆ. ಮರಗಳು ಇದ್ದರೇ ನಾವು. ಮೊದಲಿಗೆ ನಾವು ಮನುಷ್ಯರಾಗಿ ಕೆಲಸ ಮಾಡಬೇಕು. ಈ ರೀತಿ ಮೃಗಗಳಾಗಿ ವರ್ತಿಸುವುದು ಸರಿ ಅಲ್ಲ” ಎಂದರು.

ಈ ಸುದ್ದಿ ಓದಿದ್ದೀರಾ? ಕಾಂಗ್ರೆಸ್‌ ಆನಂದ್‌ ಕುಮಾರ್‌ ಆಸ್ತಿ ವಿವರದಲ್ಲಿ ವಿಪರೀತ ಸುಳ್ಳು ಮಾಹಿತಿ : ಮೋಹನ್‌ ದಾಸರಿ ಆರೋಪ

“ಬೇರುಗಳಿಗೆ ಅತ್ಯಂತ ಸಮೀಪದಲ್ಲಿ ಸಿಮೆಂಟ್ ಹಾಕುವುದರಿಂದ, ನೀರು ಬೇರುಗಳಿಗೆ ಸೇರಲು ಸಾಧ್ಯವಾಗದಂತೆ ಮಾಡುತ್ತದೆ. ಆಳವಾದ ಬೇರುಗಳಿದ್ದರೂ, ಕೊಂಬೆಗಳಿಗೆ ನೀರು ತಲುಪಲು ಸಹಾಯ ಮಾಡುವಲ್ಲಿ ಅಕ್ಕಪಕ್ಕದ ಬೇರುಗಳು ಪ್ರಮುಖ ಪಾತ್ರವಹಿಸುತ್ತವೆ. ಬೇರುಗಳು ಅರೋಗ್ಯಕರವಾಗಿರುವಂತೆ ಮಾಡಲು ಈ ಅಕ್ಕಪಕ್ಕದ ಬೇರುಗಳು ನಿರ್ಣಾಯಕವಾಗಿವೆ. ಬೇರುಗಳು ಹಾನಿಗೊಳಗಾದರೆ ಮರವು ಯಾವಾಗ ಬೇಕಾದರೂ ಬೀಳಬಹುದು ಮತ್ತು ಮರಗಳು ಮುಖ್ಯ ರಸ್ತೆಗಳಲ್ಲಿ ಇರುವುದರಿಂದ ಪಾದಚಾರಿಗಳಿಗೆ ಅಪಾಯ ಎದುರಾಗುತ್ತವೆ” ಎಂದು ಹೇಳಿದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು: ಕೆ ವಿ ಪ್ರಭಾಕರ್

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು. ನೋಟಕ್ಕೆ...

ಬೆಂಗಳೂರು | ಹವಾಮಾನ ಕ್ರಿಯೆಗೆ ಪರಿಣಾಮಕಾರಿ ಕೊಡುಗೆ ನೀಡಲು ಅದರ ಮಹತ್ವ ತಿಳಿಯುವುದು ಅಗತ್ಯ: ಪ್ರೀತಿ ಗೆಹ್ಲೋಟ್

ಹವಾಮಾನ ಕ್ರಿಯೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು, ಮಕ್ಕಳು ಅದರ ಮಹತ್ವ ಮತ್ತು...

ಅರ್ಧದಲ್ಲಿ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರದಲ್ಲೇ ಮುಗಿಸಿ: ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್

ಬೆಂಗಳೂರು ನಗರದಲ್ಲಿ ಅರ್ಧದಲ್ಲೇ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಹಾಗೂ ರಸ್ತೆ ಕತ್ತರಿಸಿರುವ...

Download Eedina App Android / iOS

X