ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ‘ನಮ್ಮ ಬಿಎಂಟಿಸಿ’ ಮೊಬೈಲ್ ಆ್ಯಪ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದು, ಇದು ನಗರದ ಬಸ್ ಬಳಕೆದಾರರಿಗೆ ಸಂತಸ ತಂದಿದೆ.
ಈ ನಮ್ಮ ಬಿಎಂಟಿಸಿ ಆ್ಯಪ್ ಮೂಲಕ ಪ್ರಯಾಣಿಕರು ತಮ್ಮ ಹತ್ತಿರದ ಬಸ್ ನಿಲುಗಡೆ, ಬಸ್ ಆಗಮನ, ಪ್ರಯಾಣ ದರ ತಿಳಿಯಬಹುದು. ಬಸ್ ಪ್ರಯಾಣಿಸುವ ಮಾರ್ಗದ ಲೈವ್ ಲೊಕೇಷನ್ ಅನ್ನು ಶೇರ್ ಮಾಡಬಹುದು. ನಿಲ್ದಾಣದ ಸುತ್ತಲಿನ ಎಟಿಎಂ, ರೆಸ್ಟೋರೆಂಟ್, ಆಸ್ಪತ್ರೆ, ಪೊಲೀಸ್ ಠಾಣೆ, ಪಾರ್ಕಿಂಗ್ ವ್ಯವಸ್ಥೆ ಮಾಹಿತಿ ಪಡೆಯಬಹುದು. ಈ ಆ್ಯಪ್‌ನಲ್ಲಿ 5,000 ಬಿಎಂಟಿಸಿ ಬಸ್‌ಗಳ ಚಲನೆಯ ನೈಜ-ಸಮಯದ ಮಾಹಿತಿಯನ್ನು ನೀಡುತ್ತದೆ. ಮುಂದಿನ ದಿನಗಳಲ್ಲಿ ಎಲ್ಲ 6500 ಬಸ್‍ಗಳಿಗೂ ಈ ಸೌಲಭ್ಯವನ್ನು ಕಲ್ಪಿಸಲು ನಿರ್ಧರಿಸಲಾಗಿದೆ.
ಬಿಎಂಟಿಸಿಯ ರಜತ ಮಹೋತ್ಸವದ ಅಂಗವಾಗಿ ಸೋಮವಾರ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಇತರರು ಈ ಆ್ಯಪ್ ಅನ್ನು ಬಿಡುಗಡೆ ಮಾಡಿದರು.
ಏಪ್ರಿಲ್‌ನಲ್ಲಿ ಪರೀಕ್ಷಾ ಉದ್ದೇಶಗಳಿಗಾಗಿ, ಜನರಿಗೆ ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ನಿಗಮವು ಅವಕಾಶ ನೀಡಿತ್ತು. ಆ ಸಮಯದಲ್ಲಿ 4,000ಕ್ಕೂ ಹೆಚ್ಚು ಬಸ್‌ಗಳ ನೈಜ ಸಮಯವನ್ನು ಟ್ರ್ಯಾಕ್ ಮಾಡಲಾಯಿತು. ಆ್ಯಪ್, ಬಸ್‌ಗಳಲ್ಲಿ ಕಣ್ಗಾವಲು ವ್ಯವಸ್ಥೆಗಳು, ಪ್ರಯಾಣಿಕರ ಮಾಹಿತಿ ವ್ಯವಸ್ಥೆಗಳು ಮತ್ತು ಇತರ ಸೇವೆಗಳನ್ನು ಪರಿಚಯಿಸಲು ಬಿಎಂಟಿಸಿ ನಿರ್ಭಯ ಯೋಜನೆಯ ಹಣವನ್ನು ಬಳಸಿದೆ.
2014ರಲ್ಲಿ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲು ಬಿಎಂಟಿಸಿ ಪ್ರಯತ್ನಿಸಿತ್ತು. ಆದರೆ, ಹಲವಾರು ತಾಂತ್ರಿಕ ಸಮಸ್ಯೆಗಳಿಂದಾಗಿ ಯಶಸ್ವಿಯಾಗಲಿಲ್ಲ.
ನಮ್ಮ ಬಿಎಂಟಿಸಿ ಆ್ಯಪ್ ಮೂಲಕ ಪ್ರಯಾಣಿಕರು ತಮ್ಮ ಹತ್ತಿರದ ಬಸ್ ನಿಲುಗಡೆ, ಬಸ್ ಆಗಮನ, ಪ್ರಯಾಣ ದರ ತಿಳಿಯಬಹುದು. ಪ್ರಯಾಣಿಸುವ ಮಾರ್ಗದ ಲೈವ್ ಲೊಕೇಷನ್ಅನ್ನು ಶೇರ್ ಕೂಡ ಮಾಡಬಹುದು. ನಿಲ್ದಾಣದ ಸುತ್ತಲಿನ ಎಟಿಎಂ, ರೆಸ್ಟೊರೆಂಟ್, ಆಸ್ಪತ್ರೆ, ಪೊಲೀಸ್ ಠಾಣೆ, ಪಾರ್ಕಿಂಗ್ ವ್ಯವಸ್ಥೆ ಮಾಹಿತಿ ಪಡೆಯಬಹುದು.#NammaBMTC #BMTC pic.twitter.com/mPS6oW17Ww
— DIPR Karnataka (@KarnatakaVarthe) September 26, 2023
ಕೇಂದ್ರ ಸರ್ಕಾರದ ನಿರ್ಭಯ ಯೋಜನೆಯಡಿಯಲ್ಲಿ ಈ ಅಪ್ಲಿಕೇಶನ್ ಬಿಡುಗಡೆಗೊಳಿಸಲಾಗಿದೆ. ಈ ಆ್ಯಪ್ ಮೂಲಕ ಮಹಿಳಾ ಪ್ರಯಾಣಿಕರು ಬಿಎಂಟಿಸಿ ಬಸ್‍ಗಳಲ್ಲಿ ಸಂಚರಿಸುವಾಗ ತುರ್ತು ಸಂದರ್ಭಗಳಲ್ಲಿ ನೆರವು ಪಡೆಯಲು ಪ್ಯಾನಿಕ್ ಎಸ್‍ಒಎಸ್ ಬಟನ್ ಒತ್ತಿದಾಗ ಮಹಿಳಾ ಪ್ರಯಾಣಿಕರು ಸಂಚರಿಸುವ ಮಾರ್ಗದುದ್ದಕ್ಕೂ ನಿರಂತರ ಚಲನವಲನಗಳನ್ನು ಟ್ರ್ಯಾಕಿಂಗ್ ಮಾಡುವ ಮೂಲಕ ಎಚ್ಚರಿಕೆ ವಹಿಸಲಾಗುತ್ತದೆ.
ಬಸ್‍ನಲ್ಲಿನ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ಆನ್ ಬೋರ್ಡ್ ಕ್ಯಾಮೆರಾಗಳು ಕಣ್ಗಾವಲಿಡಲಿವೆ. ತುರ್ತು ಮತ್ತು ಸಂಕಷ್ಟದ ಸಮಯದಲ್ಲಿ ನೆರವು ಒದಗಿಸಲು ಕೇಂದ್ರೀಕೃತ ಸಹಾಯವಾಣಿ ನೀಡಲಾಗಿದೆ.
ಪ್ರಸ್ತುತ ಬಿಎಂಟಿಸಿಯ ಒಟ್ಟು 5000 ಬಸ್ ಗಳಿಗೆ ಟ್ರ್ಯಾಕಿಂಗ್ ಸಾಧನಗಳು, ಪ್ಯಾನಿಕ್ ಬಟನ್, 10,000 ಸಿಸಿಟಿವಿ ಅಳವಡಿಸಲಾಗಿದೆ. ಪ್ರಯಾಣಿಕರು ನಮ್ಮ ಬಿಎಂಟಿಸಿ ಆ್ಯಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.
ಈ ಸುದ್ದಿ ಓದಿದ್ದೀರಾ? ರಾಜ್ಯಾದ್ಯಂತ ಅ.4 ರವರೆಗೆ ಭಾರೀ ಮಳೆ ಸಾಧ್ಯತೆ: ಹವಾಮಾನ ಇಲಾಖೆ
ಆ್ಯಪ್ನಲ್ಲಿ ಟಿಕೆಟ್ ಖರೀದಿಸಲು ಯಾವುದೇ ಅವಕಾಶವಿಲ್ಲ. ಮೊಬೈಲ್ ಆ್ಯಪ್ ಮೂಲಕ ಬಿಎಂಟಿಸಿ ಬಸ್ ಟಿಕೆಟ್ ಖರೀದಿಸಲು ಅನುಕೂಲ ಮಾಡಿಕೊಡಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.