ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ವೊಂದರಲ್ಲಿ ನಿರ್ವಾಹಕ ಮತ್ತು ಪ್ರಯಾಣಿಕನೊಬ್ಬ ಪರಸ್ಪರ ಹೊಡೆದಾಡಿಕೊಂಡ ಘಟನೆ ನಡೆದಿದೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಹರಿದಾಡುತ್ತಿದ್ದು, ಎಲ್ಲಡೆ ವೈರಲ್ ಆಗಿದೆ. ಉತ್ತರ ಭಾರತೀಯ ವಲಸಿಗ ಎನ್ನಲಾಗಿರುವ ವ್ಯಕ್ತಿಯೊಬ್ಬರು ಪ್ರಯಾಣಿಸಲು ಬಿಎಂಟಿಸಿ ಬಸ್ ಹತ್ತಿದ್ದಾರೆ. ಈ ವೇಳೆ, ನಿರ್ವಾಹಕರು ಟಿಕೆಟ್ ಪಡೆಯಿರಿ ಎಂದಿದ್ದಕ್ಕೆ ಟಿಕೆಟ್ ಶುಲ್ಕ ನೀಡದೇ ಪ್ರಯಾಣಿಕ ನಿರ್ವಾಹಕನ ಜತೆಗೆ ಅಸಭ್ಯವಾಗಿ ಮಾತನಾಡಿದ್ದಾನೆ. ಈ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದೆ ಎಂದು ವಿಡಿಯೋ ಮೂಲಕ ತಿಳಿದುಬಂದಿದೆ.
ಇವರ ಜಗಳವನ್ನು ತಡೆಯಲು ಇಬ್ಬರು ಮಹಿಳೆಯರು ಪ್ರಯತ್ನಿಸುತ್ತಿದ್ದು, ಆದರೂ ಇಬ್ಬರು ಬಿಡದೆ ಹೊಡೆದಾಡಿಕೊಂಡಿದ್ದಾರೆ. ಬಳಿಕ, ಮಧ್ಯೆ ಪ್ರವೇಶಿಸಿದ ಬಸ್ ಚಾಲಕ ಪ್ರಯಾಣಿಕರನಿಗೆ ಬೈದು ಟಿಕೆಟ್ ದರ ನೀಡುವಂತೆ ತಿಳಿಸಿದ್ದಾನೆ.
ಈ ಸುದ್ದಿ ಓದಿದ್ದೀರಾ? ನೀರಿನ ಮಾಲಿನ್ಯದಿಂದ ಅಂಬಲಿಪುರ ಕೆರೆಯಲ್ಲಿ ಮೀನುಗಳ ಮಾರಣಹೋಮ
ಇದೇ ವೇಳೆ, ನಿರ್ವಾಹಕ ಪೊಲೀಸ್ ಠಾಣೆಗೆ ನಡೆಯುವಂತೆ ಬಸ್ ಚಾಲಕನಿಗೆ ತಿಳಿಸಿದ್ದಾನೆ. ಸದ್ಯ ವೈರಲ್ ಆಗಿರುವ ವಿಡಿಯೊಗೆ ಬೆಂಗಳೂರು ಪೊಲೀಸರು ಟ್ವೀಟ್ ಮಾಡಿ, ಘಟನೆ ನಡೆದ ಸ್ಥಳದ ಬಗ್ಗೆ ಮಾಹಿತಿ ನೀಡುವಂತೆ ಕೇಳಿದ್ದಾರೆ.
ಈ ಘಟನೆ ಯಾವಾಗ ನಡೆದಿದ್ದು, ಎಲ್ಲಿ ನಡೆದಿದ್ದು ಎಂಬುದರ ಬಗ್ಗೆ ನಿಖರವಾಗಿ ಮಾಹಿತಿ ತಿಳಿದುಬಂದಿಲ್ಲ.