- ಪತ್ತೆಯಾದ ಗ್ರೆನೇಡ್ ಪರಿಶೀಲನೆ ನಡೆಸುತ್ತಿರುವ ಬಿಡಿಟಿಎಸ್ ಹಾಗೂ ಎಫ್‌ಎಸ್‌ಎಲ್ ತಜ್ಞರು
- ಐವರು ಶಂಕಿತ ಉಗ್ರರ ಪೈಕಿ ಮುದಾಸಿರ್ ಮತ್ತು ಉಮರ್ ಬೆಂಗಳೂರಿನಲ್ಲಿ ಡ್ರಗ್ಸ್ ಮಾರಾಟ
ರಾಜಧಾನಿ ಬೆಂಗಳೂರಿನ 10 ಕಡೆ ಸ್ಪೋಟ ನಡೆಸಲು ಸಂಚು ರೂಪಿಸಿದ್ದ ಐವರು ಶಂಕಿತ ಉಗ್ರರ ಬಂಧನಕ್ಕೆ ಸಂಬಂಧಿಸಿದಂತೆ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ದಿನಕ್ಕೊಂದು ಮಾಹಿತಿ ಹೊರಬೀಳುತ್ತಿದೆ. ಇದೀಗ, ಶಂಕಿತ ಉಗ್ರರ ಮನೆಯಲ್ಲಿ ಪತ್ತೆಯಾದ ಗ್ರೆನೇಡ್ ವಿದೇಶದಿಂದ ಬಂದಿರುವುದು ತನಿಖೆಯಿಂದ ತಿಳಿದುಬಂದಿದೆ.
ಶಂಕಿತ ಉಗ್ರರ ಮನೆಯಲ್ಲಿ ಪತ್ತೆಯಾದ ಗ್ರೆನೇಡ್‌ಗಳನ್ನು ಬಿಡಿಟಿಎಸ್ ಹಾಗೂ ಎಫ್‌ಎಸ್‌ಎಲ್ ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ. ಗ್ರೆನೇಡ್ ಮತ್ತು ಪಿಸ್ತೂಲ್‌ಗಳು ಶಂಕಿತ ಉಗ್ರರಿಗೆ ಕೊರಿಯರ್ ಮೂಲಕ ಬಂದು ಸೇರುತ್ತಿದ್ದವು.
ಪ್ರಮುಖ ಆರೋಪಿಗಳಾದ ನಜೀರ್ ಮತ್ತು ಜುನೈದ್ ಗ್ರೆನೇಡ್ ಮತ್ತು ಪಿಸ್ತೂಲ್ ಬಗ್ಗೆ ಯಾರಿಗೂ ತಿಳಿಸದಂತೆ ಹಾಗೂ ಕೊರಿಯರ್ ಬಂದದನ್ನು ಪ್ಯಾಕ್ ತೆರೆಯದೆ ಹಾಗೇ ಸಂಗ್ರಹಿಸಿಡಲು ಶಂಕಿತ ಉಗ್ರರಿಂದ ಪ್ರಮಾಣ ಮಾಡಿಸಿಕೊಂಡಿದ್ದರೆಂದು ತಿಳಿದುಬಂದಿದೆ.
ಪ್ರಮುಖ ಆರೋಪಿಗಳಾದ ನಜೀರ್ ಮತ್ತು ಜುಲೈದ್ ಮಾತಿನಂತೆ ಶಂಕಿತ ಐವರು ಉಗ್ರರು ಗ್ರೆನೇಡ್ ಮತ್ತು ಪಿಸ್ತೂಲ್‌ಗಳ ಪಾರ್ಸೆಲ್‌ಗಳನ್ನು ಹಾಗೆಯೇ ಸಂಗ್ರಹಿಸಿಡುತ್ತಿದ್ದರು. ಆದರೆ, ಕೃತ್ಯದ ಯೋಜನೆ, ಸಂಚನ್ನು ಬೇರೆ ತಂಡ ರೂಪಿಸುತ್ತಿದ್ದ ಅಂಶ ತನಿಖೆಯಲ್ಲಿ ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಚಾಕುವಿನಿಂದ ಇರಿದು ಅಡುಗೆ ಭಟ್ಟನ ಕೊಲೆ
ಐವರು ಶಂಕಿತ ಉಗ್ರರ ಪೈಕಿ ಮುದಾಸಿರ್ ಮತ್ತು ಉಮರ್ ಬೆಂಗಳೂರಿನಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದರು ಎಂದು ಸಿಸಿಬಿ ತನಿಖೆ ವೇಳೆ ತಿಳಿದುಬಂದಿದೆ.
ಸಿಸಿಬಿ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ. ಶಂಕಿತ ಉಗ್ರ ಮುದಾಸಿರನ ಪ್ರಿಯತಮೆಯನ್ನು ವಿಚಾರಣೆಗೆ ಒಳಪಡಿಸಿದಾಗ ಡ್ರಗ್ಸ್ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಮುದಾಸಿರ್ ತಾನು ಹೇಳಿದವರಿಗೆ ಡ್ರಗ್ಸ್ ನೀಡಬೇಕು ಎಂದು ತನ್ನ ಪ್ರಿಯತಮೆಗೆ ಹೇಳುತ್ತಿದ್ದನು. ಪ್ರಿಯತಮ ಮುದಾಸಿರ್ ಹೇಳಿದವರಿಗೆ ಯುವತಿ ಡ್ರಗ್ಸ್ ನೀಡುತ್ತಿದ್ದಳು.
ಮುದಾಸಿರ್ ಬಂಧನವಾದ ದಿನ ಗೆಳತಿಗೆ ಡ್ರಗ್ಸ್ ಕೊಟ್ಟು ಮಾರಾಟ ಮಾಡಲು ಹೇಳಿದ್ದನು ಎಂದು ತಿಳಿದುಬಂದಿದೆ.