- ಬೆಸ್ಕಾಂ ವಿರುದ್ಧ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
- ವಿದ್ಯುತ್ ತಂತಿಯು ಕಂಬಕ್ಕೆ ತಾಗಿಕೊಂಡಿರಬಹುದು ; ಪೊಲೀಸರ ಶಂಕೆ
ದಕ್ಷಿಣ ಬೆಂಗಳೂರಿನ ದೇವರಚಿಕ್ಕನಹಳ್ಳಿಯಲ್ಲಿ ವಿದ್ಯುತ್ ತಗುಲಿ ಪೇಂಟರ್ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೇ 11ರಂದು ಈ ಘಟನೆ ನಡೆದಿದ್ದು, ಅಸ್ಸಾಂ ಮೂಲದ ಮಿರಾಝುಲ್ ಇಸ್ಲಾಂ (28) ಮೃತ ವ್ಯಕ್ತಿ.
ಪೇಂಟಿಂಗ್ ಮಾಡುವ ವೇಳೆ ವಿದ್ಯುತ್ ಕಂಬಕ್ಕೆ ಸಂಪರ್ಕಿಸಿದಾಗ ವಿದ್ಯುತ್ ಸ್ಪರ್ಶವಾಗಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಬೆಸ್ಕಾಂ ವಿರುದ್ಧ ವಿರುದ್ಧ ಪ್ರಕರಣ ದಾಖಲಾಗಿದ್ದು, ವಿದ್ಯುತ್ ತಂತಿಯು ಕಂಬಕ್ಕೆ ತಾಗಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಹೊಟ್ಟೆಯಲ್ಲಿಟ್ಟುಕೊಂಡು ₹11 ಕೋಟಿ ಮೌಲ್ಯದ ಕೊಕೇನ್ ಕ್ಯಾಪ್ಸೂಲ್ ಸಾಗಿಸುತ್ತಿದ್ದ ನೈಜೀರಿಯನ್ ಬಂಧನ
ಪಿಜಿಗೆ ನುಗ್ಗಿ ಕಳ್ಳತನ ಮಾಡಿದ ದುಷ್ಕರ್ಮಿಗಳು
ಶುಕ್ರವಾರ ವೈಟ್‌ಫೀಲ್ಡ್‌ನ ವರ್ತೂರು ಬಳಿಯ ರಾಮಗೊಂಡನಹಳ್ಳಿಯಲ್ಲಿರುವ ಪಿಜಿ ವಸತಿಗೃಹದಿಂದ ದುಷ್ಕರ್ಮಿಗಳು ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಕದ್ದಿದ್ದಾರೆ ಎಂದು ಇಬ್ಬರು ಎಂಜಿನಿಯರ್‌ಗಳು ಆರೋಪಿಸಿ, ಪೊಲೀಸರಿಗೆ ದೂರು ನೀಡಿದ್ದಾರೆ.
ದುಷ್ಕರ್ಮಿಗಳು ಶುಕ್ರವಾರ ಬೆಳಿಗ್ಗೆ ಎರಡು ಪಿಜಿ ವಸತಿಗೃಹಗಳಿಗೆ ಪ್ರವೇಶಿಸಿ ಸಂತ್ರಸ್ತರ ಗ್ಯಾಜೆಟ್‌ಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ನಂದನ ಪಿಜಿ ನಿವಾಸಿ ಕುಪ್ಪಿಲಿ ಬಿನೋದ್ ರೆಡ್ಡಿ (30) ಅವರ ಲ್ಯಾಪ್‌ಟಾಪ್ ಅನ್ನು ಬೆಳಿಗ್ಗೆ 7 ಗಂಟೆಗೆ ಕಳವು ಮಾಡಲಾಗಿದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ 23 ವರ್ಷದ ಸಮೀರ್ ಸೌರವ್ ಎಂಬಾತನ ಮೊಬೈಲ್ ಮತ್ತು ಲ್ಯಾಪ್ ಟಾಪ್ ಅಕ್ಷಯ್ ಪಿಜಿಯಿಂದ ಕಳುವಾಗಿದೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ.