- ಜೀವಾವಧಿ ಶಿಕ್ಷೆ ಜತೆಗೆ ₹2 ಸಾವಿರ ದಂಡವನ್ನು ನ್ಯಾಯಾಲಯ ವಿಧಿಸಿದೆ
- ರಾಜೇಶ್ ಮತ್ತು ಶಾರದಾ ಇಬ್ಬರಿಗೆ ಕೋರ್ಟ್ ವಿಚ್ಛೇದನ ನೀಡಿತ್ತು
2013ರಲ್ಲಿ ಪತ್ನಿಯನ್ನು ಕೊಲೆ ಮಾಡಿದ್ದ ಪತಿಗೆ ಜೀವಾವಧಿ ಶಿಕ್ಷೆ ಜತೆಗೆ ₹2 ಸಾವಿರ ದಂಡವನ್ನು ಬೆಂಗಳೂರಿನ 46ನೇ ಸಿಸಿಹೆಚ್ ನ್ಯಾಯಾಲಯವು ವಿಧಿಸಿದೆ.
ಅಪರಾಧಿ ಪತಿ ರಾಜೇಶ್ ಎಂಬಾತ ತನ್ನ ಪತ್ನಿ ಶಾರದಾ ಎಂಬುವವರನ್ನು 2013ರಲ್ಲಿ ಕೊಲೆ ಮಾಡಿದ್ದನು. ಸತತ 10 ವರ್ಷಗಳ ಬಳಿಕ ಆರೋಪ ಸಾಬೀತಾದ ಹಿನ್ನೆಲೆ, ರಾಜೇಶ್ನಿಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ.
ಈ ಬಗ್ಗೆ ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಈ ಸುದ್ದಿ ಓದಿದ್ದೀರಾ? ಬೇಸಿಗೆಯ ಬೇಗೆಯ ನಡುವೆ ಬೆಂಗಳೂರಿನಲ್ಲಿ ನೀರಿನ ಕೊರತೆ!
ವಿಚ್ಛೇದನ ಹೊಂದಿದ್ದ ದಂಪತಿ
ರಾಜೇಶ್ ಮತ್ತು ಶಾರದಾ ಇಬ್ಬರಿಗೆ ಕೋರ್ಟ್ ವಿಚ್ಛೇದನ ನೀಡಿತ್ತು. ಪತ್ನಿಗೆ ಜೀವನಾಂಶ ನೀಡುವಂತೆ ಕೋರ್ಟ್ ರಾಜೇಶನಿಗೆ ಆದೇಶ ನೀಡಿತ್ತು.
ಆದರೆ, ಪತ್ನಿಗೆ ರಾಜೇಶ್ ಜೀವನಾಂಶ ನೀಡಿರಲಿಲ್ಲ. ಹೀಗಾಗಿ ರಾಜೇಶ್ನನ್ನು ಜೈಲಿಗೆ ಕಳುಹಿಸಲಾಗಿತ್ತು. ಜೈಲಿನಿಂದ ಬಿಡುಗಡೆಯಾಗಿ ಬಂದ ಬಳಿಕ ಪತ್ನಿ ಶಾರದಾಳನ್ನು ಚಾಕುವಿನಿಂದ 52 ಬಾರಿ ಇರಿದು ಕೊಲೆ ಮಾಡಿದ್ದನು.