- ಮದ್ಯ ಸೇವನೆಗೆ ದುಡ್ಡು ಕೊಡದೆ ಇರುವುದಕ್ಕೆ ಇಟ್ಟಿಗೆಯಿಂದ ತಲೆಗೆ ಹೊಡೆದು ಕೊಲೆ
- ನಗರದ ಗೋವಿಂದರಾಜನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ
ಮದ್ಯಪಾನ ಮಾಡಲು ಹಣ ನೀಡದಿದ್ದಕ್ಕೆ ದುಷ್ಟ ಮಗನೊಬ್ಬ ತನ್ನ ತಂದೆಯನ್ನು ಕೊಂದಿರುವ ಘಟನೆ ಬೆಂಗಳೂರಿನ ಮಾರೇನಹಳ್ಳಿ ಪಿ.ಎಸ್ ಲೇಔಟ್ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬಸವರಾಜು(60) ಕೊಲೆಯಾದ ದುರ್ದೈವಿ. ಇವರು ಸೆಕ್ಯೂರಿಟಿಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅವರ ಮಗ ನೀಲಧರ ಹತ್ಯೆಗೈದು ಬಂಧಿತನಾಗಿರುವ ಆರೋಪಿ. ಘಟನೆ ಸಂಬಂಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ರ ನೀಲಧರ ಆಟೋ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ. ತಂದೆ ಮತ್ತು ಮಗ ಇಬ್ಬರು ಒಂದೇ ಶೆಡ್‌ನಲ್ಲಿ ವಾಸವಾಗಿದ್ದರು. ಈ ವೇಳೆ, ತಂದೆಯ ಬಳಿ ಮಗ ಕುಡಿಯಲು ದುಡ್ಡು ಕೇಳಿದ್ದಾನೆ. ದುಡ್ಡು ಕೊಡದೆ ಇರುವ ಕಾರಣಕ್ಕೆ ಶೆಡ್‌ನಲ್ಲಿದ್ದ ಇಟ್ಟಿಗೆಯಿಂದ ತಲೆಗೆ ಹೊಡೆದು ತಂದೆಯನ್ನು ಕೊಲೆ ಮಾಡಿದ್ದಾನೆ.
ಕೊಲೆಯಾದ 15 ದಿನಗಳ ಬಳಿಕ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಗೋವಿಂದರಾಜನಗರ ಠಾಣೆಯ ಪೊಲೀಸರು ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಲಿಫ್ಟ್ನಲ್ಲಿ ಸಿಲುಕಿ ಉತ್ತರಪ್ರದೇಶ ಮೂಲದ ಯುವಕ ಸಾವು