- 30 ವರ್ಷಗಳ ಕಾಲ ಗಾಲ್ಫ್ ಕ್ಲಬ್‌ಗೆ ಲೀಸ್ ನೀಡಲು ಮುಂದಾದ ಸರ್ಕಾರ
- ವಿಶಾಲವಾದ ಮೈದಾನವನ್ನು ಗಾಲ್ಫ್ ಕ್ಲಬ್‌ಗೆ 50 ವರ್ಷ ಲೀಸ್‌ಗೆ ನೀಡಲಾಗಿತ್ತು
ಬೆಂಗಳೂರಿನಲ್ಲಿರುವ ಮುಖ್ಯಮಂತ್ರಿಗಳ ನಿವಾಸ ಕೃಷ್ಣಾ ಎದುರಿನ ಪ್ರತಿಷ್ಠಿತ ಮೈದಾನದಲ್ಲಿರುವ ‘ಗಾಲ್ಫ್ ಕ್ಲಬ್’ಅನ್ನು ತೆರವುಗೊಳಿಸಲು ನಿರ್ಧರಿಸಿದ್ದ ರಾಜ್ಯ ಸರ್ಕಾರ, ತನ್ನ ನಿರ್ಧಾರದಿಂದ ಹಿಂದೆ ಸರಿಸಿದೆ.
ಬೆಂಗಳೂರಿನ ನೆಹರು ತಾರಾಲಯ ಮತ್ತು ಮುಖ್ಯಮಂತ್ರಿ ಗೃಹದ ಎದುರಿರುವ ವಿಶಾಲವಾದ ಮೈದಾನವನ್ನು ಗಾಲ್ಫ್ ಕ್ಲಬ್‌ಗೆ 50 ವರ್ಷಗಳ ಕಾಲ ಲೀಸ್‌ಗೆ ನೀಡಲಾಗಿತ್ತು. ಇದೀಗ, ಲೀಸ್ ಅವಧಿ ಮುಗಿದಿದ್ದು, ಗಾಲ್ಫ್ ಕ್ಲಬ್ ಅನ್ನು ಮೈದಾನದಿಂದ ತೆರವುಗೊಳಿಸಲು ಸರ್ಕಾರ ನಿರ್ಧರಿಸಿತ್ತು.
ಆದರೆ, ತನ್ನ ನಿರ್ಧಾರದಿಂದ ಯೂ-ಟರ್ನ್ ಹೊಡೆದಿರುವ ಸರ್ಕಾರ, ಮತ್ತೆ 30 ವರ್ಷಗಳ ಕಾಲ ಗಾಲ್ಫ್ ಕ್ಲಬ್‌ಗೆ ಲೀಸ್ ನೀಡಲು ಮುಂದಾಗಿದೆ.
ಸರ್ಕಾರದ ‘ಯು-ಟರ್ನ್’ ನಿರ್ಧಾರದ ಹಿಂದೆ ಕೆಲವು ರಾಜಕಾರಣಿಗಳು ಸೇರಿದಂತೆ ಅಧಿಕಾರಶಾಹಿಗಳ ಕೈವಾಡವಿದೆ. ಅವರೆಲ್ಲರೂ ಅದರ ಲಾಭ ಪಡೆಯಲು ಹವಣಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಈ ಸುದ್ದಿ ಓದಿದ್ದೀರಾ? ಒಂದು ನಿಮಿಷದ ಓದು | ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ ಸಹಾಯಕ ಇಂಜಿನಿಯರ್
ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗುವ ಕೆಲವೇ ವಾರಗಳ ಹಿಂದೆ, ಅಂದರೆ ಮಾರ್ಚ್ 6ರಂದು ಬೆಂಗಳೂರಿನ ಈ ಪ್ರತಿಷ್ಠಿತ ಭೂಮಿಯ ಲೀಸ್ ಅನ್ನು 30 ವರ್ಷಗಳ ಕಾಲ ವಿಸ್ತರಣೆ ಮಾಡುವುದಾಗಿ ಸರ್ಕಾರ ಘೋಷಿಸಿದೆ.