- ವೈದ್ಯರ ಮೇಲೆ ಜಾರ್ಜ್ಶೀಟ್ ಹಾಕಿದ್ದ ಇನ್ಸ್ಪೆಕ್ಟರ್ ಮಂಜುನಾಥ್
- ವೈದ್ಯರೊಬ್ಬರ ಮೇಲೆ ಡ್ರಗ್ಸ್ ಪ್ರಕರಣದಡಿ ಸುಳ್ಳು ಎಫ್ಐಆರ್ ದಾಖಲು
ಕಾನೂನು ದುರ್ಬಳಕೆ ಮಾಡಿಕೊಂಡ ಆರೋಪದಡಿ ಇಬ್ಬರು ಪೊಲೀಸರನ್ನು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಅಮಾನತು ಮಾಡಿದ್ದಾರೆ.
ಜ್ಞಾನಭಾರತಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಂಜುನಾಥ್ ಮತ್ತು ದೇವನಹಳ್ಳಿ ಠಾಣೆಯ ಇನ್ಸ್ಪೆಕ್ಟರ್ ಲಕ್ಷ್ಮಣ್ ನಾಯಕ್ ಅಮಾನತುಗೊಂಡವರು.
ಈ ಹಿಂದೆ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಇನ್ಸ್ಪೆಕ್ಟರ್ ಲಕ್ಷ್ಮಣ್ ನಾಯಕ್ ಅವರು ಇದ್ದರು. ಅವರ ಅವಧಿಯಲ್ಲಿ 2022ರಲ್ಲಿ ವೈದ್ಯರೊಬ್ಬರ ಮೇಲೆ ಡ್ರಗ್ಸ್ ಪ್ರಕರಣದಡಿ ಎಫ್ಐಆರ್ ದಾಖಲಿಸಿದ್ದರು.
ಬಳಿಕ ಅವರು ದೇವನಹಳ್ಳಿ ಠಾಣೆಗೆ ವರ್ಗಾವಣೆಯಾದ ನಂತರ ಇನ್ಸ್ಪೆಕ್ಟರ್ ಮಂಜುನಾಥ್ ಅವರು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಹೊಸಕರೆಹಳ್ಳಿ ಕೆರೆ ಮಧ್ಯೆ ರಸ್ತೆ ನಿರ್ಮಾಣ; ಅಧಿಕಾರಿಗಳ ಅಮಾನತು
ವರ್ಗಾವಣೆ ಬಳಿಕ ಮಂಜುನಾಥ್ ಅವರು ವೈದ್ಯರ ಮೇಲೆ ಚಾರ್ಜ್ಶೀಟ್ ಹಾಕಿದ್ದರು. ಅಮಾಯಕ ವೈದ್ಯರ ಮೇಲೆ ಇಬ್ಬರು ಇನ್ಸ್ಪೆಕ್ಟರ್ ಸುಳ್ಳು ಪ್ರಕರಣ ದಾಖಲಿಸಿ ಬಳಿಕ ವೈದ್ಯರ ಮೇಲೆ ಚಾರ್ಜ್ಶೀಟ್ ಸಲ್ಲಿಸಿದ್ದರು. ಇಬ್ಬರು ಕಾನೂನು ಉಲ್ಲಂಘಿಸಿದ್ದಾರೆ ಎಂಬ ಹಿನ್ನೆಲೆಯಲ್ಲಿ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ವರದಿ ನೀಡಿದ್ದರು.
ಡಿಸಿಪಿ ಅವರು ನೀಡಿದ ವರದಿ ಆಧರಿಸಿ ಇಬ್ಬರೂ ಇನ್ಸ್ಪೆಕ್ಟರ್ ಅನ್ನು ಪೊಲೀಸ್ ಆಯುಕ್ತ ಬಿ ದಯಾನಂದ ಅಮಾನತು ಮಾಡಿದ್ದಾರೆ.