- ಪತ್ನಿಯಿಂದ ಬೇರ್ಪಟ್ಟ ಬಳಿಕ ತಾಯಿಯೊಂದಿಗೆ ವಾಸವಿದ್ದ ಚಾಂದ್ ಪಾಷಾ
- ಸೋಫಿಯಾ ವಿರುದ್ಧ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲು
ಮಗನ ನಿತ್ಯ ಕುಡಿತದ ಚಟಕ್ಕೆ ಬೇಸತ್ತು 60 ವರ್ಷದ ತಾಯಿಯೊಬ್ಬರು 40 ವರ್ಷದ ಮಗನ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಚಾಂದ್ ಪಾಷಾ(40) ಎಂದು ಗುರುತಿಸಲಾಗಿದೆ. ಈತನ ತಾಯಿ ಸೋಫಿಯಾ ಬಿ.ಪಾಷಾ (60) ಕೊಲೆ ಮಾಡಿದ್ದಾಳೆ ಎನ್ನಲಾಗಿದೆ.
ಇವರು ನಗರದ ಚಿಕ್ಕಬಾಣಾವರದ ಜನತಾ ಕಾಲೋನಿಯಲ್ಲಿ ನೆಲೆಸಿದ್ದರು. ಚಾಂದ್ ಪಾಷಾ 16 ವರ್ಷಗಳ ಹಿಂದೆ ತನ್ನ ಪತ್ನಿಯಿಂದ ಬೇರ್ಪಟ್ಟ ಬಳಿಕ ತಾಯಿಯೊಂದಿಗೆ ವಾಸವಿದ್ದರು.
ಸೋಮವಾರ ಸಂಜೆ 4 ಗಂಟೆ ಸುಮಾರಿಗೆ ಪಾಷಾ ಕುಡಿದ ಮತ್ತಿನಲ್ಲಿ ಮನೆಗೆ ಬಂದು ಬಾಗಿಲಲ್ಲಿ ಕುಳಿತಿದ್ದರು. ಆತನ ದಿನನಿತ್ಯದ ಕುಡಿತದ ಚಟದಿಂದ ತಾಯಿ ಸೋಫಿಯಾ ಕೋಪಗೊಂಡು ಸೀಮೆ ಎಣ್ಣೆಯಯನ್ನು ಆತನ ಮೇಲೆ ಸುರಿದು ಬೆಂಕಿ ಹಚ್ಚಿದ್ದಾರೆ. ಈ ಘಟನೆ ಬಳಿಕ ಪಾಷಾ ಸ್ಥಳದಲ್ಲೇ ನಿಧನ ಹೊಂದಿದ್ದಾರೆ.
“ಪಾಷಾ ಪ್ರತಿದಿನ ಕುಡಿದು ಮನೆಗೆ ಬಂದು ತಾಯಿಯೊಂದಿಗೆ ಜಗಳವಾಡುತ್ತಿದ್ದನು. ಸೋಫಿಯಾ ಮಗನ ವರ್ತನೆಯಿಂದ ಬೇಸತ್ತು ಆತನಿಗೆ ಪಾಠ ಕಲಿಸಲು ಈ ರೀತಿ ಮಾಡಿದ್ದಾಳೆ ಎಂದು ತಿಳಿದುಬಂದಿದೆ. ಈ ಪ್ರಕರಣದ ಬಗ್ಗೆ ತನಿಖೆ ಕೈಗೊಂಡಿದ್ದೇವೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಡ್ರಗ್ಸ್ ಮಾರಾಟ ಮಾಡುತ್ತಿದ್ದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿ ಬಂಧನ
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಸೋಫಿಯಾ ವಿರುದ್ಧ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.