77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ(ಬಿಎಂಆರ್‌ಸಿಎಲ್) ಮೆಟ್ರೋ ನಿಲ್ದಾಣಗಳಲ್ಲಿ ನಾಟಕ, ಲಾವಣಿಪದ ಸೇರಿದಂತೆ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ನಿಗಮ, “ನಮ್ಮ ಮೆಟ್ರೋ ಬಣ್ಣದ ಬಳಗ ಯುವ ಮೌಲ್ಯ ಕಲಾ ವೇದಿಕೆ ವತಿಯಿಂದ ಕರ್ನಾಟಕದ ಗಾಂಧಿ ಎಂದು ಪ್ರಸಿದ್ಧರಾದ ‘ಹರ್ಡೇಕರ್ ಮಂಜಪ್ಪ’ ಅವರ ಜೀವನಾಧಾರಿತ ಎಲ್ಲಿಗೆ ಬಂತು – ಯಾರಿಗೆ ಬಂತು…? ನಾಟಕ, ಲಾವಣಿಪದಗಳು ಹಾಗೂ ದೇಶ ಭಕ್ತಿಗೀತೆ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಆ.15 ರಿಂದ ಆ.21ರವರೆಗೆ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ನಡೆಯಲಿವೆ” ಎಂದು ತಿಳಿಸಿದೆ.
ನಮ್ಮ ಮೆಟ್ರೋ ನಿಲ್ದಾಣದಲ್ಲಿ ಆಗಸ್ಟ್ 15 ರಿಂದ ಆಗಸ್ಟ್ 21ರವರೆಗೆ ಪ್ರತಿ ದಿನ ಸಾಯಂಕಾಲ 6:15 ರಿಂದ 7:15 ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಯಾವ ನಿಲ್ದಾಣದಲ್ಲಿ ಕಾರ್ಯಕ್ರಮ ನಡೆಯಲಿದೆ?
ಆಗಸ್ಟ್ 15 ಯಶವಂತಪುರ ಮೆಟ್ರೋ ನಿಲ್ದಾಣ
ಆಗಸ್ಟ್ 16 ಕೆ.ಆರ್.ಪುರಂ ಮೆಟ್ರೋ ನಿಲ್ದಾಣ
ಆಗಸ್ಟ್ 17 ಬನಶಂಕರಿ ಮೆಟ್ರೋ ನಿಲ್ದಾಣ
ಆಗಸ್ಟ್ 18 ವಿಜಯನಗರ ಮೆಟ್ರೋ ನಿಲ್ದಾಣ
ಆಗಸ್ಟ್ 19 ಮಹಾತ್ಮಗಾಂಧಿ ರಸ್ತೆ ಮೆಟ್ರೋ ನಿಲ್ದಾಣ
ಆಗಸ್ಟ್ 20 ಮೈಲಸಂದ್ರ ಮೆಟ್ರೋ ನಿಲ್ದಾಣ
ಆಗಸ್ಟ್ 21 ಕೆಂಪೇಗೌಡ ಮೆಟ್ರೋ ನಿಲ್ದಾಣ (ಮೆಜೆಸ್ಟಿಕ್)