- ಪೊಲೀಸರ ಅಧಿಕೃತ ಟ್ವಿಟರ್ ಖಾತೆಯೂ ಕಂದುಬಣ್ಣದ ಚೆಕ್ಮಾರ್ಕ್ ಹೊಂದಿದೆ
- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದ ಬೆಂಗಳೂರು ನಗರ ಪೊಲೀಸ್
ಬೆಂಗಳೂರು ನಗರ ಪೊಲೀಸ್ ಹೆಸರಿನಲ್ಲಿ ‘blrcitypolicee’ ಎಂಬ ನಕಲಿ ಟ್ವಿಟರ್ ಖಾತೆಯೊಂದು ಕಾರ್ಯಾಚರಣೆ ನಡೆಸುತ್ತಿದೆ. ಹಾಗಾಗಿ ನಾಗರಿಕರು ಎಚ್ಚರಿಕೆ ವಹಿಸುವಂತೆ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.
ನಮ್ಮ ಪೊಲೀಸ್ ಇಲಾಖೆಯ ಅಧಿಕೃತ ಟ್ವಿಟರ್ ಹ್ಯಾಂಡಲ್ @BlrCityPolice ಎಂದು ಇದೆ. ನಮ್ಮ ಖಾತೆಯನ್ನೇ ಹೋಲುವಂತ ‘blrcitypolicee’ ಎಂಬ ಹೆಸರಿನ ಟ್ವಿಟರ್ ಹ್ಯಾಂಡಲ್ ಇದ್ದು, ಇದು ನಾಗರಿಕರನ್ನು ದಾರಿ ತಪ್ಪಿಸುವಂತಹ ಕೆಲಸ ಮಾಡುತ್ತಿದೆ. ಈ ನಕಲಿ ಖಾತೆಯಿಂದ ಬಂದ ಟ್ವೀಟ್‌ಗಳನ್ನು ನಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಬಂದ ಟ್ವೀಟ್‌ಗಳೆಂದು ತಪ್ಪಾಗಿ ಅರ್ಥೈಸಲಾಗಿದೆ. ಬೆಂಗಳೂರು ಪೊಲೀಸರ್ ಅಧಿಕೃತ ಟ್ವಿಟರ್ ಖಾತೆಯೂ ಕಂದುಬಣ್ಣದ ಚೆಕ್ಮಾರ್ಕ್ ಹೊಂದಿದೆ ಎಂದು ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರಿಗೆ ಪ್ರಧಾನಿ ಮೋದಿ: ಎಲ್ಲೆಲ್ಲಿ ಸಂಚಾರ ನಿರ್ಬಂಧ? ಇಲ್ಲಿದೆ ನೋಡಿ!
ನಾಗರಿಕರು ಈ ನಕಲಿ ಖಾತೆಯಿಂದ ದೂರವಿರಿ. ಈ ನಕಲಿ ಖಾತೆ ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ನಕಲಿ ಖಾತೆ ಕಾರ್ಯಾಚರಿಸುತ್ತಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಟ್ವೀಟ್ ಮಾಡಿದೆ.