ಮತದಾನ ಮಾಡಲು ಆಮಿಷ ಬಂದರೆ ‘ಸಿ-ವಿಜಿಲ್’ ತಂತ್ರಾಂಶದಲ್ಲಿ ದೂರು ದಾಖಲಿಸಿ: ತುಷಾರ್ ಗಿರಿನಾಥ್

Date:

Advertisements
  • ಕಳೆದ ಬಾರಿ ಶೇ.55 ರಷ್ಟು ಮತದಾನವಾಗಿತ್ತು
  • ಬೆಂಗಳೂರಿನಲ್ಲಿ 97 ಲಕ್ಷ ಮತದಾರರಿದ್ದಾರೆ

“ಮತ ಚಲಾಯಿಸುವ ಹಕ್ಕನ್ನು ಹೊಂದಿರುವವರು ಮತದಾನ ಮಾಡದಿರುವುದು ಘಾತಕದ ಸಂಗತಿ. ಆಮಿಷಕ್ಕೊಳಗಾಗಿ ಮತ ನೀಡುವುದು ಮತದಾನ ಮಾಡದಿರುವುದಕ್ಕಿಂತಲೂ ದೊಡ್ದ ಘಾತಕದ ಸಂಗತಿ. ಮತದಾನ ಮಾಡಲು ಏನಾದರೂ ಆಮಿಷಗಳು ಬಂದಲ್ಲಿ ಸಿ-ವಿಜಿಲ್ ತಂತ್ರಾಂಶದಲ್ಲಿ ದೂರು ದಾಖಲಿಸಿ, ಭ್ರಷ್ಠ ಚಟುವಟಿಕೆಗಳನ್ನು ನಿಲ್ಲಿಸಿ” ಎಂದು ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಹೇಳಿದರು.

ಬೆಂಗಳೂರು ಪ್ರೆಸ್‌ಕ್ಲಬ್ ಆಯೋಜಿಸಿದ್ದ ಮಾಧ್ಯಮ ಸಂವಾದವನ್ನು ಉದ್ದೇಶಿಸಿ ಅವರು ಮಾತನಾಡಿದರು, “ನಗರದಲ್ಲಿ ಎಲ್ಲರಿಂದಲೂ ಮತದಾನ ಮಾಡಿಸಲು ಶ್ರಮವಹಿಸಿ ಕೆಲಸ ಮಾಡಲಾಗುತ್ತಿದೆ. ಕಳೆದ ಬಾರಿ ಶೇ.55 ರಷ್ಟು ಮತದಾನವಾಗಿತ್ತು. ಈ ಬಾರಿ ಶೇ.75ರಷ್ಟು ಮತದಾನವಾಗಲು ಪ್ರಯತ್ನಿಸುತ್ತಿದ್ದೇವೆ. ನಾವು ಎಷ್ಟೇ ಪ್ರಯತ್ನಿಸಿದರೂ ಕೂಡಾ ಎಲ್ಲವೂ ಮತದಾರರ ಕೈಯಲ್ಲಿದೆ. ಅವರು ಸ್ವಯಂಪ್ರೇರಿತರಾಗಿ ಮತಗಟ್ಟೆಗೆ ಬಂದು ಮತದಾನ ಮಾಡಬೇಕು” ಎಂದು ಹೇಳಿದರು.

“ಸಾಂಖ್ಯಿಕ ಇಲಾಖೆಯ ಪ್ರಕಾರ ನಗರದಲ್ಲಿ 1.65 ಕೋಟಿ ಜನಸಂಖ್ಯೆಯಿದ್ದು, ನಗರದಲ್ಲಿ 97 ಲಕ್ಷ ಮತದಾರರಿದ್ದಾರೆ. ನಗರದ 28 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸುಮಾರು 8,000 ಬೂತ್ ಮಟ್ಟದ ಅಧಿಕಾರಿಗಳುನ್ನು ನಿಯೋಜಿಸಿದ್ದ ಕಾರಣ ತಳಮಟ್ಟದಲ್ಲಿ ಸಮರ್ಪಕವಾಗಿ ಕೆಲಸ ಮಾಡಿದ ಕಾರಣ ಮತದಾರಪಟ್ಟಿಯಲ್ಲಿನ ಸಂಖ್ಯೆ ಹೆಚ್ಚಾಗಿದೆ. ಎಲ್ಲ ಅಧಿಕಾರಿಗಳು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದು, ಹೊಸದಾಗಿ ಸೇರ್ಪಡೆಯಾದಂತಹ ಮತದಾರರ ಗುರುತಿನ ಚೀಟಿಗಳನ್ನು ಅಂಚೆ ಮೂಲಕ ವಿತರಣೆ ಮಾಡಲಾಗುತ್ತಿದೆ” ಎಂದು ತಿಳಿಸಿದರು.

Advertisements

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮೇ 1ರಿಂದ ಆಸ್ತಿ ತೆರಿಗೆ ಪಾವತಿಸುವವರಿಗೆ 5% ರಿಯಾಯಿತಿಯಿಲ್ಲ!

ಏಪ್ರಿಲ್ 28 ರಿಂದ ಮತದಾನ ಚೀಟಿ ಹಾಗೂ ಮಾರ್ಗಸೂಚಿ ವಿತರಣೆ

“ಮತದಾರರ ಪಟ್ಟಿಯಲ್ಲಿರುವ ಎಲ್ಲರಿಗೂ ಏಪ್ರಿಲ್ 28 ರಿಂದ ಮತದಾರರ ಚೀಟಿ, ಮತದಾನದ ಮಾರ್ಗಸೂಚಿಯನ್ನು ನೀಡುತ್ತಿರುವುದರ ಜೊತೆಗೆ ಮತಗಟ್ಟೆಯ ವಿವರವನ್ನು ಕೂಡಾ ನೀಡಲಾಗುತ್ತಿದೆ. ಮತದಾನದ ದಿನಕ್ಕಿಂದ 6 ದಿನದ ಮುಂಚಿತವಾಗಿಯೇ ಎಲ್ಲರಿಗೂ ಮತದಾರರ ಚೀಟಿ ತಲುಪಿಸಲಾಗುವುದು. ಬಾರ್ ಕೋಡ್ ಸ್ಕ್ಯಾನ್ ಮಾಡಿಯೂ ಮಾಹಿತಿ ಪಡೆಯಬಹುದು. ಜೊತೆಗೆ ವಿ.ಹೆಚ್.ಎ ತಂತ್ರಾಶದಲ್ಲಿಯೂ ಮತದಾನ ಗುರುತಿನ ಚೀಟಿಯ ಸಂಖ್ಯೆ ಹಾಕಿ ಮಾಹಿತಿ ಪಡೆದುಕೊಳ್ಳಬಹುದು” ಎಂದರು.

ಮತಗಟ್ಟೆಯ ಬಳಿ ಸ್ವಚ್ಛತಾ ಆಂದೋಲನ

“ನಗರದಲ್ಲಿ ಸುಮಾರು 3,600 ಸ್ಥಳಗಳಲ್ಲಿ 8,802 ಮತಗಟ್ಟೆಗಳಿದ್ದು, ಎಲ್ಲ ಮತಗಟ್ಟೆಗಳ ಬಳಿಯೂ ಸ್ವಚ್ಛತಾ ಆಂದೋಲನೆ ನಡೆಸಲಾಗುವುದು. ಮತಗಟ್ಟೆಗಳ ಬಳಿಯಿರುವ ರಾಜಕಾಲುವೆಗಳಲ್ಲಿ ಹೂಳೆತ್ತುವ ಕೆಲಸ ಮಾಡಲಾಗುವುದು. ಎಲ್ಲ ಮತಗಟ್ಟೆ ಕನಿಷ್ಠ ಸೌಲಭ್ಯಗಳ ವ್ಯವಸ್ಥೆ ಮಾಡಲಾಗುವುದು. 1,500 ಮತಗಟ್ಟೆಗಳ ಬಳಿ ನೆರಳಿಗಾಗಿ ಪೆಂಡಾಲ್ ವ್ಯವಸ್ಥೆ ಮಾಡಲಾಗುವುದು. ಮತಗಟ್ಟೆಗಳಿಗೆ ರಸ್ತೆ ಸರಿಯಾಗಿಲ್ಲದಿದ್ದರೆ ಅದನ್ನು ಸರಿಪಡಿಸಲಾಗುವುದು. ನಗರದಲ್ಲಿ ಪಿಂಕ್ ಬೂತ್, ವಿಕಲ ಚೇತನರ ಬೂತ್, ಪರಿಸರ ಬೂತ್, ಡಿಜಿಟಲ್ ಬೂತ್, ಯುವ ಸಮೂಹ ಬೂತ್ ಸೇರಿದಂತೆ ಸುಮಾರು 300 ಥೀಮ್ ಆಧಾರಿತ ಮತಗಟ್ಟೆಗಳನ್ನು ಮಾಡಲಾಗುತ್ತಿದೆ” ಎಂದು ಹೇಳಿದರು.

“ಸಾರ್ವತ್ರಿಕ ವಿಧಾನಸಭೆ ಚುನಾವಣೆಯ ಸಂಬಂಧ 8,802 ಮತಗಟ್ಟೆಗಳಿಗೆ ಸುಮಾರು 36 ಸಾವಿರ ಸಿಬ್ಬಂದಿ, ಸೆಕ್ಟರ್ ಮೆಜಿಸ್ಟ್ರೇಟ್, ಮೈಕ್ರೋ ಅಬ್ಸರ್‌ವರ್ಸ್ ಸೇರಿದಂತೆ ಬೇರೆ ಬೇರೆ ಕೆಲಸ ಕಾರ್ಯಗಳಿಗಾಗಿ ಒಟ್ಟಾರೆ 42,000 ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ. ಅತಿ ಸೂಕ್ಷ್ಮ, ಸೂಕ್ಷ್ಮ ಹಾಗೂ ಸಾಮಾನ್ಯ ಮತಗಟ್ಟೆಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪ್ಯಾರಾ ಮಿಲಿಟರಿ, ಪೊಲೀಸ್ ಸಿಬ್ಬಂದಿ ಹಾಗೂ ಹೋಮ್ ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ” ಎಂದು ತಿಳಿಸಿದರು.

“ನಗರದಲ್ಲಿ ಕಾನೂನು ವ್ಯವಸ್ಥೆಯ ಮೂಲಕ ಚುನಾವಣೆ ನಡೆಯಲಿದ್ದು, ಸೌಹಾರ್ದತೆಯಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಚುನಾವಣೆ ನಡೆಯಲಿದೆ. ನಾಗರಿಕರಿಗೆ ಭಯಪಡಿಸಿ ಮತಪಡೆಯಲು ಸಾಧ್ಯವಿಲ್ಲ. ನಾವು ಆ ರೀತಿಯಾಗಲು ಅವಕಾಶ ನೀಡುವುದಿಲ್ಲ. ಅಹಿತಕರ ಘಟನೆ ಸೃಷ್ಟಿಸುವಂತವರ ಮೇಲೆ ಪೊಲೀಸ್ ಸಿಬ್ಬಂದಿಯು ನಿಗಾವಹಿಸಿದ್ದಾರೆ” ಎಂದು ಹೇಳಿದರು.

ಸಿ-ವಿಜಿಲ್ ಮೂಲಕ ದೂರು ದಾಖಲಿಸಿ

“ನಗರದಲ್ಲಿ 250ಕ್ಕೂ ಹೆಚ್ಚು ಫ್ಲೆಯಿಂಗ್ ಸ್ಕ್ವಾಡ್ಸ್‌, 230 ವೀಡಿಯೋ ಟೀಮ್, 35 ವೀಡಿಯೋ ವೀವಿಂಗ್ ಟೀಮ್, ಎಲ್ಲದರ ಮೇಲೂ ಹೆಚ್ಚು ನಿಗಾವಹಿಸಲಾಗುವುದು. ಮುಂದಿನ ವಾರ ಮತದಾನ ನಡೆಯಲಿದೆ” ಎಂದರು.

ಈ ಸಂದರ್ಭದಲ್ಲಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಅಧ್ಯಕ್ಷ ಶ್ರೀಧರ್, ಪ್ರಧಾನ ಕಾರ್ಯದರ್ಶಿಯಾದ ಬಿ.ಪಿ.ಮಲ್ಲಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು: ಕೆ ವಿ ಪ್ರಭಾಕರ್

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು. ನೋಟಕ್ಕೆ...

ಬೆಂಗಳೂರು | ಹವಾಮಾನ ಕ್ರಿಯೆಗೆ ಪರಿಣಾಮಕಾರಿ ಕೊಡುಗೆ ನೀಡಲು ಅದರ ಮಹತ್ವ ತಿಳಿಯುವುದು ಅಗತ್ಯ: ಪ್ರೀತಿ ಗೆಹ್ಲೋಟ್

ಹವಾಮಾನ ಕ್ರಿಯೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು, ಮಕ್ಕಳು ಅದರ ಮಹತ್ವ ಮತ್ತು...

ಅರ್ಧದಲ್ಲಿ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರದಲ್ಲೇ ಮುಗಿಸಿ: ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್

ಬೆಂಗಳೂರು ನಗರದಲ್ಲಿ ಅರ್ಧದಲ್ಲೇ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಹಾಗೂ ರಸ್ತೆ ಕತ್ತರಿಸಿರುವ...

Download Eedina App Android / iOS

X